ಅಂಕಲಿ ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡದ ಉದ್ಘಾಟನೆ
Inauguration of new Anganwadi building in Ankali village
ಲೋಕದರ್ಶನ ವರದಿ
ಮಾಂಜರಿ 20 : ಗ್ರಾಮೀಣ ಭಾಗದ ಬಡ ಕುಟುಂಬ ಮಕ್ಕಳಿಗೆ ಗುಣಾತ್ಮಕದ ಶಿಕ್ಷಣ ದೊರೆಯಬೇಕೆಂದು ಶಿಕ್ಷಣ ಕ್ರಾಂತಿ ಮಾಡಿರುವ ಪದ್ಮಶ್ರೀ ಡಾ ಪ್ರಭಾಕರ್ ಕೋರೆ ಇವರ ಕಾರ್ಯ ಜನಮಚ್ಚುವಂತಾಗಿದೆ ಅವರ ಶೈಕ್ಷಣಿಕ ಕ್ರಾಂತಿಯ ಮುಖಾಂತರ ಎಂದು ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಪ್ರತಿಯೊಂದು ಕುಟುಂಬದ ಬಡ ಮಕ್ಕಳಿಗೆ ಆಧುನಿಕ ತಂತ್ರಜ್ಞಾನದ ಶಿಕ್ಷಣ ದೊರೆಯುವಂತಾಗಿದೆ ಎಂದು ಚಿದಾನಂದ ಕೋರೆ ಸಹಕಾರಿಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಕೋರೆ ಹೇಳಿದರು.
ಅವರು ಇಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಪದ್ಮಶ್ರೀ ಡಾ ಪ್ರಭಾಕರ್ ಕೋರೆ ಇವರು ದಾನ ನೀಡಿದ ತಮ್ಮ ಸ್ವಂತ ಜಾಗದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಖಾಂತರ ಮತ್ತು ಗ್ರಾಮ ಪಂಚಾಯಿತಿಯ ನೆರಗ ಯೋಜನೆಯ ಮುಖಾಂತರ ನಿರ್ಮಿಸಲಾದ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸುರೇಶ್ ಪಾಟೀಲ್ ರನಜಿತ್ ಶಿರಶೆಟ್ ಶಿವಾಜಿ ಕೋಟಿವಾಲೆ ವಿಕಾಸ್ ಪಾಟೀಲ್ ಹಾಜರಿದ್ದರು.
ನೂತನವಾಗಿ ನಿರ್ಮಿಸಿದೆ ಅಂಗನವಾಡಿ ಕಟ್ಟಡದ ಉದ್ಘಾಟನೆಯನ್ನು ಮಲ್ಲಿಕಾರ್ಜುನ್ ಕೋರೆ ಸುರೇಶ್ ಪಾಟೀಲ್ ಶಿವಾಜಿ ಕೋಟಿ ವಾಲೆ ವಿಕಾಸ್ ಪಾಟೀಲ್ ಇವರ ಹಸ್ತದಿಂದ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಪಾಂಡುರಂಗ ವಡ್ಡರ್ ಪಾಂಡುರಂಗ ಸನದಿ ಅಲ್ಲಾ ಬಾಕ್ಸ್ ಪಟವೇಗಾರ ವಿವೇಕ್ ಕಮತೆ ಕೃಷ್ಣ ಕಿಲಿಕತ್ ಗ್ರಾಮ ಅಭಿವೃದ್ಧಿ ಅಧಿಕಾರಿಗಳಾದ ವಿನೋದ್ ಭಂಡಾರಿ ಹಾಗೂ ಇನ್ನುಳಿದ ಅಂಗನವಾಡಿ ಕಾರ್ಯಕರ್ತರು ಗ್ರಾಮ ಪಂಚಾಯತ್ ಸದಸ್ಯರು ಹಾಜರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 