ಬಾರ್ಬ್‌ಡೋಸ್‌ನಲ್ಲಿ 68 ನೇ ಕಾಮನ್‌ವೆಲ್ತ್ ಸಮಾವೇಶ ಉದ್ಘಾಟನೆ: ಬಸವರಾಜ ಹೊರಟ್ಟಿ ಭಾಗಿ.
Inauguration of the 68th Commonwealth Conference in Barbados: Basavaraja Horatti participated.
ಲೋಕದರ್ಶನ ವರದಿ
ಬಾರ್ಬ್‌ಡೋಸ್‌ನಲ್ಲಿ 68 ನೇ ಕಾಮನ್‌ವೆಲ್ತ್ ಸಮಾವೇಶ ಉದ್ಘಾಟನೆ: ಬಸವರಾಜ ಹೊರಟ್ಟಿ ಭಾಗಿ.
ಬೆಂಗಳೂರು/ಹುಬ್ಬಳಿ 09: ಕೆರೆಬಿಯನ್ ಪೂರ್ವ ದ್ವೀಪ ರಾಷ್ಟ್ರವಾಗಿರುವ ಬ್ರಿಟಿಷ್ ಕಾಮನ್‌ವೆಲ್ತ್ ಗಣರಾಜ್ಯವಾಗಿರುವ ಬಾಬ್ಡೋರ್ಸ್ ದೇಶದ ರಾಜಧಾನಿ ಬ್ರಿಜ್ಡಟೌನ್ ನಗರದಲ್ಲಿ ಅಕ್ಟೋಬರ್ 06 ರಿಂದ ಆರಂಭಗೊಂಡು 10 ನೇ ತಾರೀಖಿನವರೆಗೆ ನಡೆಯುತ್ತಿರುವ “68 ನೇ ಕಾಮನ್‌ವೆಲ್ತ್ ಸಂಸದೀಯ ಸಮಾವೇಶ” ದ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಶ್ರೀ ಬಸವರಾಜ ಹೊರಟ್ಟಿ, ಪಾಲ್ಗೊಂಡಿದ್ದಾರೆ. ಕರ್ನಾಟಕ ವಿಧಾನಸಭಾಧ್ಯಕ್ಷ ಶ್ರೀ ಯು.ಟಿ. ಖಾದರ್, ಲೋಕಸಭಾಧ್ಯಕ್ಷ ಒಂ ಬಿರ್ಲಾ, ರಾಜ್ಯಸಭೆಯ ಉಪಸಭಾಪತಿ ಶ್ರೀ ಹರಿವಂಶ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಸಮಾವೇಶದಲ್ಲಿ ಜಗತ್ತಿನ ವಿವಿಧ ದೇಶಗಳ ಪ್ರತಿನಿಧಿಗಳು, ಲೋಕಸಭಾಧ್ಯಕ್ಷರು, ರಾಜ್ಯಸಭೆಯ ಉಪ ಸಭಾಪತಿಗಳು, ವಿವಿಧ ರಾಜ್ಯಗಳ ವಿಧಾನ ಸಭೆಅಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳು, ಸಚಿವರುಗಳು, ರಾಜಕೀಯತಜ್ಞರು, ನೀತಿ ನಿರೂಪಕರು, ರಾಜಕೀಯ ಮುತ್ಸದ್ದಿಗಳು ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಂಡಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 