ಅಕ್ರಮವಾಗಿ ಗಾಂಜಾ ಮಾರಾಟ: ಇಬ್ಬರ ಬಂಧನ ಒಟ್ಟು 1,91,200 ರೂ. ಮೌಲ್ಯದ ವಸ್ತು ವಶ

ಅಕ್ರಮವಾಗಿ ಗಾಂಜಾ ಮಾರಾಟ: ಇಬ್ಬರ ಬಂಧನ ಒಟ್ಟು 1,91,200 ರೂ. ಮೌಲ್ಯದ ವಸ್ತು ವಶ Illegal sale of ganja: Two arrested, total value of goods worth Rs. 1,91,200 seized

ಬೆಳಗಾವಿ 25: ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. 

ಗೋಕಾಕ ತಾಲೂಕಿನ ಮಲ್ಲಾಪೂರ ಪಿಜಿ, ಹಾಲಿಚಿಕ್ಕೋಡಿ ನಿವಾಸಿ ತಾಜೀಬ್ ಅಬ್ದುಲ್‌ರಜಾಕ ಮುಲ್ಲಾ(25) ಮತ್ತು ಸಂಕೇಶ್ವರ ನಿವಾಸಿ ಅನುರಾಗ ಉದಯಕುಮಾರ ಯರನಾಳಕರ ಬಂಧಿತ ಆರೋಪಿಗಳಾಗಿದ್ದಾರೆ. 

 ದಿ. 29ರಂದು ಎನ್‌ಎಚ್‌-48 ಸರ್ವಿಸ್ ರಸ್ತೆಯ ಚಿಗರಿಮಾಳ ಕ್ರಾಸ್ ಹಾಲಭಾವಿ ಹತ್ತಿರ ಅಕ್ರಮವಾಗಿ ಗಾಂಜಾ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಬೆಳಗಾವಿ ನಗರಕಂಟ್ರೋಲ್ ರೂಮ್ ಪಿಎಸ್‌ಐ ಮಂಜುನಾಥ ಹುಲಕುಂದ ಸಿಇಎನ್ ಠಾಣೆಯ ಸಿಬ್ಬಂದಿಯವರೊಂದಿಗೆ  ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಅವರಿಂದ 1,10,000 ರೂ. ಮೌಲ್ಯದ 5ಕೆಜಿ 652 ಗ್ರಾಂ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ರೂ. 60,000 ರೂ. ಮೌಲ್ಯದ ದ್ವಿಚಕ್ರ ವಾಹನ 2 ಮೋಬೈಲ್ ಫೋನ್ ಅಂದಾಜು ಮೌಲ್ಯ 21,000 ಮತ್ತು ಒಂದು ಬ್ಯಾಗ್ ವಶಪಡಿಸಿಕೊಂಡಿದ್ದಾರೆ.  ಆರೋಪಿಗಳ ವಿರುದ್ಧ ಬೆಳಗಾವಿ ನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. 

 ಮೆ  ಮೇಲ್ಕಂಡ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ ಅವರಿಂದ ಒಟ್ಟು 1,91,200 ರೂ. ಮೌಲ್ಯದ ಗಾಂಜಾ ದ್ವಿಚಕ್ರ ವಾಹನ, ಮೋಬೈಲ್ ಫೋನ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ನಡೆಸಿದ  

 ಬೆಳಗಾವಿ ನಗರಕಂಟ್ರೋಲ್ ರೂಮ್ ಪಿಎಸ್‌ಐ ಮಂಜುನಾಥ ಹುಲಕುಂದ ಸಿಇಎನ್ ಠಾಣೆಯ ಸಿಬ್ಬಂದಿ ತಂಡದ ಕಾರ್ಯವನ್ನು ಬೆಳಗಾವಿ ನಗರ  ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಅವರುಗಳು ಶ್ಲಾಘಿಸಿರುತ್ತಾರೆ.