ಬಸವೇಶ್ವರ ದೇವಸ್ಥಾನದ ನೂತನ ಉಗ್ರಾಣ ಕಟ್ಟಡ ಉದ್ಘಾಟನೆ
Inauguration of new storage building of Basaveshwara temple
ನೇಸರಗಿ, 24 ; ಮೊಹರೆ ಗ್ರಾಮದ ಅಭಿವೃದ್ಧಿಗೆ ತಾವು ಸದಾ ಕೈಜೋಡಿಸುತ್ತಾ ಬಂದಿದ್ದೇನೆಂದು ಮಾಜಿ ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.
ಸಮೀಪದ ಮೊಹರೆ ಗ್ರಾಮದ ಬಸವೇಶ್ವರ ದೇವಸ್ಥಾನದ ನೂತನ ಉಗ್ರಾಣ ಕಟ್ಟಡ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ತಾವು ಕಿತ್ತೂರಿನ ಶಾಸಕರಾಗಿದ್ದಾಗ ಚನ್ನವೃಷಬೇಂದ್ರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಯಿತು. ಸದ್ಯದ ಶಾಸಕರು ಆ ಯೋಜನೆ ಅನುಷ್ಠಾನಗೊಳಿಸಬೇಕೆಂದರು. ಸಾನಿಧ್ಯ ವಹಿಸಿದ ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮೀಜಿ ಮಾತನಾಡಿ, ಮೊಹರೆ ಗ್ರಾಮವು ಧಾರ್ಮಿಕ ಕ್ಷೇತ್ರದಲ್ಲಿ ಹಿಂದಿನಿಂದಲೂ ಪ್ರಸಿದ್ದಿ ಪಡೆದಿದೆ. ಇಲ್ಲಿಯ ಜನರು ದೈವ ಭಕ್ತರಿದ್ದಾರೆ. ಬಸವೇಶ್ವರ ದೇವಸ್ಥಾನ ನೂತನ ಉಗ್ರಾಣ ಕಟ್ಟಡ ಉದ್ಘಾಟಿಸಿದ್ದು ಸೂಕ್ತವಾಗಿದೆ ಎಂದರು.ಕಾರ್ಯಕ್ರಮ ದಲ್ಲಿ ಮಾಜಿ ತಾ.ಪಂ ಸದಸ್ಯ ಶ್ರೀಶೈಲ ಕಮತಗಿ,ಮತ್ತಿಕೊಪ್ಪ ಪಿಕೆಪಿಎಸ್ ಅಧ್ಯಕ್ಷ ಮಹಾಂತೇಶ ಮೊಹರೆ(ಸಿದ್ದನ್ನವರ), ಉಪಾಧ್ಯಕ್ಷ ಅಡಿವೆಪ್ಪ ಹೊಸಮನಿ, ಗ್ರಾ.ಪಂ ಸದಸ್ಯ ಚನಗೌಡ ಪಾಟೀಲ, ಯಶವಂತಗೌಡ ಪಾಟೀಲ, ಶಿವನಪ್ಪ ಇಂಚಲ, ರಾಚಯ್ಯ ಪೂಜೇರಿ, ನಿಂಗಪ್ಪ ಬೂದಿಹಾಳ, ಆಡಿವೆಪ್ಪ ದೇಯಣ್ಣವರ, ಗಂಗಪ್ಪ ತಳವಾರ, ಮಲ್ಲಯ್ಯ ಪೂಜೇರಿ, ಮಲ್ಲಿಕಾರ್ಜುನ ಹುಬ್ಬಳ್ಳಿ, ಶಿವಲಿಂಗಯ್ಯ ಹಿರೇಮಠ, ಸಂಗಪ್ಪ ಗಡದವರ, ಮಾರುತಿ ಕಲಗುಡಿ, ಶಂಕರಗೌಡ ಪಾಟೀಲ, ಚೇತನ ಪಾಟೀಲ, ಜೋತಿಭಾ ಬಡಿಗೇರ, ಶ್ರೀ ಬಸವೇಶ್ವರ ಯುವ ಸೇನೆ ಕಾರ್ಯಕರ್ತರು ಉಪಸ್ಥಿತರಿದ್ದರು.
ಅಡಿವೆಪ್ಪ ಬೂದಿಹಾಳ ಸ್ವಾಗತಿಸಿದರು. ರಾಜಶೇಖರ ಗೆಜ್ಜಿ ನಿರೂಪಿಸಿ, ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 