ಬಾಲಕರ ಸರಕಾರಿ ಪ್ರೌಢಶಾಲೆಯಲ್ಲಿ ನನ್ನ ಆವೃತ್ತಿ ನನ್ನ ಆಯ್ಕೆ ಕಾರ್ಯಕ್ರಮ ಉದ್ಘಾಟನೆ

Inauguration of My Edition My Choice Program at Boys Government High School

ಬಾಲಕರ ಸರಕಾರಿ ಪ್ರೌಢಶಾಲೆಯಲ್ಲಿ ನನ್ನ ಆವೃತ್ತಿ ನನ್ನ ಆಯ್ಕೆ ಕಾರ್ಯಕ್ರಮ ಉದ್ಘಾಟನೆ

ಕೊಪ್ಪಳ 19:  ನಗರದ ಬಾಲಕರ ಸರ್ಕಾರಿ ಪ್ರೌಢಶಾಲೆ ಕೊಪ್ಪಳದಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಪಿ ಎಂ ಯು ಅನಾಹತ ಯುನೈಟೆಡ್ ಎಫರ್ಟ್ಸ ಪ್ರತಿಷ್ಠಾನ ಬೆಂಗಳೂರು ಇವರ ಸಹಯೋಗದಲ್ಲಿ ಅನುಷ್ಠಾನಗೊಳ್ಳುತ್ತಿರುವ ನನ್ನ ವೃತ್ತಿ ನನ್ನ ಆಯ್ಕೆ ಕಾರ್ಯಕ್ರಮವನ್ನು ಉದ್ಘಾಟನೆಯನ್ನು ಮಾಡಲಾಯಿತು. ಇದರ ಅಧ್ಯಕ್ಷತೆಯನ್ನು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಚಾರ್ಯ ಮೊಮ್ಮದ್ ಅಬ್ದುಲ್ ಕಯುಮ್ ವಹಿಸಿಕೊಂಡಿದ್ದರು ಮುಖ್ಯ ಅತಿಥಿಗಳಾಗಿ ನನ್ನ ವೃತ್ತಿ ನನ್ನ ಆಯ್ಕೆ ಕಾರ್ಯಕ್ರಮದ ಡಯಟ್ ನೋಡಲ್ ಅಧಿಕಾರಿ  ಪನಮೇಶಲು ಅತಿಥಿಗಳಾಗಿ ಹಾಗೂ ವಿಭಾಗಿಯ ವ್ಯವಸ್ಥಾಪಕರು ಕಲಬುರ್ಗಿ ನಾಗರಾಜ್ ಯಾದವ್ ಮತ್ತು ಶಾಲಾ ಸಿಬ್ಬಂದಿಯವರು ವಹಿಸಿಕೊಂಡಿದ್ದರು.  

