ಆಧುನಿಕ ಜಗತ್ತಿನಲ್ಲಿ ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಮಾದರಿ : ಆರ್ಸಿ ಪಾಟೀಲ್
In the modern world, women are role models in all fields: RC Patil
ರಾಣೇಬೆನ್ನೂರ, ಮಾ. 09 : ಎಲ್ಲಿ ಮಹಿಳೆಯರನ್ನು ಪೂಜ್ಯನೀಯ ಸ್ಥಾನದಲ್ಲಿ ಕಾಣುತ್ತಾರೋ ಅಲ್ಲಿ ನೆಮ್ಮದಿಯ ಸುಸಂಸ್ಕೃತ ವಾತಾವರಣ ಕಂಡು ಬರುತ್ತದೆ. ಈ ನಿಟ್ಟಿನಲ್ಲಿ ಸರ್ವರೂ ಮಹಿಳೆಯರನ್ನು ಪೂಜಿಸುವ ಹಾಗೂ ಗೌರವಿಸುವ ಪ್ರವೃತ್ತಿ ಹೊಂದಬೇಕು ಅಂದಾಗ ನಾವು ಮಹಿಳೆಯರಿಗೆ ಪೂಜ್ಯನೀಯ ಸ್ಥಾನವನ್ನು ನೀಡಿದಂತಾಗುತ್ತದೆ ಎಂದು ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಆರ್ಸಿ ಪಾಟೀಲ್ ಹೇಳಿದರು. ರವಿವಾರದಂದು ಇಲ್ಲಿನ ಮಾಗೋಡ ರಸ್ತೆಯ ಹೊರವಲಯದಲ್ಲಿರುವ ಸಾರಿಗೆ ಘಟಕದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಣ್ಣು ಹೆಣ್ಣೆಂದು ಹೆಣ್ಣನ್ನು ಹಿಯಾಳಿಸದಿರಿ, ಹೆಣ್ಣಲ್ಲವೇ ನಮ್ಮನ್ನು ಹೆತ್ತ ತಾಯಿ, ಆಟೋ ಚಾಲನೆಯಿಂದ ಹಿಡಿದು ವಿಮಾನ ಚಾಲನೆಯಲ್ಲಿರುವವರೂ ಹೆಣ್ಣಲ್ಲವೇ? ಹೀಗಿರುವಾಗಇಂದಿನ ಆಧುನಿಕ ಜಗತ್ತಿನಲ್ಲಿ ಮಹಿಳೆಯರು ಎಲ್ಲ ರಂಗಗಳಲ್ಲಿಯೂ ನಾವು ಅಬಲೆಯಲ್ಲ ಸಬಲೆ ಎಂಬುದನ್ನು ಸಾಬೀತುಪಡಿಸಿ ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ ಎಂದರು. ಹಿರೇಮಾಗನೂರಿನ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ವಿಜಯಾ ಆರ್ ಪಾಟೀಲ್ ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗಿ ಸಂಸರಾದ ಹೊರೆ ಹೊತ್ತು ನಂತರ ಸಮಾಜಮುಖಿ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮುನ್ನಡೆಯುತ್ತಿರುವ ಕೆಎಸ್ ಆರ್ ಟಿಸಿ ಮಹಿಳಾ ನಿರ್ವಾಹಕಿಯರು ಮತ್ತು ಮಹಿಳಾ ಸಿಬ್ಬಂಧಿಯವರ ಕಾರ್ಯ ನಿಜಕ್ಕೂ ಶ್ಲ್ಯಾಘನೀಯ ಎಂದರು. ಸಂಚಾರಿ ನೀರೀಕ್ಷಕರಾದ ನಾಗರಾಜ ಕಳಕ್ಕವರ, ಪುಷ್ಪಾ, ಸಂಚಾರಿ ನಿಯಂತ್ರಕ ರಮೇಶ ತೇಲ್ಕರ, ಆರ್ ಎನ್ ಮಾಳನಾಯಕನಹಳ್ಳಿ, ನಿಟ್ಟೂರ ಸ್ಕೂಲ್ ಶಿಕ್ಷಕಿ ಶೈಲಾಬಾನು ಜಾತಗೇರ ಸೇರಿದಂತೆ ಸಾರಿಗೆ ಸಂಸ್ಥೆಯ ನಿರ್ವಾಹಕಿಯರು ಮತ್ತು ಸಿಬ್ಬಂಧಿವರ್ಗದವರು ಸೇರಿದಂತೆ ಮತ್ತಿತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 