ಭೀಮಸೇನೆ ಕರ್ನಾಟಕ ಸಂಘಟನೆಯ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ
Inauguration of the Bhimasene Karnataka organization and selection of new office bearers
ವಿಜಯಪುರ 21: ಭೀಮಸೇನೆ ಕರ್ನಾಟಕ ಸಂಘಟನೆಯ ಉದ್ಘಾಟನೆ ಹಾಗೂ ತಾಲೂಕು ಸಮಿತಿಗಳ ರಚನಾ ಕಾರ್ಯಕ್ರಮವು ನಗರದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದ ಬಳಿಯಿರುವ ಜಿಲ್ಲಾ ಪ್ರವಾಸಿ ಮಂದಿರದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ಪ್ರಸನ್ನ ಜೆ. ಹಾಗೂ ರಾಜ್ಯ ಉಪಾಧ್ಯಕ್ಷರಾದ ಶ್ರೀ ಯಮುನಪ್ಪ ಚೌಡಕಿ (ಅನೀಲ ಹೊಸಮನಿ) ಅವರ ಮಾರ್ಗದರ್ಶನ ಮತ್ತು ಅನುಮೋದನೆಯೊಂದಿಗೆ, ಸಂಘಟನೆಯನ್ನು ಬಲಪಡಿಸುವ ಹಾಗೂ ಸಮಾಜದ ಶೋಷಿತರು, ತುಳಿತಕ್ಕೊಳಗಾದವರ ಪರವಾಗಿ ಕಾನೂನಾತ್ಮಕ ಹೋರಾಟ ರೂಪಿಸುವ ಉದ್ದೇಶದಿಂದ ವಿವಿಧ ಘಟಕಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಿ ಪತ್ರ ವಿತರಿಸಲಾಯಿತು.
ಸಿಂದಗಿ ನಗರ ಘಟಕದ ಅಧ್ಯಕ್ಷರಾಗಿ ಪರಶುರಾಮ ಬಾಲಪ್ಪ ಮೇಲಿನಮನಿ ಹಾಗೂ ಸದಸ್ಯರಾಗಿ ಪರಶುರಾಮ ಯ. ವಾಲೀಕಾರ ಮತ್ತು ಪ್ರಜ್ವಲ ಶಿವಾನಂದ ಮಲ್ಲಾರಿ ನೇಮಕಗೊಂಡಿದ್ದಾರೆ. ಚಡಚಣ ತಾಲೂಕು ಅಧ್ಯಕ್ಷರಾಗಿ ಚನ್ನಪ್ಪ ಸಿದ್ಧಲಿಂಗ ಕಾಂಬಳೆ ಆಯ್ಕೆಯಾಗಿದ್ದರೆ, ವಿಜಯಪುರ ಜಿಲ್ಲಾ ವಿದ್ಯಾರ್ಥಿ ಘಟಕದ ಉಪಾಧ್ಯಕ್ಷರಾಗಿ ಅವಿನಾಶ ಲಕ್ಷ್ಮಣ ಪೂಜಾರಿ ನೇಮಕವಾಗಿದ್ದಾರೆ. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಸಂವಿಧಾನದ ಆಶಯಗಳಿಗೆ ಬದ್ಧರಾಗಿ, ಸಮಾಜದಲ್ಲಿ ಜಾಗೃತಿ ಮೂಡಿಸುತ್ತಾ, ಸಾರ್ವಜನಿಕರ ಹಕ್ಕುಗಳಿಗೆ ಶ್ರಮಿಸಬೇಕೆಂದು ರಾಜ್ಯ ನಾಯಕರು ಕರೆ ನೀಡಿದರು.
ಸಂಘಟನೆಯ ನಿಯಮಾವಳಿಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸುವ ಭರವಸೆಯೊಂದಿಗೆ ನೂತನ ಪದಾಧಿಕಾರಿಗಳು ತಮ್ಮ ಹೊಣೆಗಾರಿಕೆಯನ್ನು ವಹಿಸಿಕೊಂಡರು. ಮುಖಂಡ ಗೌಡಪ್ಪ ಬಡಿಗೇರ ಮಾತನಾಡಿ, ನಾವೆಲ್ಲರೂ ಸಹೋದರರು ಎನ್ನುವ ಸಿದ್ದಾಂತ ನಮ್ಮದಾಗಬೇಕು ಎಂದರು. ನಂತರ ಸಂಘಟನೆ ಜಿಲ್ಲಾಧ್ಯಕ್ಷ ಡಿಕೆ ದ್ಯಾವಪ್ಪ ಮಾತನಾಡಿ, ಎಲ್ಲ ಹಳ್ಳಿಗಳಲ್ಲೂ ಸಾರಾಯಿ ನಿಷೇಧಕ್ಕೆ ಕರೆ ನೀಡಿದರು. ಇನ್ನೂರ್ವ ಮುಖಂಡ ಪರಶುರಾಮ್ ಗರಸಂಗಿ ಮಾತನಾಡಿ, ಅನ್ಯಾಯವನ್ನು ಖಂಡಿಸಲು ಹಿಂಜರಿಯಬಾರದು ಎಂದರು. ಶರಣು ಕಕ್ಕಳಮೇಲಿ ಕಾರ್ಯಕ್ರಮವನ್ನು ಸುವ್ಯವಸ್ಥಿತವಾಗಿ ನಿರೂಪಿಸಿದರು. ಈ ಸಂದರ್ಭದಲ್ಲಿ ಪರಶುರಾಮ್, ಅವಿನಾಶ್, ಪ್ರಜ್ವಲ್, ಸೂರ್ಯ, ರಾಜು, ಗೌತಮ್, ಅರುಣ್, ಸಿದ್ದಣ್ಣ, ಬಸವರಾಜ್ ಇತರರಿದ್ದರು..
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 