ಪ್ರಾಮಾಣಿಕವಾಗಿ ವ್ಯಾಪಾರ ಮಾಡಿದರೆ ಲಾಭದಲ್ಲಿ ಪುಣ್ಯ ಗಳಿಸಲು ಸಾಧ್ಯ: ಬಸವರಾಜ ಬೊಮ್ಮಾಯಿ
If you do business honestly, you can earn virtue through profit: Basavaraja Bommai
ಬ್ಯಾಡಗಿ 28 : ಪ್ರಾಮಾಣಿಕವಾಗಿ ವ್ಯಾಪಾರ ಮಾಡಿದರೆ ಲಾಭದಲ್ಲಿ ಪುಣ್ಯ ಗಳಿಸಲು ಅವಕಾಶ ಇದೆ. ಯುವಕರು ಒಳ್ಳೆಯ ರೀತಿಯಿಂದ ಪ್ರಾಮಾಣಿಕವಾಗಿ, ನೈತಿಕತೆಯಿಂದ ವ್ಯಾಪಾರ ಮಾಡಿದರೆ ಲಾಭದ ಜೊತೆಗೆ ಪುಣ್ಯವೂ ಲಭಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂಬಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.ಇಂದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ತೆರೆದಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿದ ಸುದರ್ಶನ ಕೋಲ್ಡ್ ಸ್ಟೋರೇಜ್ ಇದರ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದರು. ಇವತ್ತು ಅತ್ಯಂತ ಸಂತಷದ ದಿನ ಬ್ಯಾಡಗಿಯಲ್ಲಿ ಕೋಲ್ಡ್ ಸ್ಟೋರೆಜ್ ಪ್ರಾರಂಭ ಆಗುತ್ತಿದೆ. ಒಟ್ಟು ನಲವತ್ರು ಕೋಲ್ಡ್ ಸ್ಟೋರೆಜ್ ಈ ವರ್ಷದಲ್ಲಿ ಬ್ಯಾಡಗಿ ಸುತ್ತ ಮುತ್ತ ತಲೆ ಎತ್ತುತ್ತಿವೆ. ಬ್ಯಾಡಗಿಯ ಮಾರುಕಟ್ಟೆಯನ್ನು ನಿರ್ಮಿಸಿರುವ ವ್ಯಾಪಾರಸ್ಥರು ಮತ್ತು ರೈತರ ಸಂಪೂರ್ಣ ಸಹಕಾರದಿಂದ ಬ್ಯಾಡಗಿ ಜಗತ್ ಪ್ರಸಿದ್ದ ವಾಗಿದೆ. ಇದಕ್ಕೆ ಸುಮಾರು ಐವತ್ತು ವರ್ಷದ ಪರಿಶ್ರಮ ಇದೆ. ಇಲ್ಲಿ ಬಹಳ ಸಣ್ಣ ಪ್ರಮಾಣದಲ್ಲಿ ಆರಂಭವಯಿತು.
ಆಗ ನಮ್ಮೂರು ಕಮಡೊಳ್ಳಿಯಲ್ಲಿ ಪಕ್ಕ ಜಾಗನೂರು ಅಂತ ಇದೆ. ಅಲ್ಲಿ ಹೆಚ್ಚು ಮೆಣಸಿನಕಾಯಿ ಬೆಳೆಯುತ್ತಾರೆ. ಜಾಗನೂರು ಸ್ಪೆಷಲ್ ಅಂತ ಮೆಣಸಿನಕಾಯಿ ಇದೆ. ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಾರೆ. ಬೇಸಿಗೆ ಸಮಯದಲ್ಲಿ ಹೋದರೆ ಎಲ್ಲ ಕೆಂಪು ಬಣ್ಣ ಕಾಣಿಸುತ್ತಿತ್ರು. ಅಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿತ್ತು. ಅದೆಲ್ಲವೂ ಬ್ಯಾಡಗಿಗೆ ಬರುತ್ತಿತ್ತು. ಅಣ್ಣಿಗೇರಿ ಮೆಣಸಿನಕಾಯಿ ಕೂಡ ಬಹಳ ಪ್ರಸಿದ್ದವಾಗಿದೆ. ಆ ಭಾಗದ ರೈತರ ಶ್ರಮ ಬ್ಯಾಡಗಿ ವ್ಯಾಪಾರಸ್ಥರ ಬುದ್ದಿವಂತಿಕೆಯಿಂದ ಬ್ಯಾಡಗಿ ಮೆಣಸಿನಕಾಯಿ ಜಗತ್ ಪ್ರಸಿದ್ದ ವಾಗಿದೆ. ಬ್ಯಾಡಗಿ ಎಪಿಎಂಸಿ ಅಂದರೆ ಬಹಳ ಶ್ರೀಮಂತ ಎಪಿಎಂಸಿ ಆಗಿದೆ. ಅಷ್ಟು ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ಆಗುತ್ತಿದೆ ಬ್ಯಾಡಗಿಯಲ್ಲಿ ಸಂಶೋಧನಾ ಕೇಂದ್ರದ ಬೇಡಿಕೆ ಇದೆ. ನಾವಿದ್ದಾಗ ಬಜೆಟ್ ನಲ್ಲಿ ಅನುಮೊದನೆ ಮಾಡಿದ್ದೇವು, ಈಗ ಅದನ್ನು ಅಳವಡಿಸಿಕೊಳ್ಳುವ ಭರವಸೆ ಇದೆ. ಬ್ಯಾಡಗಿ ಮೆಣಸಿನಕಾಯಿ ಸಂಶೋಧನೆ ಮಾಡಿ ಓಷಧಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜರ್ಮನಿ ಮತ್ತು ಫ್ರಾನ್ಸ್ ನಲ್ಲಿ ನೈಸರ್ಗಿಕವಾಗಿ ಬೆಳೆದ ಮೆಣಸಿನಕಾಯಿ ಓಷಧಿಗಳಲ್ಲಿ ಬಳಕೆ ಮಾಡುತ್ತಾರೆ. ಅದನ್ನು ಬಂಗಾರ ತೂಕ ಮಾಡಿದಂತೆ ಮಾಡುತ್ತಾರೆ.
