ಬ್ಯಾಹಟ್ಟಿಯ ದೊಡ್ಡಹಳ್ಳಕ್ಕೆ ನೂತನ ಸೇತುವೆ ಉದ್ಘಾಟನೆ
ಬ್ಯಾಹಟ್ಟಿಯ ದೊಡ್ಡಹಳ್ಳಕ್ಕೆ ನೂತನ ಸೇತುವೆ ಉದ್ಘಾಟನೆ
ಹುಬ್ಬಳ್ಳಿ 06: ರೈತರ ಬಹುದಿನ ಬೇಡಿಕೆಯಾದ ಬ್ಯಾಹಟ್ಟಿ-ಕಿರೆಸೂರ-ಇಂಗಳಹಳ್ಳಿ ರಸ್ತೆಯಲ್ಲಿರುವ ದೊಡ್ಡಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ಸೇತುವೆಯನ್ನು ಉದ್ಘಾಟಿಸಿ ರೈತರು ಇದರ ಸದುಪಯೋಗವನ್ನು ಪಡೆಯಬೇಕೆಂದು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು.
ಅವರು ಇಂದು ನವಲಗುಂದ ವಿಧಾನಸಭಾ ಕ್ಷೇತ್ರದ ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿ ಗ್ರಾಮದ ಹತ್ತಿರ ಇರುವ ದೊಡ್ಡಹಳ್ಳಕ್ಕೆ ಸೇತುವೆ ಲೋಕಾರೆ್ಣ ಮಾಡಿ ಮಾತನಾಡಿದ ಅವರು ಬ್ಯಾಹಟ್ಟಿ-ಕಿರೆಸೂರ-ಇಂಗಳಹಳ್ಳಿ ರಸ್ತೆಯಲ್ಲಿ ಗ್ರಾಮದ ರೈತರೆಲ್ಲರೂ ತಮ್ಮ ಜಮೀನುಗಳಿಗೆ ಹೋಗಿ ಬರಲು ಮಳೆ ಬಂದಾಗ ಹಳ್ಳ ಕಟ್ಟಿ ಓಡಾಡಲು ಸಾಧ್ಯವಾಗುತ್ತಿರಲಿಲ್ಲ. ಈ ಸೇತುವೆ ನಿರ್ಮಾಣಕ್ಕಾಗಿ ಕಳೆದ 10-15 ವರ್ಷಗಳಿಂದ ಗ್ರಾಮಸ್ಥರು ಅಧಿಕಾರದಲ್ಲಿದ್ದ ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಿದ್ದರೂ ಅದು ಕೇವಲ ಭರವಸೆಯಾಗಿತ್ತೇ ಹೊರತು ಸಮಸ್ಯೆಗೆ ಯಾರೂ ಸ್ಪಂಧಿಸಿರಲಿಲ್ಲ. ಸೇತುವ ನಿರ್ಮಿಸಿದ ನವಲಗುಂದ ವಿಧಾನಸಭಾ ಕ್ಷೇತ್ರ ಶಾಸಕ ಎನ್.ಹೆಚ್. ಕೋನರಡ್ಡಿ ಅವರನ್ನು ರೈತರು, ಗ್ರಾಮ ಪಂಚಾಯತನ ಎಲ್ಲ ಸದಸ್ಯರು ಎಲ್ಲ ರೈತರ ಪರವಾಗಿ ಸನ್ಮಾನಿಸಿದರು.
ಇದರೊಂದಿಗೆ ಹೆಬಸೂರ ದಿಂದ ಬ್ಯಾಹಟ್ಟಿ ಸುಳ್ಳದ ವರೆಗಿನ ರಸ್ತ ಸಂಪೂರ್ಣ ಹದಗೆಟ್ಟು ಕಳೆದ 8 ವರ್ಷಗಳಿಂದ ಸಾರ್ವಜನಿಕರು ವ್ಹಾಯಾ ಹುಬ್ಬಳ್ಳಿ ಮೂಲಕ ಪ್ರಾಣಿಸುವಂತಾಗಿತ್ತು. ಅಧಿಕಾರಕ್ಕೆ ಬಂದ 1 ವರ್ಷದಲ್ಲಿ ರಸ್ತೆ ಡಾಂಬರೀಕರಣ ಮಾಡಿ ಬ್ಯಾಹಟ್ಟಿಯಿಂದ ಕಾಲುವೆಯಿಂದ ಬ್ಯಾಹಟ್ಟಿ ಗ್ರಾಮದವರೆಗೆ ಬಾಕಿ ಉಳಿದ ರಸ್ತೆಗೆ ಮತ್ತೇ ರೂ. 3.00 ಕೋಟಿ ಅನುದಾನ ಬಿಡುಗಡೆ ಮಾಡಿಸಿ ಸಂಚಾರಕ್ಕೆ ಮುಕ್ತಗೊಳಿಸಲು ನಿರ್ಧರಿಸಿದ್ದೇನೆ ಎಂದರು. ರೈತರು ಬ್ಯಾಹಟ್ಟಿ-ಕುಸುಗಲ್ಲ ಹಳೇ ರಸ್ತೆ, ಬ್ಯಾಹಟ್ಟಿ-ಹಣಸಿ, ಬ್ಯಾಹಟ್ಟಿ-ಮೊರಬ ರಸ್ತೆ ಮುಂತಾದ ರಸ್ತೆಗಳನ್ನು ದುರಸ್ಥಿ ಮಾಡಬೇಕೆಂದರು. ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಹೆಚ್ಚುವರಿಗೆ ಕೊಠಡಿ ನಿರ್ಮಿಸಲು ಅನುದಾನ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು.
