ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಕಾರ್ಯಕ್ರಮ ಉದ್ಘಾಟನೆ
ಲೋಕದರ್ಶನ ವರದಿ
ಬೆಳಗಾವಿ: ನೈಸರ್ಗಿ ಕ ಸಂಪತ್ತನ್ನು ಕಾಪಾಡಿಕೊಳ್ಳಲುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಉಸಿರಾಡುವ ಗಾಳಿ ಕಲುಷಿತಗೊಂಡರೆ ಮನುಕುಲಕ್ಕೆ ಉಳಿಗಾಲವಿಲ್ಲ, ಅದಕ್ಕಾಗಿ ಪ್ರತಿಯೊಬ್ಬರೂ ಸಸಿ,ಗಿಡಗಳನ್ನು ನೇಡಬೇಕೆಂದು ವಾಯು ಮಾಲಿನ್ಯ ನಿಯಂತ್ರಣಾಧಿಕಾರಿ ಡಾ. ಪಿ ಎಮ್ ಪಾಟೀಲ ಕರೆ ಕೊಟ್ಟರು.
ನಗರದ ಪ್ರಾದೇಶಿಕ ಆಯುಕ್ತ ಸಭಾಂಗಣದಲ್ಲಿ ಮಂಗಳವಾರ 19 ರಂದು ಆಯೋಜಿಸಲಾಗಿದ್ದ, ವಾಯು ಮಾಲಿನ್ಯ ನಿಯಂತ್ರಣ ಜಾಗೃತ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ,
ದೇಶದಲ್ಲಿ ಗ್ರಾಮೀಣ ಪ್ರದೇಶಗಳನ್ನು ಹೊರತುಪಡಿಸಿ, ನಗರ ಮತ್ತು ಪಟ್ಟಣಗಳಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಾಹನಗಳು ವಾಯು ಮಾಲಿನ್ಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿವೆ.
ನಗರಗಳಲ್ಲಿ ಅತಿಹೆಚ್ಚಿನ ವಾಹನಗಳ ಬಳಕೆಯಾಗುತ್ತಿದ್ದು, ಇದರಿಂದ ಹೊರಬರುವ ಮಲಿನ ಗಾಳಿ ಜನರ ಆರೋಗ್ಯದ ಮೇಲೆ ಭೀಕರ ಪರಿಣಾಮ ಬೀರುತ್ತಿದೆ. ನಮ್ಮ ಆರೋಗ್ಯ ಉಸಿರಾಡುವ ಗಾಳಿ ಮತ್ತು ಆಹಾರದ ಗುಣಮಟ್ಟವನ್ನು ಅವಲಂಬಿಸಿದೆ. ಮನುಕುಲದ ಭವಿಷ್ಯದ ದೃಷ್ಟಿಯಲ್ಲಿ ವಾಯು ಮಾಲಿನ್ಯವನ್ನು ತಡೆಗಟ್ಟುವುದು ಅತ್ಯಗತ್ಯವಾಗಿದೆ ಎಂದರು. ಜತೆಗೆ ನಗರದ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನ ಸವಾರರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದರೆ, ಅಪಘಾತ ತಗ್ಗಿಸಲು ಸಾದ್ಯ ಎಂದರು.
ಜಂಟಿ ಸಾರಿಗೆ ಆಯುಕ್ತ ಪುರೋಷತ್ತಮ ಜೆ ಮಾತನಾಡಿ, ಸಾರ್ವಜನಿಕರಿಗೆ ವಾಯು ಮಾಲಿನ್ಯ ಅರಿವು ಜಾಗೃತಿ ಕಾರ್ಯಕ್ರಮ ಪ್ರತಿನಿತ್ಯ ಸಾಗಬೇಕು. ದೆಹಲಿಯಲ್ಲಿ ಉಂಟಾಗಿರುವ ಅಧಿಕ ವಾಯು ಮಾಲಿನ್ಯ, ಗಾಳಿಯಲ್ಲಿ ಕಲುಷಿತ ಕೊಂಡಿದ್ದರಿಂದ ಪ್ರತಿಯೊಬ್ಬ ಮುಖಗಳಿಗೆ ಮಾಸ್ಕ ಹಾಕಿಕೊಂಡು ತೆರಳು ಸಂದರ್ಭದ ಎದುರಾಗಿದೆ ಆ ಅಪಾಯಕಾರಿ ವಾತಾವರಣ ನಿಮರ್ಾಣವಾಗದಂತೆ ಎಚ್ಚರ
ವಹಿಸಬೇಕು.
