ಯೋಗ, ಧ್ಯಾನ ಜೀವನದಲ್ಲಿ ಅಳವಡಿಸಿಕೊಳ್ಳಿ: ಶಾಸಕ ಗಣೇಶ
Implement yoga and meditation in your life: MLA Ganesh
ಕಂಪಿ.್ಲ 18: ಪ್ರತಿಯೊಬ್ಬರು ಅರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವ ಮೂಲಕ ಉಚಿತವಾಗಿ ಪ್ರಾಥಮಿಕ ಕೇಂದ್ರದಲ್ಲಿ ತಪಾಸಣೆ ಮಾಡಿಸಿ ಕೊಳ್ಳುವುದರ ಜೊತೆಗೆ ಅರೋಗ್ಯ ಕಾಪಾಡಲು ಮುಂದಾಗಬೇಕು ಎಂದು ಶಾಸಕ ಜೆ.ಎನ್ ಗಣೇಶ ಹೇಳಿದರು.
ಪಟ್ಟಣದ ಸಾಂಗತ್ರಯ ಪಾಠಶಾಲೆಯಲ್ಲಿ ನರೇಗಾ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಜಿಲ್ಲಾ ಸರ್ವೆಕ್ಷಣಾ ಎನ್ ಸಿ.ಡಿ ಘಟಕದ ಅಶ್ರಯದಲ್ಲಿ ಸಮುದಾಯ ಆರೋಗ್ಯ ಕೇಂದ್ರದಿಂದ ಅಸಂಕ್ರಾಮಿಕ ರೋಗಗಳ ಉಚಿತ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಸಮುದಾಯ ಕೇಂದ್ರದಲ್ಲಿ ಖಾಯಿಲೆಗೆ ಸಂಬಂಧಿಸಿದಂತೆ ಎಲ್ಲಾ ಯಂತ್ರೋಪಕರಣಗಳಿವೆ. ಅವುಗಳನ್ನು ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದರು. ವೈದ್ಯಾಧಿಕಾರಿ ಡಾ.ಹಾರಿಕಾ ಮಾತನಾಡಿ. ಒತ್ತಡ ಜೀವನದ ಜೊತೆಗೆ ಕಲಬೆರಕೆ ಆಹಾರ ಸೇವಿಸುವುದರಿಂದ ರೋಗಗಳು ಕಾಣಿಸಿಕೊಳ್ಳುತ್ತವೇ ತಪ್ಪದೇ ವಾಕಿಂಗ್, ಯೋಗ, ಧ್ಯಾನ ಅಳವಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. 120 ಜನರಿಗೆ ಉಚಿತ ತಪಾಸಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಡಾ.ತರುಣಕುಮಾರ, ಬಸವರಾಜ. ಶುಶ್ರೂಸಕಾಧಿಕಾರಿ ಡಿ.ದೇವಣ್ಣ, ನಂದಿನಿ, ಸಮುದಾಯ ಕೇಂದ್ರದಲ್ಲಿ ಸಿಂಬ್ಬದಿಯವರಾದ ಡಿ.ಎನ್.ಮಹ್ಮಮದ್, ಶೃತಿಕೋರಿ ಚಂದ್ರಶೇಖರ್ ಸೇರಿ ಅನೇಕರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 