ಒತ್ತಡದ ಬದುಕಿನಲ್ಲಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವುದು ಅಗತ್ಯವಿದೆ- ಪ್ರಕಾಶ ಆರ್
In a stressful life, it is necessary to give more importance to health - Prakash R.
ಒತ್ತಡದ ಬದುಕಿನಲ್ಲಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವುದು ಅಗತ್ಯವಿದೆ- ಪ್ರಕಾಶ ಆರ್
ಹಾವೇರಿ 15: ಆಧುನಿಕ ಕಾಲದ ಒತ್ತಡದ ಬದುಕಿನಲ್ಲಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವುದು ಅಗತ್ಯವಿದೆ ಎಂದು ಶ್ರೀ ಅಂಭಾಭವಾನಿ ದೇವಸ್ಥಾನ ಟ್ರಸ್ಟ್(ರಿ) ಅಧ್ಯಕ್ಷರು ಹಾಗೂ ಖ್ಯಾತ ವಕೀಲರಾದ ಪ್ರಕಾಶ ಆರ್ ಮುಂಜೋಜಿ ಹೇಳಿದರು.
ಇಲ್ಲಿನ ಹಾನಗಲ್ ರೋಡಿನ ವೈಭವಿ ಲಕ್ಷ್ಮಿ ಪಾರ್ಕ್‌ನ ಶ್ರೀ ಸಾಯಿಬಾಬಾ, ಶ್ರೀ ಅಂಭಾಭವಾನಿ, ಶ್ರೀ ಗಣೇಶ ದೇವಸ್ಥಾನದಲ್ಲಿ ಶ್ರೀ ಅಂಭಾಭವಾನಿ ದೇವಸ್ಥಾನ ಟ್ರಸ್ಟ್ (ರಿ) ಲಯನ್ಸ್ ಕ್ಲಬ್-ಹಾವೇರಿ,ಅಮ್ಮಾ ಸಂಸ್ಥೆ(ರಿ) ಹಿರೇಮುಗದೂರ ಹಾಗೂ ಕಂಪಾನಿಯೋ ಇವುಗಳ ಸಹಕಾರದಿಂದ ಆಯೋಜಿಸಿದ ಉಚಿತ ಪೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಾನವರು ಪ್ರತಿ ನಿತ್ಯ ಕೆಲಸಗಳ ಒತ್ತಡದಲ್ಲಿ ಬದುಕು ನಡೆಸುತ್ತಿದ್ದಾರೆ.ನಾವು ತಿನ್ನುವ ಆಹಾರದಲ್ಲಿ ಸಮತೋಲನ ಪೌಷ್ಟಿಕಾಂಶದ ಕೊರತೆಯಿಂದಾಗಿ ಆರೋಗ್ಯದಲ್ಲಿ ಏರುಪೇರುಗಳು ಆಗುವಂತಾಗಿವೆ.ಉತ್ತಮ ಆರೋಗ್ಯಕ್ಕೆ ಪೂಟ್ ಪಲ್ಸ್ ಥೆರಪಿ ಸಹಕಾರಿಯಾಗಲಿದ್ದು,ಈ ಉಚಿತ ಶಿಬಿರವನ್ನು ಹಾವೇರಿ ಜನತೆ ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕಿದೆ ಎಂದರು.
ಕಂಪಾನಿಯೋದ ವ್ಯವಸ್ಥಾಪಕರಾದ ನಾಗರಾಜ ಹುಣಸೆಮನಿ ಮಾತನಾಡಿ ಪೂಟ್ ಪಲ್ಸ್ ಥೆರಪಿಯಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ.ದಿ,15 ರಿಂದ 27ರ ವರಿಗೆ ಪ್ರತಿದಿನ ಬೆಳಿಗ್ಗೆ 9 ರಿಂದ ಸಾಯಂಕಾಲ 5:30 ಘಂಟೆಯವರಿಗೂ ಹಾವೇರಿಯ ವೈಭವಿ ಲಕ್ಷ್ಮಿ ಪಾರ್ಕ್‌ನ ಶ್ರೀ ಸಾಯಿಬಾಬಾ ದೇವಸ್ಥಾನದಲ್ಲಿ ಉಚಿತವಾಗಿ ಶಿಬಿರ ಇರಲಿದೆ.ಇದರ ಸದುಪಯೋಗ ಪಡಿಸಿಕೊಳ್ಳಲು ಮಹಾಜನತೆ ಮುಂದಾಗಿರಿ ಎಂದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎ ಹೆಚ್ ಕಬ್ಬಿಣಕಂತಿಮಠ,ಶ್ರೇಯಸ್ ಸಂಸ್ಥೆಯ ಅಧ್ಯಕ್ಷರಾದ ತಿಪ್ಪೇಸ್ವಾಮಿ ಹೊಸಮನಿ,ಅಮ್ಮಾ ಸಂಸ್ಥೆ(ರಿ) ಸಂಸ್ಥಾಪಕರಾದ ನಿಂಗಪ್ಪ ಆರೇರ,ಸಹಮತ ಸಂಸ್ಥೆ(ರಿ)ಯ ಅಧ್ಯಕ್ಷರಾದ ಬಸವರಾಜ ಪೂಜಾರ,ದೇವಸ್ಥಾನ ಸಮಿತಿಯ ಚಂದ್ರಶೇಖರ ಜಾಧವ,ರಘವೀರ ಚವ್ಹಾಣ,ರವಿಕುಮಾರ ಜಾಧವ,ಎಸ್ ಎಫ್ ಪಾಟೀಲ,ರಮೇಶ ಮುಂಜೋಜಿ,ಪ್ರಕಾಶ ಪೂಜಾರ, ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ಅಶೋಕ ಮರ್ತೂರ, ಸುಭಾಸ ಹುಲ್ಲಾಳ, ಶ್ರೀಮತಿ ನೀಲಮ್ಮ ಸೊಂಟಿ,ಶ್ರೀಮತಿ ಶಶಿರೇಖಾ ಮುಂಜೋಜಿ, ಅಶೋಕ,ಮನೋಜ ಸೇರಿದಂತೆ ಅನೇಕರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 