ಇಸ್ಲಾಮಾಬಾದ್,ಜು.26- ಪಾಕಿಸ್ತಾನದ ಕ್ರಿಕೆಟ್ ದಂತಕಥೆ, ರಾಜಕೀಯ ನೇತಾರ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರಿಕ್ ಐ ಇನ್ಸಾಫ್ ಪಕ್ಷ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ 117 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅಧಿಕಾರದ ಸನಿಹಕ್ಕೆ ಬಂದು ನಿಂತಿದೆ. ಆದರೆ, ಪ್ರತಿಪಕ್ಷಗಳು ಕ್ಯಾತೆ ತೆಗೆದಿದ್ದು, ಮತ ಎಣಿಕೆ ಕಾರ್ಯ ನಿಧಾನಗೊಂಡಿದೆ. ಮಧ್ಯೆರಾತ್ರಿ ವೇಳೆಗೆ ಫಲಿತಾಂಶ ಹೊರ ಬೀಳಬೇಕಿತ್ತು. ಆದರೆ, ಇದುವರೆಗೂ ಅಂತಿಮ ಫಲಿತಾಂಶ ಘೋಷಣೆಯಾಗಿಲ್ಲ. 272 ಸದಸ್ಯ ಬಲದ ಪಾಕ್ ಸಂಸತ್ನಲ್ಲಿ 137 ಸ್ಥಾನಗಳನ್ನ ಪಡೆಯುವ ಪಕ್ಷ ಅಧಿಕಾರದ ಗದ್ದುಗೆ ಏರಲಿದೆ. ಇತ್ತೀಚಿನ ವರದಿ ಪ್ರಕಾರ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷ 117 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅತಿದೊಡ್ಡಪಕ್ಷವಾಗಿ ಹೊರಹೊಮ್ಮಿದೆ. ಇನ್ನು 61 ಸ್ಥಾನಗಳಲ್ಲಿ ನವಾಜ್ ಷರೀಪ್ ಅವರ ಪಿಎಂಎಲ್ -ಎನ್ ಪಕ್ಷ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇತ್ತ, ಬಿಲಾವಲ್ ಭುಟ್ಟೋ ನೇತೃತ್ವದ ಪಿಪಿಪಿ ಪಾಟರ್ಿ ಕೇವಲ 40 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಇತರರು 50 ಸ್ಥಾನಗಳನ್ನು ಗಳಿಸಿಕೊಂಡಿದ್ದಾರೆ. ಜೈಲು ಸೇರಿರುವ ನವಾಜ್ ಷರೀಫ್ ಅವರ ಬೆಂಬಲಿಗರು, ಪಾಕ್ ಪ್ರಜಾಪ್ರಭುತ್ವದ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪ ಮಾಡಿದ್ದಾರೆ. ಈ ನಡುವೆ ಪಾಕ್ ಷೇರುಪೇಟೆ ಶೇ 2 ರಷ್ಟು ಆರಂಭಿಕ ಕುಸಿತ ಕಂಡಿದೆ. ಮತ್ತೊಂದೆಡೆ ಪಾಕ್ ಆಥರ್ಿಕತೆ ಕುಸಿತಕಂಡಿದ್ದು, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್ನಿಂದ ಬೇಲ್ಔಟ್ ಪಡೆಯಬೇಕಾದ ಪರಿಸ್ಥಿತಿ ಇದೆ. ಈ ನಡುವೆ ಲೀಡ್ನಲ್ಲಿರುವ ಪಿಟಿಐ ಪಕ್ಷ ಚೀನಾದಿಂದ ಸಹಾಯ ಪಡೆಯುವುದನ್ನ ಅಲ್ಲಗಳೆದಿಲ್ಲ. ಎಲೆಕ್ಷನ್ ಕಮಿಷನ್ ಆಫ್ ಪಾಕಿಸ್ತಾನ್ ಕಾರ್ಯದಶರ್ಿ ತಾಂತ್ರಿಕ ಸಮಸ್ಯೆಗಳಿಂದ ಮತಎಣಿಕೆ ಕಾರ್ಯ ವಿಳಂಬವಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ. ಈ ನಡುವೆ ಚೀಫ್ ಎಲೆಕ್ಷನ್ ಕಮಿಷನರ್ ಸದರ್ಾರ್ ಮೊಹಮ್ಮದ್ ಚುನಾವಣೆ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆದಿದೆ ಎಂದು ಸಮಥರ್ಿಸಿಕೊಂಡಿದ್ದು, ಕೆಲ ಪಕ್ಷಗಳ ಆರೋಪವನ್ನ ಸಾರಾಸಗಟಾಗಿ ಅಲ್ಲಗಳೆದಿದ್ದಾರೆ. ಆದರೆ, ಈ ಫಲಿತಾಂಶವನ್ನ ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ಪಾಕಿಸ್ತಾನದ ಪ್ರಜಾಪ್ರಭುತ್ವಕ್ಕೆ ಈ ಚುನಾವಣೆ ಮಾರಕವಾಗಿದೆ ಎಂದು ಪಿಎಂಎಲ್- ಎನ್ ಪಕ್ಷದ ನೇತಾರ ಶಬಾಜ್ ಆರೋಪಿಸಿದ್ದಾರೆ. ಅತ್ತ ಪಿಪಿಪಿ ಕೂಡಾ ಇದು ಮತ್ತೊಂದು ಪ್ರಮಾದದ ಸಿರೀಯಸ್ ಥ್ರೆಟ್ ಎಂದು ಪ್ರತಿಕ್ರಿಯೆ ನೀಡಿದೆ.
ಯಾವಾಗ ಬೇಕಾದರೂ ಸಿಎಂ ಆಗಬಹುದು, ಆದರೆ ಆಸಕ್ತಿಯಿಲ್ಲ: ಹೇಮಮಾಲಿನಿ
ಬಾಲಿವುಡ್ ನ ಕನಸಿನ ರಾಣಿ, ಬಿಜೆಪಿ ಸಂಸದೆ ಹೇಮಾಮಾಲಿನಿ ಅವರು ನಾನು ಯಾವಾಗ ಬೇಕಾದರೂ ಮುಖ್ಯಮಂತ್ರಿ ಆಗಬಹುದು, ಆದರೆ ನನಗೇ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.
ನಾನು ಅಂದುಕೊಂಡರೆ ಒಂದೇ ನಿಮಿಷದಲ್ಲಿ ಮುಖ್ಯಮಂತ್ರಿ ಆಗಬಹುದು. ಆದರೆ ನನ್ನನ್ನು ನಾನು ಕಟ್ಟಿಹಾಕಿಕೊಳ್ಳಲು ಬಯಸುವುದಿಲ್ಲ. ನನ್ನ ಸ್ವಾತಂತ್ರ್ಯವು ಕೊನೆಕೊಳ್ಳುತ್ತದೆ ಎಂದು ಉತ್ತರಪ್ರದೇಶದ ಮಥುರಾದ ಬಿಜೆಪಿ ಸಂಸದೆ ಹೇಮಾಮಾಲಿನಿ ಅವರು ರಾಜಸ್ಥಾನದ ಬನ್ಸ್ವಾರಾ ನಗರದಲ್ಲಿ ಹೇಳಿದ್ದಾರೆ.
ಉತ್ತರಪ್ರದೇಶದ ಮುಖ್ಯಮಂತ್ರಿ ಹುದ್ದೆಗ ಸ್ಪಷ್ಟವಾದ ಉಲ್ಲೇಖವಿದೆ. ಅದನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೊಂದಿದ್ದಾರೆ. ಇನ್ನು ನನ್ನ ಚಿತ್ರರಂಗದ ಖ್ಯಾತಿ ನಾನು ಸಂಸದೆಯಾಗಲು ಕಾರಣವಾಯಿತು ಎಂದು ಹೇಳಿದರು.
ಸಂಸದೆಯಾಗುವುದಕ್ಕೂ ಮುನ್ನ ನಾನು ಪಕ್ಷಕ್ಕಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೆ. ಸಂಸದೆಯಾದ ಬಳಿಕ ನಾಲ್ಕು ವರ್ಷಗಳಲ್ಲಿ ನನ್ನ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದು
ಹೇಳಿದ್ದಾರೆ.