ಮೆಣಸಿನಕಾಯಿ ಹಲವಾರು ರೀತಿ ಉಪಯೋಗ ಆಗುತ್ತಿದೆ ಎಂದು ಹೇಳಿದರು. ತಾಳ್ಮೆ ಮುಖ್ಯ ಬ್ಯಾಡಗಿ ಎಪಿಎಂಸಿ ಅತಿ ಹೆಚ್ಚು ಸೆಸ್ ಕೊಡುವ ಎಪಿಎಂಸಿ ಆಗಿದೆ. ಇವತ್ತು ಸುದರ್ಶನ್ ಕೋಲ್ಡ್ ಸ್ಟೋರೆಜ್ ಉಮೇಶ, ವಿನಾಯಕ ಮತ್ತು ಅವಿನಾಶ್ ಪಾಟೀಲ್ ಸೇರಿ ಕೋಲ್ಡ್ ಸ್ಟೋರೆಜ್ ಮಾಡಿದ್ದಾರೆ. ಇದು ಅತ್ಯಂತ ಯಶಸ್ವಿಯಾಗಿ ರೈತರಿಗೆ ಅನುಕೂಲ ಆಗಲಿ. ಪ್ರಾಮಾಣಿಕವಾಗಿ ವ್ಯಾಪಾರ ಮಾಡಿದರೆ ಲಾಭದಲ್ಲಿ ಪುಣ್ಯ ಗಳಿಸಲು ಅವಕಾಶ ಇದೆ.ನಾನು ಆದ್ಯಾತ್ಮ ಮತ್ತು ಅರ್ಥಶಾಸ್ತ್ರ ಅಧ್ಯಯನ ಮಾಡುತ್ತೇನೆ ನಾನು ಆರ್ಥಿಕತೆಯಲ್ಲಿ ಪಾಪ ಪುಣ್ಯ ನೋಡುತ್ತೇನೆ. ಆಧ್ಯಾತ್ಮದಲ್ಲಿ ಲಾಭ ನಷ್ಟ ನೋಡುತ್ತೇನೆ. ಇದರಲ್ಲಿ ಬಹಳಷ್ಡು ಹೊಸ ವಿಷಯಗಳು ಸಿಗುತ್ತದೆ. ಯುವಕರಿಗೆ ಒಳ್ಳೆಯ ರೀತಿಯಿಂದ ಪ್ರಾಮಾಣಿಕವಾಗಿ ವ್ಯಾಪಾರ ಮಾಡಿದರೆ ನೈತಿಕತೆಯಿಂದ ಲಾಭದ ಜೊತೆಗೆ ಪುಣ್ಯವೂ ಲಭಿಸುತ್ತದೆ.
ಪುಣ್ಯ ಗಳಿಸಿ ಲಾಭಗಳಿಸಿದರೆ ಅದು ಶಾಸ್ವತವಾಗಿರುತ್ತದೆ. ಮುಂದಿನ ಪೀಳಿಗೆಗೆ ಲಭಿಸುತ್ತದೆ. ಲಕ್ಷ್ಮಿ ಚಂಚಲ ಆದರೆ ನಾವು ಮಾಡಿರುವ ಚಟುವಟಿಕೆ ಶುದ್ದ ಅಂತಕರಣದಿಂದ ಮಾಡಿದರೆ ಲಕ್ಷ್ಮೀ ಕೂಡ ನಮ್ಮ ಜೊತೆಗೆ ಇರುತ್ತಾಳೆ. ಆದರೆ, ಅದಕ್ಕೆ ತಾಳ್ಮೆ ಮುಖ್ಯ. ತಾಳ್ಮೆಗೆ ದೊಡ್ಡ ಶಕ್ತಿ ಇದೆ. ತಾಳ್ಮೆಯಿಂದ ಕೆಲಸ ಮಾಡಿದರೆ ಎಲ್ಲವೂ ಲಭಿಸುತ್ತದೆ ಎಂದು ಹೇಳಿದರು.ಈ ಸಂಧರ್ಭದಲ್ಲಿ ಶ್ರೀ ಮ.ನಿ.ಪ್ರ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಸಂಸ್ಥಾನ ಗವಿಮಠ, ಕೊಪ್ಪಳ ಶ್ರೀಗಳು ಸಾನಿಧ್ಯ ವಹಿಸಿದ್ದರು. ಮಾಜಿ ಸಂಸದರಾದ ಸಂಗಣ್ಣ ಕರಡಿ, ಮಾಜಿ ಶಾಸಕರಾದ ವೀರುಪಾಕ್ಷಪ್ಪ ಬಳ್ಳಾರಿ, ಮುಖಂಡರುಗಳಾದ ಭರತ ಬೊಮ್ಮಾಯಿ, ಸಂತೋಷ ಪಾಟೀಲ್, ಮಾಲಕರಾದ ಅವಿನಾಷ ಪಾಟೀಲ್, ವಿನಾಯಕ ಮಾಳೇನಹಳ್ಳಿ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 