ಪ್ರಾಸ್ತಾವಿಕವಾಗಿ  ಮಾತನಾಡಿದ ಡಯಟ್ ನೋಡಲ್ ಅಧಿಕಾರಿಗಳಾದ ಪನಮೇಶಲು ಇವರು ಈ ಕಾರ್ಯಕ್ರಮವನ್ನು ಎಂಟನೇ ಮತ್ತು ಒಂಬತ್ತನೇ ತರಗತಿಯವರಿಗೆ 10ನೇ ತರಗತಿ ನಂತರ ಮುಂದೇನು ಎಂಬುದರ ಬಗ್ಗೆ ನಿಮಗೆ ವಿವರವಾಗಿ ಜ್ಞಾನವನ್ನು ಈ ಕಾರ್ಯಕ್ರಮದ ಮೂಲಕ ನಿಮಗೆ ಸಹಾಯವಾಗುತ್ತದೆ ಎಂದು ವಿವರಿಸಿದರೂ, ಅತಿಥಿಯಾಗಿ ಆಗಮಿಸಿದ  ನಾಗರಾಜ್ ಯಾದವ್ ಅವರು  ನನ್ನ ವೃತ್ತಿ ನನ್ನ ಆಯ್ಕೆ ಕಾರ್ಯಕ್ರಮ ಪ್ರತಿಯೊಂದು ವಿದ್ಯಾರ್ಥಿಗಳಿಗೆ ತಮ್ಮ ಅಸಕ್ತಿಯನ್ನು ಎಂಬುದರ ಬಗ್ಗೆ ತಿಳಿದುಕೊಳ್ಳುವ ಜೊತೆಗೆ ಈ ಕಾರ್ಯಕ್ರಮದ ಕಾರ್ಯ ಪುಸ್ತಕದಲ್ಲಿ ಇರುವ ವೇವಿವಿಧ ದ ವಲಯಗಳಾದ ಕೃಷಿ ಮತ್ತು ಆಹಾರ ಸಾಮಾಜಿಕ ಸೇವಾ ವಲಯ ಆಟೋಮೊಟಿವ್ ಇತ್ಯಾದಿ ಹನ್ನೆರಡು ವಲಯಗಳ ವಿಷಯಗಳ ಬಗ್ಗೆ ಮಕ್ಕಳು ತಿಳಿದುಕೊಳ್ಳಲು ಸಹಾಯವಾಗುತ್ತದೆ ಎಂದರು. 

ಇಂಗ್ಲಿಷ್ ಶಿಕ್ಷಕರಾದ ಎಂ ಹೆಚ್ ಕುರಿ ಮಾತನಾಡಿ ವೃತ್ತಿ ಶಿಕ್ಷಣ ಮಕ್ಕಳಿಗೆ ಜೀವನ ತುಂಬಾ ಅಗತ್ಯವಾಗಿರುತ್ತದೆ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದು  ಹೇಳಿದರು, ಹಿರಿಯ ಶಿಕ್ಷಕರು ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಮಾತನಾಡಿದರು. ಮಕ್ಕಳ ಭವಿಷ್ಯಕ್ಕೆ ವೃತ್ತಿ ಶಿಕ್ಷಣ ತುಂಬಾ ಸಹಾಯಕವಾಗುವುದು ಈ ಪುಸ್ತಕದಲ್ಲಿ ನೀಡಿರುವ ವಿಷಯವನ್ನು ತಿಳಿದುಕೊಂಡು ನಿಮ್ಮ ವೃತ್ತಿಯನ್ನು  ಆಯ್ಕೆ ಮಾಡಿಕೊಳ್ಳಿ ಎಂದು ಪ್ರಶಸ್ತಿ ಪುರಸ್ಕೃತ ನಿವೃತ್ತಿ ವೃತ್ತಿ ಶಿಕ್ಷಕಎ ಎ ನದಾಫ್  ಈ ಸಂದರ್ಭದಲ್ಲಿ ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿಕೊಂಡ  ಮೊಮ್ಮದ್ ಅಬ್ದುಲ್ ಕಯುಮ್  ಇವರು ಮಾತನಾಡಿ ನನ್ನ ವೃತ್ತಿ ನನ್ನ ಆಯ್ಕೆ ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ಮಕ್ಕಳಿಗೆ ವೃತ್ತಿ ಜೀವನಕ್ಕೆ ಮಾರ್ಗದರ್ಶನವನ್ನು ನೀಡುತ್ತದೆ ಎಂಬುದಕ್ಕೆ ಸೂಕ್ತ ದಾರಿಯನ್ನು ತೋರಿಸುತ್ತದೆ ಎಂದರು  ಈ  ಕಾರ್ಯಕ್ರಮದಲ್ಲಿ ತರಬೇತಿದಾರ ನಾಗಾರ್ಜುನ್ ಸಿಂಗ್  ಮತ್ತು ಮಿರ್ಜಾ ಅಸ್ಲಾಂ ಬೇಗ್  ಗಂಗಾಧರಯ್ಯ ಹಿರೇಮಠ,  ಸಿದ್ದಪ್ಪ ಮೇಟಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು