ಎಲೆಕ್ಟ್ರಿಕ್ ಲ್ಯಾಬ್ ಉದ್ಘಾಟನೆ
Inauguration of the Electric Lab
ಹುಬ್ಬಳ್ಳಿ ಫೆ.21: ವಿದ್ಯಾ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನವೀಕರಿಸಲಾದ ಎಲೆಕ್ಟ್ರಿಕ್ ಲ್ಯಾಬ್ ನ್ನು ಫೆ.20 ರಂದು ಉದ್ಘಾಟಿಸಲಾಯಿತು. ಇದು ಬಹಳ ದಿನಗಳ ಬೇಡಿಕೆಯಾಗಿತ್ತು. 20 ವರ್ಷಗಳ ಹಳೆಯದಾದ ಎಲೆಕ್ಟಿಕ್ ಲ್ಯಾಬ್‌ನ್ನು ಸುಮಾರು ರೂ. 25 ಲಕ್ಷ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನದ ಪ್ರಾಯೋಗಿಕ ಚಟುವಟಿಕೆಗಳನ್ನು ಪೂರಕವಾದ ಸುಸಜ್ಜಿತವಾದ ವಿದ್ಯುತ್ ಉಪಕರಣಗಳನ್ನು ಸಿ.ಎಸ್.ಆರ್.ಯೋಜನೆಯಡಿಯಲ್ಲಿ ಕಿವಾನಿ ಲ್ಯಾಬ್ ಇಂಡಿಯಾ ಲಿ. ಬೆಂಗಳೂರು ಇವರು ಅಭಿವೃದ್ಧಿಗೊಳಿಸಿದ್ದು ಮಕ್ಕಳ ತಂತ್ರಜ್ಞಾನದ ಮಟ್ಟವನ್ನು ಹೆಚ್ಚಿಸಲಿದೆ. ವಿದ್ಯುತ್ ವಿಭಾಗಗಳಲ್ಲಿ ಉದ್ಯೋಗ ಹೊಂದಲು ಲ್ಯಾಬ್ ತಯಾರಾಗಿದೆ. ಕಾರ್ಯಕ್ರಮವನ್ನು ಕಿವಾನಿ ಸಂಸ್ಥೆಯ ಬಿ.ಸತ್ಯಮೂರ್ತಿ.ಎಂ. ಉದ್ಘಾಟಿಸಿದರು. ಪ್ರಾಚಾರ್ಯರಾದ ರವೀಂದ್ರ ದ್ಯಾಬೇರಿ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಎನ್.ಎಚ್.ಆರ್ ರಾಜಣ್ಣ, ಉದ್ಯೋಗ ನಿಯೋಜನಾಧಿಕಾರಿ ಎಸ್.ವಿ.ಚಿತ್ರಗಾರ, ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 