ತಾತ್ಕಾಲಿಕ ಕುಟುಂಬ ಕಲ್ಯಾಣ ವಿಧಾನಗಳ ಅಳವಡಿಕೆ, ಗರ್ಭಕಂಠ ಕ್ಯಾನ್ಸರ ತಪಾಸಣಾ ಶಿಬಿರ
Implementation of temporary family welfare measures, cervical cancer screening camp
ಬೆಳಗಾವಿ 21: ವಿಶ್ವ ಜನಸಂಖ್ಯಾ ದಿನಾಚರಣೆಯ ಅಂಗವಾಗಿ, ನಗರ ಕುಟುಂಬ ಕಲ್ಯಾಣ ಕೇಂದ್ರ ಕಣಬರ್ಗಿ ಹಾಗೂ ಭಾರತೀಯ ಕುಟುಂಬ ಯೋಜನೆಗಳ ಸಂಘ ಹಿಂದವಾಡಿ ಇವರುಗಳ ಸಂಯುಕ್ತಾಶ್ರಯದಲ್ಲಿ ತಾತ್ಕಾಲಿಕ ಕುಟುಂಬ ಕಲ್ಯಾಣ ವಿಧಾನಗಳ ಅಳವಡಿಕೆ ಶಿಬಿರ ಹಾಗೂ ಗರ್ಭಕಂಠ ಕ್ಯಾನ್ಸರ ತಪಾಸಣೆ ಶಿಬಿರ ಕಣಬರ್ಗಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕೇಂದ್ರದ ಆರೋಗ್ಯ ಕಾರ್ಯಕರ್ತರು ತಾಯಂದಿಯರ ಮನವೊಲಿಸಿ, ಕುಟುಂಬ ಕಲ್ಯಾಣ ವಿಧಾನಗಳ ಬಗ್ಗೆ ಮಾಹಿತಿ ನೀಡಿ ತಾತ್ಕಾಲಿಕ ಕುಟುಂಬ ಕಲ್ಯಾಣ ವಿಧಾನಗಳಾದ ಗರ್ಭನಿರೋಧಕ ಚುಚ್ಚುಮದ್ದು (ಅಂತರಾ) ನೀಡಲಾಯಿತು, ವಂಕಿ ಅಳವಡಿಸಲಾಯಿತು, ನುಂಗುವ ಮಾತ್ರೆಗಳನ್ನು ಹಾಗೂ ನಿರೋಧ ವಿತರಿಸಲಾಯಿತು. ಭಾರತೀಯ ಕುಟುಂಬ ಯೋಜನೆಗಳ ಸಂಘ ಹಿಂದವಾಡಿಯ ವೈದ್ಯಾಧಿಕಾರಿಗಳಾದ ಡಾ: ಆರತಿ ಕುಲ್ಕರ್ಣಿಯವರು, ತಾಯಂದಿಯರಿಗೆ ಗರ್ಭಕಂಠ ಕ್ಯಾನ್ಸರ ಬಗ್ಗೆ ತಿಳುವಳಿಕೆ ನೀಡಿ, ಮಹಿಳೆಗೆ ಹೆಚ್ಚಿನ ರಕ್ತ ಸ್ರಾವವಾದರೆ, ಮುಟ್ಟಿನ ಸಮಯದಲ್ಲಿ ಸಮಸ್ಯೆಗಳುಂಟಾದಲ್ಲಿ, ಬಿಳಿ ಮುಟ್ಟು ಅಗುತ್ತಿರುವುದು ಇಂತಹ ಹಲವಾರು ಸಮಸ್ಯೆಗಳು ಕಂಡುಬಂದಲ್ಲಿ ಗಾಬರಿಯಾಗದೆ ತಕ್ಷಣ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಸಲಹೆ ಪಡೆದು ತಪಾಸಣೆಗೊಳಗಾಗಬೇಕು ಎಂದರು. ಶಿಬಿರದಲ್ಲಿ ಸುಮಾರು 50 ಮಹಿಳೆಯರಿಗೆ ಗರ್ಭಕಂಠ ಕ್ಯಾನ್ಸರ ತಪಾಸಣೆ ಮಾಡಿ ಮಾತ್ರೆಗಳನ್ನು ವಿತರಿಸಿದರು.
ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ವೈಜಯಂತಿ ಚೌಗಲಾ, ಸಂಯೋಜಕರಾದ, ಎಂ.ಎಸ್, ಚೌಗಲಾ, ಭಾರತೀಯ ಕುಟುಂಬ ಯೋಜನೆಗಳ ಸಂಘದ ಸಿಬ್ಬಂದಿಗಳು, ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದು ಶಿಬಿರ ಯಶಸ್ವಿಗೊಳಿಸಿದರು.
***
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ 