ಗುರು ನಾಮಸ್ಮರಣೆ ಮಾಡುತ್ತಿರಬೇಕು: ಶಿವಾನಂದ ಭಾರತಿ ಅಪ್ಪ
Inaugural ceremony of the 24th Vedanta Parishad
ಮುಧೋಳ 09: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಸುಕ್ಷೇತ್ರ ರೂಗಿ ಗ್ರಾಮದ ಅಡವಿ ಆಶ್ರಯದಲ್ಲಿ 24 ನೇ ವೇದಾಂತ ಪರಿಷತ್‌ದ ಉದ್ಘಾಟನಾ ಸಮಾರಂಭ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿತ್ಯಾನಂದ ಮಹಾಸ್ವಾಮಿಗಳು ವಹಿಸಿದ್ದರು.
-ಶಿವಾನಂದ ಭಾರತಿ ಅಪ್ಪನವರು, ಗಂಗಾಧರ ಸ್ವಾಮಿಗಳು, ಲಕ್ಕಪ್ಪ ಮಹಾರಾಜರು ಮೆಟಗುಡ್ಡ, ಶಿವಶರಣಾನಂದ ಮಹಾರಾಜರು ಚಿಕ್ಕಾಲಗುಂಡಿ, ಷಡಕ್ಷರಿ ಮಹಾಸ್ವಾಮಿಗಳು, ಅಮರೇಶ್ವರ ಸ್ವಾಮಿಗಳು ಕೌವಲಗುಡ್ಡ ಪೂಜ್ಯರು ಭಾಗವಹಿಸಿದರು. ಇಂದಿನ ಪ್ರವಚನದಲ್ಲಿ ದುರಿತ ಕರ್ಮವನ್ನು ಒಲ್ಲದಿರು, ಪುಣ್ಯವನ್ನೆ ಮಾಡು ವಿಷಯದ ಮೇಲೆ ಪ್ರವಚನ ನಡೆಯಿತು. ಶಿವಾನಂದ ಭಾರತಿ ಅಪ್ಪನವರು ಮಾನವ ಜನ್ಮ ಶ್ರೇಷ್ಠವಾದದ್ದು. ಸತ್ಕಾರ್ಯಗಳನ್ನು ಮಾಡಿ ಪುಣ್ಯವನ್ನು ಗಳಿಸಿಕೊ. ಪರರಿಗೆ ನೋವು ಹಿಂಸೆ ತರುವಂತಹ ಕಾರ್ಯ ವನ್ನು ಮಾಡಬೇಡವೆಂದು ಹೇಳಿದರು.
ಅಮರೇಶ್ವರ ಸ್ವಾಮಿಗಳು ಸಜ್ಜನರ ಸಂಗ ಮಾಡು. ಸಜ್ಜನರ ಒಡನಾಟದಿಂದ ಭಾವ ಶುದ್ಧಿ, ಮನ ಶುದ್ಧಿ ಆಗುವದಲ್ಲದೆ ಗುರು ನಾಮಸ್ಮರಣೆ ಸದಾ ಮಾಡುತ್ತಿರಬೇಕೆಂದು ಹೇಳಿದರು. ಅಡವಿ ಆಶ್ರಮದ ನಿತ್ಯಾನಂದ ಮಹಾಸ್ವಾಮಿಗಳ ತುಲಾಭಾರ ಕಾರ್ಯವನ್ನು ಸದ್ದಭಕ್ತರು ನಡೆಯಿಸಿಕೊಟ್ಟರು.
ಅಕ್ಕನ ಬಳಗದವರಿಂದ ಸಾಯಿ ಭಜನೆ ನಡೆಯಿತು. ವಿವೇಕಾನಂದ ಶಾಲೆಯ ಮಕ್ಕಳಿಂದ ಪ್ರಾರ್ಥನೆ ನಡೆಯಿತು. ಕುದರಿ ಗುರುಗಳು ಶರಣು ಸಮರೆ್ಣ ಮಾಡಿದರು.
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ
ಬಡ ಅಂಗವಿಕಲ ಸರ್ಫರಾಜ್ ಬಿಸ್ತಿಗೆ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡದಿಂದ ಹೊಸ ವೀಲ್ಚೇರ್ ಉಡುಗೊರೆ
ಅದ್ದೂರಿಯಿಂದ ಜರುಗಿದ ಕೋಣ ಬಿಡುವ ಸಂಪ್ರದಾಯ ಕಾರ್ಯಕ್ರಮ : ಸಂಕೇಶ್ವರ ಮಹಾಲಕ್ಷ್ಮೀ ಜಾತ್ರೆಯ ಚೊಚ್ವಲು ಕಾರ್ಯಕ್ಕೆ ಚಾಲನೆ
ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ
ಮಾಹಾಲಕ್ಷ್ಮೀ ಜಾತ್ರೆ ಲೆಕ್ಕ ಸಭೆಯಲ್ಲಿ ರಾಜಕೀಯ ಹಗ್ಗ ಜಗ್ಗಾಟದಿಂದ ಗಲಾಟೆ, ಆನೆ, ಪ್ರಮಾಣದಿಂದ ಜನರ ಛೀಮಾರಿ
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ 