ಅಪ್ಪಟ ದೇಶಪ್ರೇಮಿ ಜಗದೀಶ್ ಹಡಪದ ಈ ಬಾರಿ ಅಶೋಕ ಚಕ್ರದ ಚಿತ್ತಾರದಲ್ಲಿ
Image of Ashoka Chakra on the back of the head
ರಾಣೇಬೆನ್ನೂರು 14 : ಅಪ್ಪಟ ದೇಶಪ್ರೇಮಿ, ಜಗದೀಶ್ ನಿಂಗಪ್ಪ ಹಡಪದ ಸ್ವಾತಂತ್ರ್ಯ ದಿನಾಚರಣೆ ಬಂತೆಂದರೆ ಈತನಿಗೆ ಬಲು ಹಿಗ್ಗು, ಮತ್ತು ಸಡಗರ ಸಂಭ್ರವೂ, ಸಂಭ್ರಮ. ವೃತ್ತಿಯಲ್ಲಿ ಕ್ಷೌರಿಕ, ಪ್ರವರ್ತಿಯಲ್ಲಿ ಗೃಹರಕ್ಷಕ ದಳದಲ್ಲಿ ಹೋಂ ಗಾರ್ಡ ಎಂದು ಕಳೆದ 32 ವರ್ಷಗಳಿಂದ ಸೇವೆಸಲಿಸುತ್ತಿದ್ದಾನೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ, ದೇಶದ ಅಭಿಮಾನದೊಂದಿಗೆ, ಕಳೆದ 18 ವರ್ಷಗಳಿಂದ ತನ್ನ ತಲೆಯ ಹಿಂಭಾಗ ಅಶೋಕ ಚಕ್ರದ ಚಿತ್ರವನ್ನು ಬಿಡಿಸಿಕೊಂಡು, ತನ್ನ ಕಾಯಕದೊಂದಿಗೆ ದೇಶಪ್ರೇಮ ಮೆರೆಯುವ ಅಪರೂಪದ ವ್ಯಕ್ತಿಯಾಗಿದ್ದಾನೆ.
ತಾಲೂಕು, ಜಿಲ್ಲೆ ಮತ್ತು ನಾಡಿನಲ್ಲಿ ತನ್ನ ಜನಪ್ರಿಯತೆ ಗಳಿಸಿರುವ ದೇಶಪ್ರೇಮಿ ಜಗದೀಶ್ ನಿಂಗಪ್ಪ ಹಡಪದ, ಈತನು ತಾಲೂಕಿನ ಮಾಗೋಡು ಗ್ರಾಮದ ಅಪ್ಪಟ ಗ್ರಾಮೀಣ ಸೊಗಡು ಮೈಗೂಡಿಸಿಕೊಂಡಿರುವ ಪ್ರತಿಭೆ. ತನ್ನ ಹಿರಿಯ ಅಧಿಕಾರಿಗಳ ಪ್ರೀತಿ, ವಿಶ್ವಾಸ, ಅಭಿಮಾನ ಗಳಿಸಿರುವ ಜಗದೀಶ್ ಜನಪ್ರಿಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾನೆ. ಈತನ ದೇಶ ಪ್ರೇಮ ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದೆ. ಭಾರತ ದೇಶದಲ್ಲಿ ಅದು ವಿಶೇಷವಾಗಿ ಕನ್ನಡ ನಾಡಿನಲ್ಲಿ ಜನ್ಮತಾಳುವುದೇ, ಪೂರ್ವಜನ್ಮದ ಸುಕೃತ ಫಲ ಎಂದು ಭಾವಿಸುವ ಹಡಪದ, ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂದು ತನ್ನ ಆತ್ಮಭಿಮಾನದಿಂದ ನು ಡಿಯುತ್ತಾನೆ.ಈತನ ದೇಶಪ್ರೇಮವನ್ನು ನೋಡಲು ಕಣ್ತುಂಬಿಕೊಳ್ಳಲು ನಾಡಿನಿಂದ ಸಾವಿರಾರು ಜನರು ಹರಿದು ಬರುವುದು ಈತನ ಹೆಮ್ಮೆ. ಈ ಬಾರಿ ವಿಶೇಷವಾಗಿ ತನ್ನ ತಲೆಯ ಹಿಂಭಾಗ ಅಶೋಕ ಚಕ್ರದ ಗುರುತಿನ ಬಣ್ಣ, ಬಣ್ಣದ ಚಿತ್ರ, ಚಿತ್ತಾರವನ್ನು ಬಿಡಿಸಿಕೊಂಡಿರುವ ಜಗದೀಶ್ ಹಡಪದ, ನಮ್ಮೂರಿನ ಹೆಮ್ಮೆ ಎನ್ನುತ್ತಾರೆ ಸಾರ್ವಜನಿಕರು, ಸಂಘ ಸಂಸ್ಥೆಗಳ ಮುಖಂಡರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 