ನಾಮ ಫಲಕದಲ್ಲಿ ಕನ್ನಡದ ಕಡೆಗಣನೆ

ನಾಮ ಫಲಕದಲ್ಲಿ ಕನ್ನಡದ ಕಡೆಗಣನೆ Ignoring Kannada on the nameplate

 

ಸಂಬರಗಿ, 17 : ರಾಜ್ಯ ಸರಕಾರ ಗಡಿ ಭಾಗದಲ್ಲಿ ಕನ್ನಡ ಉಳಿಸಿ ಕನ್ನಡ ಬೆಳೆಸಿ ಎಂದು ಆದೇಶ ಮಾಡಿದೆ. ಆದರೆ, ಸರಕಾರಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕನ್ನಡದ ಕಗ್ಗೊಲೆಯಾಗುತ್ತಿದೆ. 

ಅಥಣಿ ತಾಲೂಕಿನ ಗಡಿ ಭಾಗದ ಅರಳೀಹಟ್ಟಿ ಗ್ರಾಮದಿಂದ ಜೇವರಗಿ-ಸಂಕೇಶ್ವರ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗ ಮಧ್ಯೆ ಹಾಕಿರುವ ನಾಮಫಲಕದಲ್ಲಿ ಮದಭಾವಿ ಎಂದು ಬರೆಯಬೇಕಿತ್ತು ಆದರೆ, ಮದಬಾವಿ ಎಂದು ತಪ್ಪಾಗಿ ಬರೆದು ಹಾಕಿದ್ದಾರೆ.  

ಇದನ್ನು ಗಮನಿಸಿ ಕನ್ನಡಾಭಿಮಾನಿಗಳು ನಾಮಫಲಕದಲ್ಲಿ ಹೆಸರನ್ನು ಸರಿಯಾಗಿ ಬರೆದು ಹಾಕುವಂತೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಸರಿಪಡಿಸುವ ಕೆಲಸ ಮಾಡುತ್ತಿಲ್ಲ. ಆದ್ದರಿಂದ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಕನ್ನಡಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಲೋಕೋಪಯೋಗಿ ಇಲಾಖೆ ವತಿಯಿಂದ ಅರಳೀಹಟ್ಟಿ ಗಡಿಯಿಂದ ಜೇವರಗಿ ಸಂಕೇಶ್ವರ ಸಂಪರ್ಕ ರಸ್ತೆಯನ್ನು ಡಾಂಬರೀಕರಣ ಮಾಡಿ ಮೈಲುಗಲ್ಲು ಹಾಕಿದ್ದಾರೆ. ಅದರಲ್ಲಿ ಯಾವ ಗ್ರಾಮ ಬರುತ್ತದೆ? ಎಷ್ಟು ಕಿ.ಮೀ. ಅಂತರವಿದೆ ಎನ್ನುವುದನ್ನು ಅಳವಡಿಸಿದ್ದಾರೆ. ಆದರೆ, ಎರಡು ಮಾರ್ಗವಾಗಿ ಮದಭಾವಿ ಮೈಲುಗಲ್ಲು ಮೇಲೆ ಬರೆದಿರುವ ಅಕ್ಷರವು ತಪ್ಪಾಗಿದೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ 

ಸಹ ಯಾವುದೇ ಕ್ರಮಕೈಗೊಂಡಿಲ್ಲ. ಗಡಿಭಾಗದ ಎಲ್ಲ ಗ್ರಾಮಗಳ ಸಂಪರ್ಕ ರಸ್ತೆ ಮೇಲೆ ಬರೆದಿರುವ ಅಕ್ಷಗಳು ತಪ್ಪು ಇದ್ದು, ಇದರ ಬಗ್ಗೆ ಅಧಿಕಾರಿಗಳು ತಿಳಿಸಿ ಒಂದು ಕಳೆದರೂ ಕ್ರಮ ಕೈಗೊಂಡಿಲ್ಲ. ಈ ಕುರಿತು ಲೋಕೋಪಯೋಗಿ ಇಲಾಖೆಯ ಅಭಿಯಂತರಾದ ಮಲ್ಲಿಕಾರ್ಜುನು ಮಗದುಮ್ಮ ಇವರನ್ನು ಸಂಪರ್ಕಿಸಿದಾಗ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನಾದರೂ ಎಚ್ಚೆತ್ತು ಆಗಿರುವ ತಪ್ಪನ್ನು ಸರಿಪಡಿಸಿ ಕನ್ನಡ ಉಳಿಸುವ ಕಾರ‌್ಯ ಮಾಡುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.