ಸಂಘಗಳು ಹುಟ್ಟಿಕೊಳ್ಳದಿದ್ದರೆ ಬಡವರು ಇಂದಿಗೂ ಸಹ ಶ್ರೀಮಂತರ ಬಳಿ ಕೈಚಾಚಬೇಕಿತ್ತು
If unions had not arisen, the poor would still have to reach out to the rich
ಹಾನಗಲ್ 09 :ಸಹಕಾರಿ ಕ್ಷೇತ್ರ ಬಡವರಿಗೆ ವರದಾನವಿದ್ದಂತೆ. ಸಹಕಾರ ಕ್ಷೇತ್ರದಡಿ ಸಂಘಗಳು ಹುಟ್ಟಿಕೊಳ್ಳದಿದ್ದರೆ ಬಡವರು ಇಂದಿಗೂ ಸಹ ಶ್ರೀಮಂತರ ಬಳಿ ಕೈಚಾಚಬೇಕಿತ್ತು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ತಾಲೂಕಿನ ಮಾರನಬೀಡ ಗ್ರಾಮದಲ್ಲಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಶತಮಾನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರ ಸಂಘಗಳು ಸ್ವತಂತ್ರವಾಗಿ ಬೆಳೆಯಬೇಕು. ಆಡಳಿತದಲ್ಲಿ ರಾಜಕಾರಣ ನುಸುಳಿ, ಒಳಜಗಳ ನಡೆದರೆ ಅಪಾಯ ಕಟ್ಟಿಟ್ಟಬುತ್ತಿ. ಸಹಕಾರಿ ಸಂಘಗಳ ಏಳಿಗೆಯಲ್ಲಿ ಪಕ್ಷಾತೀತವಾಗಿ ಎಲ್ಲರೂ ಸಹ ಕೈ ಜೋಡಿಸಬೇಕಿದೆ. ತಾಲೂಕಿನಲ್ಲಿ ಸಹಕಾರಿ ಕ್ಷೇತ್ರ ಆಶಾದಾಯಕ ಬೆಳವಣಿಗೆಯಲ್ಲಿ ಸಾಗಿದ್ದು, ಏಳೆಂಟು ಸಂಘಗಳು ಶತಮಾನೋತ್ಸವ ಆಚರಿಸಿಕೊಂಡು ಮುನ್ನಡೆದಿವೆ. ಸಂಘಗಳು ಇನ್ನಷ್ಟು ಗಟ್ಟಿಯಾಗಿ ಬೆಳೆದು ನಿಲ್ಲಲು ಸಮುದಾಯದ ಸಹಭಾಗಿತ್ವ ಅಗತ್ಯವಾಗಿದೆ ಎಂದು ಹೇಳಿದ ಅವರು ಸಂಘಕ್ಕೆ ಶಾಸಕರ ಅನುದಾನದಡಿ 10 ಲಕ್ಷ ರೂ. ಅನುದಾನದ ಭರವಸೆ ನೀಡಿದರು.
ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ ವ್ಯಕ್ತಿಗೆ ನೂರು ವರ್ಷ ಆಗುವುದು ದೊಡ್ಡದಲ್ಲ, ಸಂಸ್ಥೆಗೆ ಆಗುವುದು ದೊಡ್ಡ ವಿಷಯ. ಗ್ರಾಮೀಣ ಪ್ರದೇಶದಲ್ಲಿ ಮೊದಲೆಲ್ಲ ಕೈಯಿಂದ ಬಂಡವಾಳ ಹಾಕಿ ಸಂಘ ಮುನ್ನಡೆಸಿದ ಉದಾಹರಣೆಗಳು ಸಾಕಷ್ಟಿವೆ. ಸಹಕಾರಿ ಕ್ಷೇತ್ರದ ಸಂಘಗಳು ಗ್ರಾಮೀಣ ಪ್ರದೇಶದ ಬದುಕನ್ನು ಪ್ರತಿನಿಧಿಸಲಿವೆ.ಸಂಘಕ್ಕೆ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಡಿ 10 ಲಕ್ಷ ರೂ. ನೀಡುವ ಭರವಸೆ ನೀಡಿದರು. ಸಾನ್ನಿಧ್ಯ ವಹಿಸಿದ್ದ ಹೋತನಹಳ್ಳಿಯ ಸಿದ್ದಾರೂಢ ಮಠದ ಶಂಕರಾನಂದ ಸ್ವಾಮೀಜಿ ಮಾತನಾಡಿ, ಮಾರನಬೀಡದ ಸಹಕಾರಿ ಸಂಘ ಉತ್ತಮವಾಗಿ ಕೆಲಸ ಮಾಡಿಕೊಂಡು ಈ ಭಾಗದ ಜನರ ಬದುಕು ಬೆಳಗಿದೆ ಎಂದರು.
ಸಂಘದ ಅಧ್ಯಕ್ಷ ಬಸಪ್ಪ ಚನ್ನಕ್ಕನವರ, ಗ್ರಾಪಂ ಅಧ್ಯಕ್ಷ ಈರಣ್ಣ ಜಾಡರ, ಉಪಾಧ್ಯಕ್ಷೆ ನಗೀನಾಬಾನು ಹರವಿ, ಬಗರಹುಕುಂ ಸಮಿತಿ ಅಧ್ಯಕ್ಷ ಪುಟ್ಟಪ್ಪ ನರೇಗಲ್, ಕೆಎಂಎಫ್ ನಿರ್ದೇಶಕ ಚಂದ್ರ್ಪ ಜಾಲಗಾರ, ಜಿಪಂ ಮಾಜಿ ಸದಸ್ಯ ಟಾಕನಗೌಡ ಪಾಟೀಲ, ಭರಮಣ್ಣ ಶಿವೂರ, ಗ್ರಾಪಂ ಸದಸ್ಯರಾದ ಬಸಪ್ಪ ಒಡೆಯರ, ಸಹದೇವಪ್ಪ ಸಂಶಿ, ರತ್ನವ್ವ ಗುಡಗೇರಿ, ಸರೋಜಾ ಭಜಂತ್ರಿ, ಹುಸೇನಸಾಬ ಭಾವನವರ, ಮಾಲತೇಶ ನಿಸ್ಸೀಮಣ್ಣನವರ, ಪ್ರಕಾಶ ಈಳಿಗೇರ, ನೂರ್‌ಅಹ್ಮದ್ ಹರವಿ, ಪ್ರಕಾಶ ಕೋಳೂರ, ಫಕ್ಕೀರ್ಪ ಆಲದಕಟ್ಟಿ, ಫಕ್ಕೀರ್ಪ ಈಳಿಗೇರ, ಈರಣ್ಣ ಸೂಲಿ, ಸುರೇಶ ಕಾಶೆಂಬಿ, ರಾಜಶೇಖರ ಕಟ್ಟೇಗೌಡ್ರ, ಹನುಮಂತಪ್ಪ ಗಂಜೀಗಟ್ಟಿ, ಮಲ್ಲೇಶಪ್ಪ ಕರೆಪ್ಪನವರ, ಶಂಕ್ರ್ಪ ಹರ್ಲಾಪೂರ, ಸಿದ್ದಪ್ಪ ಚೆಂಗಳೆಮ್ಮನವರ, ಮಲ್ಲಪ್ಪ ನೆರ್ಕಿಮನಿ, ಎನ್.ಬಿ.ವಡ್ಡರ, ನಾಗರಾಜ ಮಡಿವಾಳರ ಸೇರಿದಂತೆ ಇನ್ನಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 