2025-26 ನೇ ‘ವಿದ್ಯಾರ್ಥಿ ಸಂಘ ಹಾಗೂ ಕ್ರೀಡಾ ವಿಭಾಗಗಳ’ ಉದ್ಘಾಟನಾ ಸಮಾರಂಭಾ

2025-26 ನೇ ‘ವಿದ್ಯಾರ್ಥಿ ಸಂಘ ಹಾಗೂ ಕ್ರೀಡಾ ವಿಭಾಗಗಳ’ ಉದ್ಘಾಟನಾ ಸಮಾರಂಭಾ Inaugural Ceremony of the 2025-26th ‘Student Union and Sports Departments’

2025-26 ನೇ ‘ವಿದ್ಯಾರ್ಥಿ ಸಂಘ ಹಾಗೂ ಕ್ರೀಡಾ ವಿಭಾಗಗಳ’ ಉದ್ಘಾಟನಾ ಸಮಾರಂಭಾ 

ಧಾರವಾಡ 21: 2025-2026 ನೇ ಶೈಕ್ಷಣಿಕ ವರ್ಷದ ‘ವಿದ್ಯಾರ್ಥಿ ಸಂಘ ಹಾಗೂ ಕ್ರೀಡಾ ವಿಭಾಗಗಳ’ ಉದ್ಘಾಟನಾ ಸಮಾರಂಭವು ಜೆ.ಎಸ್‌.ಎಸ್‌. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ಉತ್ಸವ ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಜನತಾ ಶಿಕ್ಷಣ ಸಮಿತಿಯ ಮಾನ್ಯ ಕಾರ್ಯದರ್ಶಿಗಳಾದ ಡಾ. ಅಜಿತಪ್ರಸಾದ ಅವರು ಉದ್ಘಾಟಿಸಿ, ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ, ಮಾತನಾಡುತ್ತಾ ಜನತಾ ಶಿಕ್ಷಣ ಸಂಸ್ಥೆಯ ಆರಂಭದ ದಿನಗಳನ್ನು ನೆನಪಿಸುತ್ತಾ ಇಂದು ಗುಣಮಟ್ಟ ಮತ್ತು ಮೌಲ್ಯದ ದೃಷ್ಟಿಯಿಂದ ಜೆ.ಎಸ್‌.ಎಸ್‌. ಸಂಸ್ಥೆಯ ಕೀರ್ತಿಯು ನಾಡಿನಾದ್ಯಂತ ಪಸರಿಸಿದ್ದು ಹೆಮ್ಮೆ ಎನಿಸುತ್ತದೆ ಎಂದರು.  ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ  ಗುಂಜನ್ ಆರ್ಯ, ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳು, ಧಾರವಾಡ ಜಿಲ್ಲೆ ಅವರು, ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುತ್ತಾ ಶಿಸ್ತು, ಸಂಯಮ, ತ್ಯಾಗ, ಪ್ರಾಮಾಣಿಕತೆಯೊಂದಿಗೆ ಕಠಿಣ ಪರಿಶ್ರಮ, ಸತತ ಪ್ರಯತ್ನ, ಅಲ್ಲದೆ ದೃಢನಿರ್ಧಾರ ಮತ್ತು ಸಮಯದ ಮಹತ್ವವನ್ನು ಅರಿತು ಕಾರ್ಯ ಪ್ರವೃತ್ತರಾದರೆ ಯಶಸ್ಸು ಸಾಧಿಸಬಹುದು, ಎಂದು ನಿದರ್ಶನಗಳೊಂದಿಗೆ ವಿದ್ಯಾರ್ಥಿಗಳಿಗೆ ಜೀವನ ರೂಪಸಿಕೊಳ್ಳುವುದರ ಪ್ರೇರಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಪ್ರೊ. ವೆಂಕಟೇಶ ಮುತಾಲಿಕ್ ಅವರು ವಹಿಸಿಕೊಂಡು, ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳ ಮೇಲೆ ಬೆಳಕು ಚೆಲ್ಲುತ್ತಾ ಪ್ರತಿಯೊಬ್ಬರೂ ತಮ್ಮ ಜೀವನವನ್ನು ಯಶಸ್ವಿಯತ್ತ ಕೊಂಡೊಯುವಲ್ಲಿ ಪ್ರಯತ್ನಶೀಲರಾಗಬೇಕೆಂದು ತಿಳಿಸಿದರು.  ಜೆ.ಎಸ್‌.ಎಸ್‌. ಎಂ.ಸಿ.ಎ. ಕಾಲೇಜಿನ ನಿರ್ದೇಶಕರಾದ ಡಾ. ಸೂರಜ್ ಜೈನ್, ಜೆ.ಎಸ್‌.ಎಸ್‌. ಸಂಸ್ಥೆಯ ಆಡಳಿತಾಧಿಕಾರಿಗಳಾದ ಅರಿಹಂತ ಪ್ರಸಾದ, ಜೆ.ಎಸ್‌.ಎಸ್‌. ಐ.ಟಿ.ಐ. ಕಾಲೇಜಿನ ಪ್ರಾಚಾರ್ಯರಾದ          ಮಹಾವೀರ ಉಪಾಧ್ಯೆ, ಕಾಲೇಜಿನ ಉಪಪ್ರಾಚಾರ್ಯರಾದ ಶ್ರೀಮತಿ. ಆವಂತಿಕಾ ರೊಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಜಿನ್ನಪ್ಪ ಕುಂದಗೋಳ, ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಕು. ಅರ​‍್ಿತಾ ಪೋತದಾರ ಮತ್ತು ವಿವಿಧ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಪ್ರಾರ್ಥನೆಯನ್ನು ಲಲಿತಕಲಾ ವಿಭಾಗದ ವಿದ್ಯಾರ್ಥಿಗಳು ನೆರವೇರಿಸಿದರು. ವಂದನಾರೆ​‍್ಣಯನ್ನು ಸ್ಪೂರ್ತಿ ತೇಲಿ ನೆರವೇರಿಸಿದರು. ಕು. ದೀಪಾ ಮೇಟಿ ಹಾಗೂ ಕು. ಹರ್ಷಾ ಹಿರೇಹೊಳಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.