ರಾಜ್ಯ ಹೆದ್ದಾರಿಗಳ ಸುಧಾರಣೆಯಿಂದ ಅಂತರರಾಜ್ಯ ವ್ಯಾಪಾರ ವೃದ್ಧಿ: ಐಹೊಳೆ
Improvement of state highways will increase interstate trade: Aihole
ರಾಯಬಾಗ 26: ರಾಜ್ಯ ಹೆದ್ದಾರಿಗಳ ರಸ್ತೆಗಳು ಸುಧಾರಿಸುವುದರಿಂದ ಅಂತರರಾಜ್ಯ ವ್ಯಾಪಾರ ವೃದ್ಧಿಯಾಗುವುದು ಜೊತೆಗೆ ರೈತರು ಬೆಳೆದ ಬೆಳೆಗಳನ್ನು ಸಾಗಿಸಲು ಅನುಕೂಲವಾಗುವುದು ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಸೋಮವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 6 ಕೋಟಿ ರೂ. ಅನುದಾನದಲ್ಲಿ ಮಂಗಸೂಳಿ-ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಚಿಂಚಲಿಯಿಂದ ಕಬ್ಬೂರ ರಸ್ತೆವರೆಗೆ ಆಯ್ದ ಭಾಗಗಳ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಸ್ತೆ ಸುಧಾರಣೆಯಿಂದ ವಾಹನ ಸವಾರರಿಗೆ ಅನುಕೂಲವಾಗಲಿದೆ. ರಸ್ತೆಗಳ ಅಭಿವೃದ್ಧಿ ದೇಶದ ಅಭಿವೃದ್ಧಿಯ ಸಂಕೇತವಾಗಿದೆ ಎಂದರು. ಗುತ್ತಿಗೆದಾರರು ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಬೇಕೆಂದು ಸೂಚಿಸಿದರು.
ಪ.ಪಂ.ಅಧ್ಯಕ್ಷ ಅಶೋಕ ಅಂಗಡಿ, ಎಇಇ ಆರ್.ಬಿ.ಮನವಡ್ಡರ, ಅಭಿಯಂತರರಾದ ಶ್ರೀಧರ ಮೇಗಲಮನಿ, ವಾಯ್.ಆರ್.ಕಾಂಬಳೆ, ಸದಾಶಿವ ಘೋರೆ್ಡ, ಸದಾನಂದ ಹಳಿಂಗಳಿ, ಮಹೇಶ ಕರಮಡಿ, ರಫಿಕ ತರಡೆ, ಸಂಗಣ್ಣ ದತ್ತವಾಡೆ, ಸುರೇಶ ಮಾಳಿ, ಸುಭಾಷ ಕಾಂಬಳೆ, ರೀತೀಶ ಅವಳೆ, ಶಿವು ಕೋಳಿ, ಜಯಾನಂದ ಹಿರೇಮಠ, ಕೃಷ್ಣಾ ಕುಲಗುಡೆ, ಸೇರಿ ಅನೇಕರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 