ಗುರ್ಲಾಪೂರದ ಪಿ ಎಮ್ ಶ್ರೀ ಶಾಸಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ
Inauguration ceremony of PM Shri MLA Government Higher Primary School, Gurlapur
ಲೋಕದರ್ಶನ ವರದಿ
ಗುರ್ಲಾಪೂರ 03: ಸ್ಥಳೀಯ ಪಿ ಎಮ್ ಶ್ರೀ ಶಾಸಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸನ್ 2026 .2027ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ಪಾಲಕ ಪೋಷಕರ ಮಹಾಸಭೆ ಸೋಮವಾರ ದಿ. 01ರಂದು. ಅತ್ಯಂತ ಸಡಗರದಿಂದ ಆಚರಿಸಲಾಯಿತು.
ಸಾನಿಧ್ಯವನ್ನು ಶಿವಾನಂದ ದುಂಡಯ್ಯ ಹಿರೇಮಠ ವಹಿಸಿದ್ದರು. ಅಧ್ಯಕ್ಷ ಸ್ಥಾನವನ್ನು ಎಲ್ ಪಿ ನೇಮಗೌಡರ ವಹಿಸಿದ್ದರು. ಅತಿಥಿಗಳಾಗಿ ಎಸ್ ಜಿ ಹಂಚಿನಾಳ ವಹಿಸಿ ಮಕ್ಕಳಿಗೆ ನೈತಿಕ ಮೌಲ್ಯ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡಿ ಶಾಲಾ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲು ಹೇಳಿದರು. ಕಾರ್ಯಕ್ರಮದಲ್ಲಿ ಆನಂದ ಟಪಾಲ ಸಿದ್ದು ಗಡ್ಡೇಕಾರ, ವಾಸು ಹಳಬರ, ಸಿದ್ದಗೊಂಡ ಕುಳಲಿ, ಸಂಜೀವ ಗಾಡಿವಡ್ಡರ, ರೇಖಾ, , ಮಾಲಾಶ್ರೀ, ಸಕ್ಕೂ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಸಮಸ್ತ ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು. ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಗುಲಾಬಿ ಹೂ ನೀಡುವ ಮೂಲಕ ಸ್ವಾಗತ ಮಾಡಿಕೊಂಡರು. ಉಚಿತ ಪಠ್ಯ ಪುಸ್ತಕ ಸಮವಸ್ತ್ರ ಹಂಚಲಾಯಿತು. ಸುಮಾರು 20 ಮಕ್ಕಳ ದಾಖಲಾತಿ ಮಾಡಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ 50 ಪಾಲಕ ಪೋಷಕರು ಹಾಜರಿದ್ದರು. ಮಕ್ಕಳ ಮನಮುಟ್ಟುವಂತೆ ಪಾಲಕರಿಗೆ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆ ದ್ವಿಭಾಷಾ ಶಿಕ್ಷಣದ ಬಗ್ಗೆ ಶ್ರೀ ಬಿ ವಾಯ ಮೋಮಿನ್ ತಿಳಿ ಹೇಳಿದರು.
ಶಿಕ್ಷಕರಾದ ಲಕ್ಷ್ಮಯ್ಯಾ ಸಾಲಿಮಠ ಸುಖದೇವ ದರೂರ ಅನ್ನಪೂರ್ಣ ಪಡಗಾನೂರ ಕವಿತಾ ಕಟಗಿ ಜ್ಯೋತಿ ಕಾಳಪ್ಪಗೋಳ, ಗಂಗವ್ವ ಕಂಬಾರ, ವಿದ್ಯಾಶ್ರೀ ನೇಮ ಗೌಡರ, ಶೋಭಾರಾಣಿ ಪಾಲಭಾವಿ, ಪೂಜಾ, ಮಹಾರಾಜ ಪ್ಪಗೋಳ ಹಾಜರಿದ್ದು. ಮುಖ್ಯೋಪಾಧ್ಯಾಯರಾದ ಬಸವರಾಜ ಸಸಾಲಟ್ಟಿಯವರು ಸರ್ವರನ್ನು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 