ಸ್ಪರ್ಧಾತ್ಮಕ ಯುಗದಲ್ಲಿ ಪರಿಶ್ರಮವಿದ್ದರೆ ಮಾತ್ರ ಯಶಸ್ಸು ಸಾಧ್ಯ
In a competitive era, success is only possible with hard work
ಹಾನಗಲ್ಲ 12 : ಸ್ಪರ್ದಾತ್ಮಕ ಯುಗದಲ್ಲಿ ಅಪರಿಮಿತ ಸವಾಲುಗಳನ್ನು ಎದುರಿಸಿ ನಮ್ಮ ಗುರಿ ಸಾಧಿಸುವ ಸಂಕಲ್ಪ ಪರಿಶ್ರಮವಿದ್ದರೆ ಮಾತ್ರ ಯಶಸ್ಸು ಸಾಧ್ಯವಾಗುತ್ತಿದ್ದು, ಕಾಲ ಹರಣ ಬೇಡ ಎಂದು ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಸ್.ಆನಂದ ತಿಳಿಸಿದರು.
ಶನಿವಾರ ತಾಲೂಕಿನ ಅಕ್ಕಿ ಆಲೂರಿನ ಎಸ್.ಭಗತ್ ಪಿಯು ಕಾಲೇಜಿನಲ್ಲಿ ಮಹಾಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಮಕ್ಕಳ ಹಿತಕ್ಕೆ ಉತ್ತಮ ಅವಕಾಶಗಳನ್ನು ನೀಡಲು ಶಿಕ್ಷಣ ಸಂಸ್ಥೆಗಳು ಮುಂದಾಗಬೇಕಾಗಿದೆ.ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಚಿಂತನೆಗಳಿರಲಿ ಯುವಕರು ತೀರ ಅವಲಂಬನೆಗೆ ಒಳಗಾಗದೇ ಸ್ವತಂತ್ರ ಚಿಂತನೆ ಹಾಗೂ ಪ್ರಯತ್ನದಲ್ಲಿ ಮುಂದಿರಬೇಕು. ಸೌಲಭ್ಯಗಳು ಸಿಕ್ಕಾಗ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಭಗತ್ ಪಿ.ಯು ಕಾಲೇಜು ಸಂಸ್ಥಾಪಕ ಅಧ್ಯಕ್ಷ ಎಮ್.ಬಿ.ಸತೀಶ, ಗ್ರಾಮೀಣ ಮಕ್ಕಳಿಗೆ ಶೈಕ್ಷಣಿಕವಾಗಿ ಉತ್ತಮ ಅವಕಾಶ ನೀಡುವ ಸಂಕಲ್ಪ ನಮ್ಮದು. ನಮ್ಮ ಸಂಸ್ಥೆ ಸೌಲಭ್ಯಗಳನ್ನು ಒದಗಿಸಬಲ್ಲದು. ವಿದ್ಯಾರ್ಥಿಗಳು ಅದರ ಸತ್ಪಲ ಪಡೆಯಬೇಕು. ಕಾಲಹರಣಕ್ಕೆ ಅವಕಾಶವಿಲ್ಲದಂತೆ ವಿದ್ಯಾರ್ಜನೆಯ ಸಮಯವನ್ನು ಭವಿಷ್ಯಕ್ಕಾಗಿ ಬಳಸಿಕೊಳ್ಳಬೇಕು ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿಗಳಾದ ಸತೀಶ ಕುಲಕರ್ಣಿ ಹಾಗೂ ಮಾರುತಿ ಶಿಡ್ಲಾಪೂರ, ಗುರುವಿನ ಮಹತ್ವ ಅರಿಯಬೇಕು. ನಾಳೆಗಾಗಿ ಇಂದೆ ಯೋಜನೆ, ಯೊಚನೆ ಮಾಡಿ ಭವಿಷ್ಯ ರೂಪಿಸಿಕೊಳ್ಳಬೇಕು. ತಂದೆ ತಾಯಿ ಪೋಷಕರ ಅಪೇಕ್ಷೆಯನ್ನು ಈಡೇರಿಸುವ ಇಚ್ಛಾಶಕ್ತಿ ವಿದ್ಯಾರ್ಥಿಗಳಲ್ಲಿರಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ನಾಗರಾಜ ಕ್ಯಾಬಳ್ಳಿ ಮಾತನಾಡಿ ಯುವಜನತೆ ಇಂದಿನ ಕಾಲ ಧರ್ಮದಲ್ಲಿ ಶುಚಿಯಾದ ಜೀವನ ವಿಧಾನ ಅಳವಡಿಸಿಕೊಳ್ಳಬೇಕಾಗಿದೆ. ಯುವಕರು ತಂದೆ ತಾಯಿ ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಎನ್.ಸಿ.ಪಾವಲಿ, ವಿ.ಹೆಚ್.ಪೂಜಾರ, ಉದಯಕುಮಾರ ಕುಬಿಹಾಳ, ಧಾರವಾಡ, ಎಸ್.ಎಮ್.ಸಿಂಧೂರ, ಜಿ.ವಿ ಕೋರಿ, ನಾಗರಾಜ ಕ್ಯಾಬಳ್ಳಿ ಪಾಲ್ಗೊಂಡಿದ್ದರು.
ಸ್ವಾತಿ ಸಂಗಡಿಗರು ಪ್ರಾರ್ಥನೆ ಹಾಡಿದರು. ಅನುಷಾ ಬಾರ್ಕಿ ಸ್ವಾಗತ ನೃತ್ಯ ಪ್ರದರ್ಶಿಸಿದರು. ಪ್ರಮೋದ ಚೌಟೇರ ಸ್ವಾಗತಿಸಿದರು. ಸುಧಾ ತೆಗ್ಗೆಹಳ್ಳಿ, ರಾಧಿಕಾ ಮೂಲಿ ಕಾರ್ಯಕ್ರಮ ನಿರೂಪಿಸಿದರು. ಚನ್ನವೀರ್ಪ ಹೆಚ್ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 