ಅನ್ನವನ್ನು ಪ್ರಸಾದ ಎಂದು ಸ್ವೀಕರಿಸಿದರೆ ಅದು ಅಮೃತವಾಗುತ್ತದೆ : ಛಬ್ಬಿ
If you accept food as prasad, it becomes nectar: Chhabbi
ಬಸವಾನಂದ ಶಾಲೆಯಲ್ಲಿ ಬಿಸಿ ಊಟದಲ್ಲೊಂದು ಖುಷಿ ಊಟ ಕಾರ್ಯಕ್ರಮ
ಮಹಾಲಿಂಗಪುರ, 12 : ಪ್ರತಿಯೊಂದು ಆಗಳು (ಕಾಳು)ಅನ್ನವು ಬ್ರಹ್ಮ ಸ್ವರೂಪ ಅದನ್ನು ಸ್ವೀಕರಿಸಬೇಕಾದರೆ ಅದನ್ನು ಪ್ರಸಾದ ಎಂದು ಸ್ವೀಕರಿಸಿದರೆ ಅದು ಅಣ್ಣ ಬೆಳೆಯುವ ದೇವರು ರೈತ ಮತ್ತು ಗುಡಿಯಲ್ಲಿರುವ ದೇವರ ಆಶೀರ್ವಾದದಿಂದ ಅಮೃತವಾಗುತ್ತದೆ. ಎಂದು ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಛಬ್ಬಿ ಹೇಳಿದರು.
ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಶ್ರೀ ಬಸವಾನಂದ ಶಾಲೆಯಲ್ಲಿ ಆಯೋಜಿಸಿದ ಬಿಸಿಯೂಟದಲ್ಲೊಂದು ಖುಷಿ ಊಟ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಕ್ಕಳಿಗೆ ಮಾದೇಲಿಯನ್ನೇ ತಿನಿಸುವುದರ ಮೂಲಕ ಸಿಹಿ ಊಟಕ್ಕೆ ಚಾಲನೆ ನೀಡಿ ಮಾತನಾಡಿ ಅನ್ನವನ್ನು ಪ್ರಸಾದ ರೂಪದಿಂದ ಸ್ವೀಕರಿಸಬೇಕು ಮತ್ತು ಈ ಅನ್ನ ನಮ್ಮ ಕೈ ಸೇರಬೇಕಾದರೆ ರೈತರು ಪಡುವಂತ ಪರಿಶ್ರಮವನ್ನು ನೆನಪಿಸಿಕೊಂಡು ನಾವು ಸ್ವೀಕರಿಸಬೇಕು. ಆಗಲೇ ಅಣ್ಣ ಬೆಳೆಯುವ ರೈತನಿಗೆ ಭೂ ತಾಯಿಗೆ ನಮಿಸಿದಂತಾಗುತ್ತದೆ.
ಶ್ರೀ ಬಸವಾನಂದ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯ ಅಡಿಯಲ್ಲಿ ಮಕ್ಕಳಿಗೆ ಬಿಸಿ ಊಟದ ಜೊತೆ ಸಿಹಿಯಾದ ಮಾದೇಲಿ ಸಿಹಿ ಊಟವನ್ನು ಬಡಿಸಲಾಯಿತು. ಹಾಲು ಮಾದೇಲಿ ತುಪ್ಪ ಅನ್ನ ಸಾರು ಸವಿದು ಮಕ್ಕಳು ಖುಷಿಪಟ್ಟು ಸಂಭ್ರಮಿಸಿದರು.ದಿನನಿತ್ಯ ಅನ್ನ ಸಾರು ಮಾತ್ರ ಸೇವಿಸುತ್ತಿದ್ದ ಮಕ್ಕಳಿಗೆ, ಹಿಂದೂಗಳ ಪವಿತ್ರ ಮಾಸ ಶ್ರಾವಣ ಮಾಸದಲ್ಲಿ ಸಿಹಿ ಊಟ ಮಾಡಿಸಿದ ಆಡಳಿತ ಮಂಡಳಿಯು ಮಾದೇಲಿಯನ್ನು ಮಾಡಿಸಿ ಉಣ ಬಡಿಸಿ ಮಕ್ಕಳ ಮುಖದಲ್ಲಿ ಮನಸ್ಸಿನಲ್ಲಿ ಖುಷಿ ಸಂಭ್ರಮ ಪಡುವಂತೆ ಮಾಡಿದರು. ಎಂದರು.
