ಎಲ್ ಕೆಜಿ ಮತ್ತು ಯುಕೆಜಿ ಉದ್ಘಾಟನೆ

ಎಲ್ ಕೆಜಿ ಮತ್ತು ಯುಕೆಜಿ ಉದ್ಘಾಟನೆ Inauguration of LKG and UKG

ಲೋಕದರ್ಶನ ವರದಿ 

ಧಾರವಾಡ 29: ಎಲ್ ಕೆ ಜಿ ಮತ್ತು ಯು ಕೆ ಜಿ  ತರಗತಿಗಳು ಹಳ್ಳಿ ಮಕ್ಕಳಿಗೆ ಉತ್ತಮ ಕಲಿಕೆಗೆ  ಸೂಕ್ತವಾಗಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಯ ಹೆಚ್ಚಳವಾಗಲಿದೆ ಎಂದು ಧಾರವಾಡ ಗ್ರಾಮೀಣ ಕೇತ್ರ ಸಮನ್ವಯಾಧಿಕಾರಿ ಕುಮಾರ ಕೆ ಎಫ್ ಹೇಳಿದರು.  ಧಾರವಾಡ ತಾಲೂಕಿನ ಉರ್ದು ಗರಗ ಕ್ಲಸ್ಟರ್ ವ್ಯಾಪ್ತಿಯ ಕೋಟೂರು ಉರ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಆರಂಭಗೊಂಡ ಎಲ್ಕೆಜಿ ಮತ್ತು ಯುಕೆಜಿ ತರಗತಿಯ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಹಳ್ಳಿಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಡವರಿಗೆ ತಮ್ಮ ಮಕ್ಕಳಿಗೆ ಎಲ್ಕೆಜಿ ಮತ್ತು ಯುಕೆಜಿ ಶಿಕ್ಷಣ ಕೊಡಿಸುವುದು ಗಗನ ಕುಸುಮವಾಗಿತ್ತು. ಈಗ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣವು ಉತ್ತಮವಾಗಿ ದೊರಕುತ್ತಿದೆ. ಪೋಷಕರು ಸರ್ಕಾರಿ ಶಾಲೆಯಲ್ಲಿನ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದರು.   

ಗರಗ ಕ್ಲಸ್ಟರ್ ಉರ್ದು ಸಿಆರಪಿಯಾದ ಬಿ ಜಿ ಖುದ್ದುನವರ ಮಾತನಾಡುತ್ತಾ ಬಡ ಹಾಗೂ ಗ್ರಾಮೀಣ ಭಾಗದ ಪ್ರತಿಯೊಂದು ಮಗುವಿಗೂ ಆರಂಭಿಕ ಹಂತದಲ್ಲೇ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ಸಿಕ್ಕಾಗ ಮಾತ್ರ ಅವರ ಸರ್ವತೋಮುಖ ಬೆಳವಣಿಗೆ ಸಾಧ್ಯ. ಎಲ್ಕೆಜಿ, ಯುಕೆಜಿ ಕಲಿಕೆಯ ಪರಿಣಾಮದ ಸಾಧ್ಯತೆಗಳ ಬಗ್ಗೆ ವಿವರಿಸಿದರು. ಹಿಂದೆ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಮಾತ್ರವೇ ಮಕ್ಕಳಿಗೆ ಕಲಿಕೆಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಎಲ್ಕೆಜಿ, ಯುಕೆಜಿ ತರಗತಿಗಳಿಗಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ದಾಖಲು ಮಾಡುತ್ತಿದ್ದರು. ಆದರೆ ಇನ್ಮುಂದೆ ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಹಾಗೂ ಯುಕೆಜಿ ತರಗತಿಗಳು ಶುರುವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂದು ಮನವಿ ಮಾಡಿದರು.  

ಮುಖ್ಯಾಧ್ಯಾಪಕರಾದ ಎಸ್ ಎ ಖಾನ್ ಮಾತನಾಡಿ ಮಕ್ಕಳು ಓಪಚಾರಿಕ ಕಲಿಕೆಯ ಪ್ರಪಂಚಕ್ಕೆ ಕಾಲಿಡುತ್ತಿದ್ದಂತೆ ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಎಲ್ಕೆಜಿ, ಯುಕೆಜಿ ಅನುವು ಮಾಡಿಕೊಡುತ್ತದೆ? ನಾವೇಲ್ಲರೂ ಸೇರಿ ಮಕ್ಕಳ ಕಲಿಕೆಗೆ ಬದ್ಧರಾಗೊಣಾ ಎಂದರು.  ಎಲ್ಕೆಜಿ ಮತ್ತು ಯುಕೆಜಿ ಮಕ್ಕಳನ್ನು, ಪ್ರಾಥಮಿಕ ಶಾಲಾ ಮಕ್ಕಳು ನೃತ್ಯದ  ಮೂಲಕ ಸ್ವಾಗತ ಮಾಡಿದರು.  ಇದು ಎಲ್ಲರ ಗಮನ ಸೇಳೆಯಿತು.  ಎಸ್ ಡಿ ಎಮ ಸಿ ಅಧ್ಯಕ್ಷರು ಸುಲೇಮಾನ ಹಂಗರಕಿ  ಹಾಗೂ ಸರ್ವ ಸದಸ್ಯರು ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ತರಗತಿಗಳನ್ನು ತೆರೆಯಲು ಮುಂದಾಗಿರುವ ಸರ್ಕಾರದ ನಿರ್ಧಾರ ಸಂತೋಷ ತಂದಿದೆ ಎಂದು ಶುಭ ಕೋರಿದರು. ಇದೇ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿ ಜಿಲಾನಿ ಆಲಮ್ಮನವರ ಮಕ್ಕಳಿಗೆ 15 ಡೆಸ್ಕುಗಳನ್ನು ದೇಣಿಗೆ ನೀಡಿದರು.  ಎಸ್‌ಡಿಎಮಸಿ ಅಧ್ಯಕ್ಷರು ಸುಲೇಮಾನ ಹಂಗರಕಿ  ಹಾಗೂ ಸರ್ವ ಸದಸ್ಯರು, ಮುಖ್ಯಾಧ್ಯಾಪಕರು ಹಾಗೂ ಸರ್ವ ಶಿಕ್ಷಕವೃಂದ, ಊರಿನವರು ಹಾಗೂ ಪಾಲಕರು ಉಪಸ್ಥಿತರಿದ್ದರು,