ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ: ಆರ್ ಎಲ್ ಧರ್ಮಟ್ಟಿ
If we protect the environment, the environment will protect us: RL Dharmatti
ಯುರಗಟ್ಟಿ: ಪಂಚಭೂತಗಳಲ್ಲಿ ದೇವರನ್ನು ಕಾಣುವ ಸಂಸ್ಕೃತಿ ನಮ್ಮದು. ತೆಂಗು, ಆಲದಮರ, ಬನ್ನಿಮರ, ಇನ್ನಿತರ ಮರಗಳನ್ನು ದೈವ ಸ್ವರೂಪಿಯಾಗಿ ಕಾಣುತ್ತಾರೆ. ಪರಿಸರವನ್ನು ನಾಶ ಮಾಡುವುದನ್ನು ಮನುಷ್ಯ ಬಿಟ್ಟಿಲ್ಲ.
ರಸ್ತೆಗಳ ಅಗಲೀಕರಣ, ಕೆರೆಗಳ ಮುಚ್ಚುವಿಕೆ, ಕಾಡಿನ ನಾಶ, ಇದೇ ರೀತಿ ಪ್ರಕೃತಿ ನಾಶ ಆಗುತ್ತಿದೆ. ಪ್ರಾಣಿ ಸಂಕುಲ ಮನುಷ್ಯ ಸಂಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದನ್ನು ತಪ್ಪಿಸಬೇಕಾದರೆ ಗಿಡಗಳನ್ನು ನಾಟಿ ಮಾಡಿ ಸಂರಕ್ಷಣೆ ಮಾಡುವುದು ಅಗತ್ಯವಾಗಿದೆ. ಧರ್ಮಸ್ಥಳ ಸಂಘವು ಕೇವಲ ಸಾಲ ಕೊಡುವದಷ್ಟೇ ಅಲ್ಲದೆ ನೂರಾರು ಜನಪಯೋಗಿ ಯೋಜನೆ ಕೈಗೆತ್ತಿ ಕೊಂಡಿದೆ. ದುಶ್ಚಟ ಮುಕ್ತ ಸಮಾಜ ನಿರ್ಮಿಸಲು ಜನಜಾಗೃತಿ ವೇದಿಕೆ ಮಾಡುತ್ತಿರುವದು ಶ್ಲಾಘನೀಯವಾಗಿದೆ ಎಂದು ಗ್ರಾ.ಪಂ. ಸದಸ್ಯರಾದ ಆರ್. ಎಲ್. ಧರ್ಮಟ್ಟಿ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಯರಗಟ್ಟಿ ಇವರ ವತಿಯಿಂದ ಶನಿವಾರ ಸರಕಾರಿ ಪ್ರೌಢ ಶಾಲೆ ಮುಗಳಿಹಾಳದಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಮಾಜಿ ಸದಸ್ಯರಾದ ಶಿವಲೀಲಾ ದಳವಾಯಿ, ಮುಖ್ಯೋಪಾಧ್ಯಾಯ ಐ. ಜಿ. ಸುಬ್ಬಾಪೂರಮಠ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯರಗಟ್ಟಿ ಯೋಜನಾಧಿಕಾರಿ ಶ್ರೀಕಾಂತ್ ಎಂ, ಗ್ರಾ.ಪ.ಕಾರ್ಯದರ್ಶಿ ಕರೆಪ್ಪ ದೊಡ್ಡೆನ್ನವರ, ಮುಗಳಿಹಾಳ ಕೆಎಂಎಫ್ ಸದಸ್ಯರಾದ ಫಕೀರವ್ವ ಬಂಡಿಗಣಿ, ವಲಯದ ಮೇಲ್ವಿಚಾರಕರು ಶಶಿಕಲಾ ತಿರ್ಲಾಪುರ , ಧರ್ಮಸ್ಥಳ ಸಂಘದ ಮುಗಳಿಹಾಳ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ನುರ್ಜಾನ ಮುಲ್ತಾನಿ, ಈರಮ್ಮ ಹಿರೇಮಠ, ಬಸಮ್ಮ ದಳವಾಯಿ, ರೇಣುಕಾ ಹರಿಜನ, ಸೇವಾದಾರರಾದ ಪ್ರವೀಣ್ ಸೊಪ್ಪಡ್ಲ
ಪ್ರೌಢ ಶಾಲೆಯ ಸರ್ವ ಸಿಬ್ಬಂದಿ ವರ್ಗ ಹಾಗೂ ಸಂಘದ ಸದಸ್ಯರು, ವಿದ್ಯಾರ್ಥಿಗಳು, ಸತೀಶ ಹುಲಕುಂದ ಸ್ವಾಗತಿಸಿದರು. ಗೂಳಪ್ಪ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 