ನಂತರ ಮಾತನಾಡಿದ ಕೆ ಎಲ್ ಇ ಶಾಲೆಯ ಅಥಿತಿ ಉಪನ್ಯಾಸಕರಾದ ಶ್ರೀ ಶಿವಲಿಂಗ ಸಿದ್ನಾಳ ಶ್ರಾವಣವನ್ನು ಮಠ ಮಂದಿರಗಳಲ್ಲಿ ಮಾತ್ರ ಆಚರಣೆ ಮಾಡಲಾರದೆ ಶಾಲೆಯಲ್ಲಿಯೂ ಕೂಡ ಈ ರೀತಿ ವಿಶೇಷವಾಗಿ ಆಚರಿಸಬಹುದು ಸನಾತನ ಸಂಪ್ರದಾಯದಲ್ಲಿ ಈ ಕಾರ್ಯಕ್ಕೆ ವಿಶೇಷವಾಗಿರುವಂತಹ ಮಹತ್ವವಿದೆ. ಈ ಮಾಸದಲ್ಲಿ ದೇವರ ಆರಾಧನೆ ಅತ್ಯಂತ ಶ್ರೇಷ್ಠ, ಅದರಲ್ಲೂ ಶಿವನ ಆರಾಧನೆ ಅತ್ಯಂತ ಶ್ರೇಷ್ಠ ಅದರಲ್ಲೂ ಮಕ್ಕಳು ದೇವರ ಸ್ವರೂಪ ಮಕ್ಕಳೊಂದಿಗೆ ಆಚರಿಸುವುದು ದೇವರಿಗೆ ಪ್ರೀತಿ ಎಂದು ಹೇಳಿದರು.
ಈ ಸಂಧರ್ಭದಲ್ಲಿ 7 ನೇ ತರಗತಿಯ ಮಕ್ಕಳು ಪ್ರಾರ್ಥನಾ ಗೀತೆ ಹೇಳಿದರು. ಆರನೇ ತರಗತಿಯ ಮಕ್ಕಳು ಸಂಸ್ಕೃತ ಸ್ವಾಗತ ಗೀತೆಯನ್ನು ಹೇಳಿದರು. ಶಾಲೆಯ ಮುಖ್ಯ ಅಡುಗೆಯವರು ಸೇರಿದಂತೆ ಆರು ಜನ ಸಹಾಯಕ ಅಡುಗೆಯವರಿಗೆ ಸನ್ಮಾಸಿ ಗೌರವಿಸಲಾಯಿತು. ಶಾಲೆಯ ಮಕ್ಕಳು ಮಾದೇಲಿಯನ್ನು ತಯಾರಿಸಲು ಕಳೆದ ಎರಡು ಮೂರು ದಿನಗಳಿಂದ ಸಹಾಯ ಮಾಡಿದರು. ಶ್ರಾವಣ ಮಾಸದಲ್ಲಿ ಸಿಹಿ ಊಟವನ್ನು ಬಡಿಸಿದ ಶಾಲೆಯ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ ಪಾಲಕರು ಅಭಿನಂದಿಸಿದರು.
ಈ ಸಂಧರ್ಭದಲ್ಲಿ ಮುಖ್ಯ ಗುರುಗಳಾದ ಶ್ರೀ ಎಸ್ ಕೆ ಗಿಂಡೆ ಗುರುಗಳು ಪ್ರಾಸ್ತಾವಿಕ ಮಾತನಾಡಿದರು. ಈ ಮಾದೇಲಿ ಸಂಭ್ರಮಕ್ಕೆ ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು ಹಾಗೂ ಆಡಳಿತ ಮಂಡಳಿಯವರು ಸಹಕಾರ ನೀಡಿದ್ದು ವಿಶೇಷವಾಗಿತ್ತು. ಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯ ಅಡಿಯಲ್ಲಿ ಮಕ್ಕಳಿಗೆ ಬಿಸಿ ಊಟದ ಜೊತೆ ಸಿಹಿಯಾದ ಮಾದೇಲಿ ಸಿಹಿ ಊಟವನ್ನು ಬಡಿಸಲಾಯಿತು. ಹಾಲು ಮಾದೇಲಿ ತುಪ್ಪ ಅನ್ನ ಸಾರು ಸವಿದು ಮಕ್ಕಳು ಖುಷಿಪಟ್ಟು ಸಂಭ್ರಮಿಸಿದರು.ದಿನನಿತ್ಯ ಅನ್ನ ಸಾರು ಮಾತ್ರ ಸೇವಿಸುತ್ತಿದ್ದ ಮಕ್ಕಳಿಗೆ, ಹಿಂದೂಗಳ ಪವಿತ್ರ ಮಾಸ ಶ್ರಾವಣ ಮಾಸದಲ್ಲಿ ಸಿಹಿ ಊಟ ಮಾಡಿಸುವ ಆಡಳಿತ ಮಂಡಳಿಯು ಮಾದೇಲಿಯನ್ನು ಮಾಡಿಸಿ ಉಣ ಬಡಿಸಿ ಮಕ್ಕಳ ಮುಖದಲ್ಲಿ ಮನಸ್ಸಿನಲ್ಲಿ ಖುಷಿ ಸಂಭ್ರಮ ಪಡುವಂತೆ ಮಾಡಿದರು. ಕಾರ್ಯಕ್ರಮವನ್ನು ಶ್ರೀ ಹುಮಾಯುನ ಸುತಾರ ನಿರೂಪಿಸಿದರು. ಶ್ರೀ ಹಣಮಂತ ತಳವಾರ ಗುರುಗಳು ಸ್ವಾಗತಿಸಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 