ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಉದ್ಘಾಟನೆ, ಸ್ವಾಗತ ಸಮಾರಂಭ

ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಉದ್ಘಾಟನೆ, ಸ್ವಾಗತ ಸಮಾರಂಭ Inauguration and welcome ceremony of cultural and sports activities

ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಉದ್ಘಾಟನೆ, ಸ್ವಾಗತ ಸಮಾರಂಭ 

ರಾಯಬಾಗ, 01 ; ವಿದ್ಯಾರ್ಥಿಗಳು ಮಹಾತ್ಮರ, ಸಾಧಕರ ಜೀವನ ಚರಿತ್ರೆಗಳನ್ನು ಓದಿ, ತಮ್ಮ ಬದುಕನ್ನು ಅತ್ಯುತ್ತಮವಾಗಿ ರೂಪಿಸಿಕೊಳ್ಳಬೇಕೆಂದು ಆರ್‌.ವಿ.ಆರ್‌. ಪಿ.ಯು ಕಾಲೇಜ ಪ್ರಾಚಾರ್ಯ ಪಿ.ಎಮ್‌.ಭೆಂಡೆ ಹೇಳಿದರು.  

ಶುಕ್ರವಾರ ಪಟ್ಟಣದ ಆನಂದಿಬಾಯಿ ಬಾಲಕಿಯರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ಪಿ.ಯು.ಸಿ ಮತ್ತು 8ನೇ ವರ್ಗದ ವಿದ್ಯಾರ್ಥಿನಿಯರ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿರಂತರ ಕಲಿಕೆ, ಸತತ ಪ್ರಯತ್ನ, ಕಠಿಣ ಪರಿಶ್ರಮ ಮತ್ತು ಏಕಾಗ್ರತೆಯಿಂದ ವಿದ್ಯಾರ್ಥಿನಿಯರು ಕೂಡ ಎಂತಹ ಸಾಧನೆ ಕೂಡ ಮಾಡಬಹುದು ಎಂದು ತಿಳಿಸಿದರು.  

ಎಸ್‌ಪಿಎಮ್ ಕಾರ್ಯದರ್ಶಿ ಎಸ್‌.ಎಸ್‌.ಸಿಂಗಾಡಿ ಮಾತನಾಡಿ, ಈ ಭಾಗದ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬು ಉದ್ದೇಶದಿಂದ ಅಬಾಜಿಯವರು ಬಾಲಕಿಯರಿಗಾಗಿ ಪ್ರೌಢಶಾಲೆಯನ್ನು ಪ್ರಾರಂಭಿಸಿದ್ದರು. ಇಲ್ಲಿ ಕಲಿತ ಅನೇಕ ವಿದ್ಯಾರ್ಥಿನಿಯರು ಉನ್ನತ ಹುದ್ದೆಗಳನ್ನು ಅಲಂಕರಿಸಿ, ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಹೇಳಿದರು. 

ಸಂಸ್ಥೆ ನಿರ್ದೇಶಕಿ ಭಾಗ್ಯಶ್ರೀ ಪಾಟೀಲ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.  

ಪ್ರಾಚಾರ್ಯ ಬಿ.ಎಸ್‌.ಶಿಂಗೆ, ಆರ್‌.ಎಸ್‌.ಗುಡೋಡಗಿ, ಎಚ್‌.ಎಸ್‌.ಲತಿಫ, ಜೆ.ಡಿ.ಕೆಳಗಡೆ, ಸರಿತಾ ಪುಟಾಣಿ, ಕೀರ್ತಿ ತೇಲಿ, ಪಿ.ಎಸ್‌.ಖೋತ, ಡಿ.ಸಿ.ಮಗದುಮ್ಮ, ಎ.ಕೆ.ಬಾನಜ, ಸಂತೋಷ ಅವಳೆ, ಸುಶ್ಮಿತಾ ಮನೋಜ, ದೀಪಾ ವಂಟಮೂರೆ, ಭಾರತಿ ಕಟ್ಟೆನ್ನವರ, ಸೀಮಾ ಕೊಟ್ರೆ, ಅಶ್ವಿನಿ ಹುಚ್ಚನ್ನವರ ಹಾಗೂ ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಇದ್ದರು.  

ಶಿಕ್ಷಕಿ ಡಿ.ಸಿ.ಮಗದುಮ್ಮ ಸ್ವಾಗತಿಸಿ, ನಿರೂಪಿಸಿದರು.