ಹೊನ್ನನಾಗದೇವತಾ ದೇವಾಲಯದ ಉದ್ಘಾಟನೆ : ಮೂರ್ತಿ ಪ್ರತಿಷ್ಠಾಪನೆ ಧಾರ್ಮಿಕ ಕಾರ್ಯಕ್ರಮಗಳು
Inauguration of Honnanagadevata Temple: Idol installation, religious programs
ಹೊನ್ನನಾಗದೇವತಾ ದೇವಾಲಯದ ಉದ್ಘಾಟನೆ : ಮೂರ್ತಿ ಪ್ರತಿಷ್ಠಾಪನೆ ಧಾರ್ಮಿಕ ಕಾರ್ಯಕ್ರಮಗಳು.
ರಾಣೇಬೆನ್ನೂರು : 16 ತಾಲೂಕಿನ ಇತಿಹಾಸ ಪ್ರಸಿದ್ಧ ಐತಿಹಾಸಿಕ ಹಿನ್ನೆಲೆಯುಳ್ಳ, ಹೊನ್ನತ್ತಿ ಗ್ರಾಮದ ಬಳಿಯ ( ಹೇಮಾವತಿ ಪಟ್ಟಣ ) ಹೊನ್ನ ನಾಗದೇವತಾ ದೇವಸ್ಥಾನ ಸಮಿತಿಯು, ಹೇಮಾವತಿ ದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೂತನ ದೇವಸ್ಥಾನದ ಉದ್ಘಾಟನಾ ಸಮಾರಂಭವು ಇದೇ 21, 2025 ರಿಂದ24. ಶುಕ್ರವಾರದವರೆಗೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರುಗಲಿದೆ ಎಂದು ದೇವಸ್ಥಾನ ಸಮಿತಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಮಂಗಳವಾರ 21ರಂದು ಸಂಜೆ 5 ಗಂಟೆಯಿಂದ ಶ್ರೀ ದೇವರ ಮೂರ್ತಿ ಪುರ ಪ್ರವೇಶ ಪಡೆಯಲಿದೆ. ನಗರದಿಂದ ಹೊರಡುವ ಭವ್ಯ ಮೆರವಣಿಗೆಯು ಹೊನ್ನತ್ತಿ- ಹೇಮಾವತಿ ಪಟ್ಟಣ ದೇವಾಲಯದಲ್ಲಿ ಜಲವಾಸ ಮತ್ತು ಧಾನ್ಯ ವಾಸ ಪಡೆಯಲಿದೆ. 22, ಎಂದು ಬುಧವಾರ ಮಧ್ಯಾನ್ಹ ಪುಷ್ಪವಾಸ, 23 ರಂದು ಗುರುವಾರ, ಸೂರ್ಯೋದಯ ಕಾಲ ದೇವಾಲಯ ಪ್ರವೇಶ. ನಂತರ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಅಂದೇ ಸಾಯಂಕಾಲ ಧರ್ಮಸಭೆ. ಆನ್ವೇರಿ ವಿರಕ್ತ ಮಠದ ಶಿವಯೋಗೀಶ್ವರ ನೆಗಳೂರ ಗುರು ಶಾಂತೇಶ್ವರ ಶಿವಾಚಾರ್ಯರು, ಗುತ್ತಲ ಅಗಡಿ ಗುರುಸಿದ್ದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ಅಂದಿನ ಕಾರ್ಯಕ್ರಮದಲ್ಲಿ ತಾಲೂಕು ಜಿಲ್ಲೆ ಮತ್ತು ನಾಡಿನ ಅನೇಕ ರಾಜಕೀಯ ಗಣ್ಯರು ಜನಪ್ರತಿನಿಧಿಗಳು ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ನೂರಾರು ದಾನಿಗಳಿಗೆ, ಸಾಧಕ ಗಣ್ಯರಿಗೆ ಅಭಿನಂದನಾ ಸನ್ಮಾನ ಜರುಗಲಿದೆ. 24,2025 ರಂದು ಶುಕ್ರವಾರ ಸೂರ್ಯೋದಯ ಕಾಲ ಮಂಟಪ ಪೂಜೆ, ಅಭಿಷೇಕ, ಅಷ್ಟ ಬಂದ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಪೂರ್ಣಹುತಿ, ಅಷ್ಟೋತ್ತರ ಮತ್ತು ಮಹಾ ಮಂಗಳಾರತಿ. ನಂತರ 10 ಗಂಟೆಗೆ ಧರ್ಮಸಭೆ. ಬಾಳೆಹೊನ್ನೂರ ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜ ದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು ದಿವ್ಯ ಸಾನಿಧ್ಯ ವಹಿಸುವರು. ಚೌಡಯ್ಯದಾನಪುರ ಶ್ರೀ ಚಿತ್ರಶೇಖರ, ನೆಗಳೂರು ಗಳು, ಹಿರೇಕುರುವತ್ತಿ ಸಿದ್ದ ನಂದೀಶ್ವರ ಶಿವಾಚಾರ್ಯರು, ನೂಕಾಪುರ ಶಿವಯೋಗಿ ಸ್ವಾಮಿಗಳು ನೇತೃತ್ವದಲ್ಲಿರುವರು. ಅತಿಥಿಗಳಾಗಿ ರಾಜಕೀಯ ಗಣ್ಯರಾದ ಬಸವರಾಜ ಬೊಮ್ಮಾಯಿ, ರುದ್ರ್ಪ ಲಮಾಣಿ, ಬಸವರಾಜ ಶಿವಣ್ಣನವರ, ಪ್ರಕಾಶ್ ಕೋಳಿವಾಡ ಸೇರಿದಂತೆ ಮತ್ತಿತರ ಗಣ್ಯರು, ಗ್ರಾಮದ ಮುಖಂಡರು, ಸಂಘ ಸಂಸ್ಥೆಗಳ ಮುಖಂಡರು ಪಾಲ್ಗೊಳ್ಳವರು. ಎಂದು ದೇವಸ್ಥಾನ ಮಿತಿಯ ಅಧ್ಯಕ್ಷ ಶಿವಣ್ಣ ಲಮಾಣಿ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 