ಕೃತಕ ಹೊಂಡದಲ್ಲಿ ಐದನೇ ದಿನದ ಗಣಪತಿಗಳ ವಿಸರ್ಜನೆ
Immersion of Ganesha on the fifth day in an artificial pond
ಜಮಖಂಡಿ 01: ನಗರದಲ್ಲಿ ಮನೆ-ಮನೆಗಳ ಪ್ರತಿಷ್ಠಾನ ಮಾಡಿದ ಐದನೇ ದಿವಸದ ಗಣಪತಿ ಮೂರ್ತಿಗಳನ್ನು ಕೃತಕ ಹೊಂಡದಲ್ಲಿ ಮುಳುಗಿಸಿ. ಲಕ್ಕನಕೆರೆಯಲ್ಲಿ ಸಾವಿರಾರು ಗಣೇಶನ ಮೂರ್ತಿಗಳನ್ನು ಡಿಜೆ ಸೌಂಡವಿಲ್ಲದೆ ಸಾರ್ವಜನಿಕರು ವಿಸರ್ಜನೆ ಮಾಡಿದರು.
ಲಕ್ಕನಕೆರೆಯ ಮುಂದೆ ನಗರಸಭೆಯ ಆಡಳಿತ ವರ್ಗದವರು ಕೃತಕ ಹೊಂಡಗಳನ್ನು ನಿರ್ಮಿಸಿದರು. ಮನೆಗಳಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಗಣೇಶನನ್ನು ಪ್ರತಿಷ್ಠಾನ ಮಾಡಿದ ಭಕ್ತರು ಶ್ರದ್ಧಾ, ಭಕ್ತಿಯಿಂದ ಪೂಜೆಯನ್ನು ಸಲಿಸಿ. ಪಟ್ಟಾಕಿಗಳನ್ನು ಸಿಡಿಸಿ. ಗಣೇಶ, ಗಣೇಶ ಮೋರಯಾ ಎಂದು ಘೋಷಣೆಯನ್ನು ಕೂಗುತ್ತಾ ಕೃತಕವಾಗಿ ನಿರ್ಮಿಸಿದ ಹೊಂಡದಲ್ಲಿ ಐದು ಬಾರಿ ಮುಳುಗಿಸಿದ ಬಳಿಕ ಬೃಹತ್‌ದಾದ ಲಕ್ಕನ ಕೆರೆಯಲ್ಲಿ ಗಣೇಶನ ಮೂರ್ತಿಗಳನ್ನು ವಿಸರ್ಜನೆ ಮಾಡಿದರು.
ಡಿಜೆ ಸೌಂಡ ಬಂದ:
ಸರಕಾರದ ಆದೇಶದ ಮೇರೆಗೆ ಡಿಜಿ ಸೌಂಡಗಳ ಸದ್ದು ಅಡಗಿದೆ. ಪ್ರತಿವರ್ಷವೂ ಸಾವಿರಾರು ಗಣೇಶಗಳ ವಿಸರ್ಜನೆ ಸಮಯದಲ್ಲಿ ಲಕ್ಷಾಂತರ ರೂ,ಗಳನ್ನು ಖರ್ಚು ಮಾಡಿ. ಡಿಜೆ ಹಚ್ಚುವ ಮೂಲಕ ಯುವಕರು ಕುಣಿದು ಕುಪ್ಪಳಿಸು ಜೊತೆಗೆ ಗಣೇಶನನ್ನು ಮೂರ್ತಿಗಳನ್ನು ವಿಸರ್ಜನೆ ಮಾಡುತ್ತಿದ್ದರು. ಆದರೆ ಈ ಬಾರಿ ಡಿಜೆ ಸೌಂಡ್‌ಗಳಿಗೆ ಅವಕಾಶ ನೀಡದ ಹನ್ನಲೆಯಲ್ಲಿ ಡಿಜೆ ಸೌಂಡ ಸದ್ದು ಅಡಗಿದೆ.
ಚಿಕ್ಕ-ಚಿಕ್ಕ ಸೌಂಡಬಾಕ್ಸ್‌ಗಳನ್ನು ಟ್ರ್ಯಾಕ್ಟರ್‌ಗಳಲ್ಲಿ ಅಳವಡಿಸಿಕೊಂಡು ಯುವಕರು ಜಾನಪದ ಗೀತೆಗಳನ್ನು ಹಾಗೂ ಚಲನಚಿತ್ರಗಳ ಗೀತೆಗಳನ್ನು ಹಕಿಕೊಂಡು. ಗಣೇಶನ ವಿಸರ್ಜನೆಯ ಸಮಯದಲ್ಲಿ ಟ್ರ್ಯಾಕ್ಟರ್‌ಗಳ ಮುಂದೆ ಕುಣಿದು ಕುಪ್ಪಳಿಸಿದ ಯುವಕರು.
ಸ್ವಚ್ಛತೆ :
ಗಣೇಶನ ವಿಸರ್ಜನೆಯ ಸಮಯದಲ್ಲಿ ಸಾರ್ವಜನಿಕರು ಬೇಕಾಬಿಟ್ಟಿಯಾಗಿ ಗಣೇಶನ ಮೇಲೆ ಹಾಕಿರುವ ಹೂವಿನ ಹಾರಗಳು ಹಾಗೂ ಕರಕೆ, ಎಲೆಗಳನ್ನುಗಳನ್ನು ಪೂಜೆಯನ್ನು ಸಲಿಸಿದ ಬಳಿಕ ವಸ್ತುಗಳನ್ನು ಬಿಸಾಕಿ ಹೋಗುವದಕ್ಕೆ ನಗರಸಭೆ ಪೌರಕಾರ್ಮಿಕರು ಬ್ರೇಕ್ ಹಾಕಿದ್ದಾರೆ. ಪ್ರತಿಯೊಬ್ಬರಿಗೆ ಖಡಕ್‌ಗಾಗಿ ಆದೇಶ ಮಾಡುವ ಮೂಲಕ ಕಸದ ಡಬ್ಬಿಗಳಲ್ಲಿ ಪೂಜೆಯನ್ನು ಸಲಿಸಿದ ವಸ್ತುಗಳನ್ನು ಕಸದ ಡಬ್ಬಿಗಳಲ್ಲಿ ಹಾಕಿ ಎಂದು ಹೇಳುವ ಮೂಲಕ ಸ್ವಚ್ಛತೆಯನ್ನು ಪೌರಕಾರ್ಮಿಕರು ಕಾರ್ಯನಿರ್ವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 