ಅದಕ್ಕಾಗಿ ವಾಹನಗಳನ್ನು 6 ತಿಂಗಳಿಗೊಮ್ಮೆ ವಾಹನ ಸವರ್ಿಸ್ ಮಾಡಸಬೇಕು. ಸುತ್ತಲೂ ಗಿಡಮರಗಳನ್ನು ನೆಟ್ಟು, ಗುಣಮಟ್ಟದ ಪರಿಸರವನ್ನು ನಿಮರ್ಾಣಕ್ಕಾಗಿ ಎಲ್ಲರೂ ಕೈಜೋಡಿಸಿ ಎಂದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ಮ ಮಾತನಾಡಿ, ನಮಗೆ ಜೀವದಾನವಾಗಿರುವ ಓಝೋನ್ ಪದರು ನಾಶವಾಗದಂತೆ ಸುರಕ್ಷಿತವಾಗಿ ಕಾಪಾಡಿಕೋಳ್ಳುವುದು ನಮ್ಮೆಲ್ಲರ ಹೊಣೆ, ಹಳೆ ವಾಹನಗಳಿಗೆ ಏರ್ ಕ್ಲಿನರ್ ಮಾಡಿಸಬೇಕು, ವಿಷಪೂರಿತ ಗಾಳಿ ಹರಡದಂತೆ ನಿಯಂತ್ರಣಿಸಿಕೊಂಡು ಹೋಗಬೇಕು.
ವಾಹನಗಳನ್ನು ಹೈಡ್ರೋಕಾರ್ಬನ್ ಆಧಾರಿತ ಪೆಟ್ರೋಲ್ ಹಾಗೂ ಡೀಸೆಲ್ ಇಂಧನವನ್ನು ದಹಿಸಿಯೇ ಚಲನೆ ಮಾಡುವುದರಿಂದ, ಪರಿಸರದಲ್ಲಿ ಹೆಚ್ಚಿನ ಮಾಲಿನ್ಯ ಉಂಟಾಗುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್ ಇಂಧನಗಳು ಭವಿಷ್ಯದಲ್ಲಿ ಒಂದಲ್ಲ ಒಂದು ದಿನ ಬರಿದಾಗುವ ಇಂಧನ ಮೂಲಗಳಾಗಿವೆ.
ಪರಿಸರ ಹಾಗೂ ಶಬ್ದ ಮಾಲಿನ್ಯ ರಹಿತವಾಗಿರುವ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಸಕರ್ಾರ ಉತ್ತೇಜನ ನೀಡುತ್ತಿದೆ ಎಂದರು. ಈಗಾಗಲೇ ಬರುವ 2020 ರ ಏಪ್ರಿಲ್ 01 ರಿಂದ ಬಿಎಸ್ 06 ವಾಹನಗಳಿಗೆ ಮಾತ್ರ ನೊಂದಣಿಗೆ ಅವಕಾಶವಾಗುವಂತೆ ನಿಯಮಗಳನ್ನು ಸಕರ್ಾರ ಪ್ರಕಟಿಸಿದೆ
ಎಂದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಭೀಮಗೌಡ ಪಾಟೀಲ, ಹಿರಿಯ ಮೋಟಾರ ವಾಹನ ನೀರಿಕ್ಷಕರು ಸಾಧೀಕ ಷರೀಫ್ , ಹಿರಿಯ ಮೋಟಾರ ವಾಹನ ನೀರಿಕ್ಷಕರು ತ್ಯಾಗರಾಜು, ಮೋಟಾರ ವಾಹನ ನಿರೀಕ್ಷಕರು ಓಂ ಪ್ರಕಾಶ ಆಡಿನ್, ಎಸ್ ಕೆ ಹುಗ್ಗಿ, ಜಿ ಎಸ್ ಕುಂಗಾರೆ, ಪ್ರಾದೇಶಿಕ ಸಾರಿಗೆ ಸಿಬ್ಬಂದಿ ಹಾಗೂ ಇತರರು ಇದ್ದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 