ಬ್ಯಾಹಟ್ಟಿ ಗ್ರಾಮದ ಅಭಿವೃದ್ಧ ಕೆಲಸಗಳನ್ನು ಸಹಿಸದೇ ಕೆಲವು ವಿರೋಧ ಪಕ್ಷದ ಕೆಲ ಮುಖಂಡರು ಮಾತನಾಡುತ್ತಿದ್ದು ಅವರ ಬಗ್ಗೆ ಟೀಕೆ ಮಾಡದೇ ಅಭವೃದ್ಧಿ ಮಾಡುವುದರ ಮೂಲಕ ಅವರಿಗೆ ಉತ್ತರಿಸುವದೇ ನನ್ನ ಕೆಲಸ ಎಂದು ಕೋನರಡ್ಡಿ ಹೇಳಿದರು.
ಬೆಣ್ಣೆ ಹಳ್ಳ ಅಗಲೀಕರಣ ಕಾಮಗಾರಿಗೆ 200 ಕೋಟಿ ಅನುದಾನ :
ಉತ್ತರ ಕರ್ನಾಟಕ ಪ್ರಮುಖ ಬೇಡಿಕೆಯಾದ ಬೆಣ್ಣಿಹಳ್ಳ ಅಗಲೀಕರಣ ಮಾಡಿ ರೈತರ ಜಮೀನಿಗೆ ಹಾಗೂ ಗ್ರಾಮಗಳಿಗೆ ನೀರು ನುಗ್ಗದಂತೆ ತಡೆಗಟ್ಟುವ ಕಾಮಗಾರಿಗೆ 2024-25ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕಾರ್ಯೋನ್ಮುಖರಾಗಿ ಡಿಪಿಆರ್ ತಯಾರಿಸಲು ಕೆ.ಎನ್.ಎನ್.ಎಲ್ ಅಧಿಕಾರಿಗಳಿಗೆ ಸೂಚನೆ ನೀಡಿ 3 ತಿಂಗಳ ಒಳಗಾಗಿ ಟೆಂಡರ್ ಅಂತಿಮಗೊಳಿಸಿ ಅವರಿಂದಲೇ ಕಾಮಗಾರಿಗೆ ಚಾಲನೆ ನೀಡಲಾಗುವದು. ಈ ರೀತಿ ಹೆಚ್ಚಿನ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡುತ್ತಿದ್ದು ಕಾಂಗ್ರೆಸ್ ಪಕ್ಷ ಘೋಷಿಸಿದ ಯಾವುದೇ ಗ್ಯಾರೆಂಟಿ ನಿಲ್ಲಿಸದೇ ಎಲ್ಲ ಅಭಿವೃದ್ಧಿ ಕಾಮಗಾರಿ ಮಾಡುವ ದಿಟ್ಟ ಸರ್ಕಾರ ಇದೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಅಭಿನಂದಿಸಿ ಕೋನರಡ್ಡಿ ಮಾತನಾಡಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಬ್ಯಾಹಟ್ಟಿ ಹಿರೇಮಠದ ಮರಳುಸಿದ್ದ ಮಹಾಸ್ವಾಮಿಗಳು ವಹಿಸಿ ಕೋನರಡ್ಡಿ ಅವರ ಅಭಿವೃದ್ಧಿ ಕಾಮಗಾರಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜೀನೀಯರ ದೇವರಾಜ ಶಿಗ್ಗಾವಿ, ಎಇ ಸೋಳಂಕೆ, ಮುಖಂಡರುಗಳಾದ ವೀರನಗೌಡ್ರ ಮರಿಗೌಡ್ರ, ಗ್ರಾ.ಪಂ. ಅಧ್ಯಕ್ಷೆ ಮಹಾದೇವಿ ಹಂಗರಕಿ, ಉಪಾಧ್ಯಕ್ಷೆ ಮಧು ಹುಬ್ಬಳ್ಳಿ, ಸದಸ್ಯರುಗಳಾದ ಗಂಗಮ್ಮ ರೂಗಿ, ನಿರ್ಮಲಾ ದ್ಯಾವನಗೌಡ್ರ, ಅನಸಮ್ಮ ತಳವಾರ, ದವಲಸಾಬ ಅಣ್ಣಿಗೇರಿ, ಭೂನ್ಯಾಯಮಂಡಳಿ ಸದಸ್ಯ ಸಚಿನ್ ಹಿರೇಗೌಡ್ರ, ಗ್ರಾಮಸ್ಥರಾದ ಪಮ್ಮು ಯಡ್ರಾವಿ, ಬಸನಗೌಡ ತಿರ್ಲಾಪುರ, ಸಂತೋಷ ಜೀವನಗೌಡ್ರ, ಸಮೀರ ಪೀರಖಾನ, ಶಿವಾನಂದ ನವಲೂರ, ನಿಂಗಪ್ಪ ಗುಡಿ, ಅಜ್ಜುಗೌಡ ನವಲೂರ, ಸೋಮಣ್ಣ ಬೆಂಗೇರಿ, ಪ್ರಭು ರಾಯನಗೌಡ್ರ, ಸರ್ಕಾರಿ ಪಿಯು ಕಾಲೇಜು ಉಪಾಧ್ಯಕ್ಷ ರಾಜು ಕಪಲಿ, ಅಶೋಕ ಕಾಳಿ ಶಿವಾನಂದ ಹೂಗಾರ, ಮಲ್ಲಪ್ಪ ಗುಡಿ, ಶಿವಣ್ಣ ಕಿರೇಸೂರ, ರಾಜೇಸಾಬ ನಧಾಪ, ಬಸನಗೌಡ ದ್ಯಾವನಗೌಡ್ರ, ಗೀರೀಶ ಹಂಗರಕಿ ಇತರರು ಉಪಸ್ಥಿತರಿದ್ದರು.