ಮಾನವ ಹಕ್ಕುಗಳ ರಕ್ಷಣಾ ಸಮಿತಿ ಸಂಘಟನೆಯ ತಾಲೂಕು ಕಚೇರಿ ಉದ್ಘಾಟನೆ

ಮಾನವ ಹಕ್ಕುಗಳ ರಕ್ಷಣಾ ಸಮಿತಿ ಸಂಘಟನೆಯ ತಾಲೂಕು ಕಚೇರಿ ಉದ್ಘಾಟನೆ Inauguration of the Human Rights Protection Committee's taluk office

ಲೋಕದರ್ಶನ ವರದಿ 

ಯರಗಟ್ಟಿ 27 : ಪಟ್ಟಣದಲ್ಲಿ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಆರ್ಗನೈಜೇಷನ್ ಸಂಘಟನೆಯ ತಾಲೂಕು ಕಚೇರಿಯ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಸವದತ್ತಿ ಮತಕ್ಷೇತ್ರದ ಬಿಜೆಪಿ ನಾಯಕ ಮಡಿವಾಳಪ್ಪ ಬೀದರಗಡ್ಡಿ ಕಚೇರಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಸಂಘಟನೆಯ ಉದ್ದೇಶ, ಮಾನವ ಹಕ್ಕುಗಳ ರಕ್ಷಣೆ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಕಾನೂನು ಮತ್ತು ಹಕ್ಕುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಸಂಘದ ಉದ್ದೇಶವಾಗಬೇಕು ಹಾಗೂ ತಾಲೂಕು ಕಚೇರಿಯಿಂದ ತಾಲೂಕಿನ ಗ್ರಾಮಗಳ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಮಾನವ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಸಂಘಟನೆಯ ಕಾರ್ಯಗಳಿಗೆ ಮತ್ತಷ್ಟು ಬಲ ಸಿಗಲಿದೆ ಎಂದು ಅಭಿಪ್ರಾಯಪಟ್ಟರು. 

ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರ ಸೇನೆ ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು, ಜುಬೇರ ಜಮಾದಾರ, ಕೂಲಿ ಕಾರ್ಮಿಕರ ಸೇನೆ ಅಲ್ಪಸಂಖ್ಯಾತರ ಮಹಿಳಾ ಘಟಕದ ಅಧ್ಯಕ್ಷರು ನಾಜಮೀನ ಜಮಾದಾರ, ರವಿ ನಾಯ್ಕರ, ಇಮ್ತಿಯಾಜ್ ಖಾದ್ರಿ, ಡಾ. ವಿಶ್ವನಾಥ ತಾವಂಶಿ, ಮಹಾಂತೇಶ ಕಮಲಾಪೂರ, ಮಂಜುನಾಥ ಸಿದ್ದನಗೌಡರ, ಈರ​‍್ಪ ನಾವಿ, ಈರಫಾನ್ ನದಾಫ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.