ವಿಧಾನಸಭಾ ಕ್ಷೇತ್ರದ ಮತದಾರರು ಮತ್ತೊಮ್ಮೆ ನನಗೆ ಅವಕಾಶ ನೀಡಿದರೆ ಶಾಸಕನಾಗುತ್ತೆನೆ: ಬಸವರಾಜ್ ಶಿವಣ್ಣನವರ್

   ವಿಧಾನಸಭಾ  ಕ್ಷೇತ್ರದ ಮತದಾರರು ಮತ್ತೊಮ್ಮೆ ನನಗೆ ಅವಕಾಶ ನೀಡಿದರೆ ಶಾಸಕನಾಗುತ್ತೆನೆ: ಬಸವರಾಜ್ ಶಿವಣ್ಣನವರ್ If the voters of the assembly constituency give me another chance, I will become an MLA: Basavaraj S

ಲೋಕದರ್ಶನ ವರದಿ 

ಬ್ಯಾಡಗಿ 30:  ವಿಧಾನಸಭಾ  ಕ್ಷೇತ್ರದ ಮತದಾರರು ಮತ್ತೊಮ್ಮೆ ನನಗೆ ಅವಕಾಶ ನೀಡಿದರೆ ನಾನೇ ಮತ್ತೊಮ್ಮೆ ಶಾಸಕನಾಗಿ ನಿಮ್ಮ ಸೇವೆಯನ್ನು ಮಾಡುತ್ತೇನೆ ಎಂದು ಶಾಸಕ ಬಸವರಾಜ್ ಶಿವಣ್ಣನವರ್ ಅಭಿಪ್ರಾಯ ಪಟ್ಟರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸುವ ಮೂಲಕ ಮಾತನಾಡಿದವರು ಕಳೆದ ಫೆಬ್ರವರಿ ತಿಂಗಳಲ್ಲಿ ನನಗೆ ಹೃದಯ ಸಂಬಂಧಿ ಕಾಯಿಲೆಯಿಂದ ನನ್ನ ಆರೋಗ್ಯದಲ್ಲಿ ಏರುಪೇರಾಗಿತ್ತು ಕಾರಣ ನಾನು ಕೆಲ ತಿಂಗಳು ಕ್ಷೇತ್ರಕ್ಕೆ ಆಗಮಿಸಿರಲಿಲ್ಲ ಹೀಗಂತ ಕ್ಷೇತ್ರದಲ್ಲಿ ಅನೇಕ ಜನರು ನನ್ನ ಬಗ್ಗೆ ಊಹಾಪೋಹಗಳನ್ನು ಮಾತನಾಡುತ್ತಿದ್ದರು ಅದಕ್ಕೆ ಇಂದು ನಾನು ತೆರೆ ಎಳೆಯುವ ಕೆಲಸ ಮಾಡಿದ್ದೇನೆ ಇದೀಗ ಅನಾರೋಗ್ಯದಿಂದ ಮುಕ್ತನಾಗಿ ಕ್ಷೇತ್ರಕ್ಕೆ ಮರಳಿ ಆಗಮಿಸಿದ್ದೇನೆ ಎಂದಿನಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ನಾನು ಭಾಗಿಯಾಗಿ ನನ್ನ ಕ್ಷೇತ್ರದ ಕೆಲಸಗಳನ್ನು ನಾನು ಮಾಡುತ್ತೇನೆ ಎಂದು ಹೇಳಿದರು.

ನನಗೆ ಮರುಜನ್ಮ ಬಂದಂಗಾಗಿದೆ ಇನ್ನು ನನಗೆ 20 ವರ್ಷ ಆಯಸ್ಸು ಹೆಚ್ಚಾಗಿದೆ ಜನರ ಆಶೀರ್ವಾದದಿಂದ ನಾನು ಆರೋಗ್ಯವಾಗಿದ್ದೇನೆ. ರಾಜಕೀಯದಲ್ಲಿ ನನಗೆ 35 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇವೆ ಎಂಟು ಬಾರಿ ಚುನಾವಣೆಯಲ್ಲಿ ನಿಂತು ನಾಲ್ಕು ಬಾರಿ ಗೆದ್ದಿದ್ದೇನೆ ನಾಲ್ಕು ಬಾರಿ ಸೋತಿದ್ದೇನೆ ನಾನು ಅಕಸ್ಮಾತಾಗಿ ರಾಜಕೀಯಕ್ಕೆ ಬಂದಿದ್ದು ಹಾವೇರಿಯಲ್ಲಿ ಎರಡು ಸಲ ಶಾಸಕನಾಗಿ ಕೆಲಸ ಮಾಡಿದ್ದೇನೆ ಮತ್ತು ಎರಡು ಸಲ ಬ್ಯಾಡಗಿ ಕ್ಷೇತ್ರದಲ್ಲಿ ಶಾಸಕರಾಗಿ ಕೆಲಸ ಮಾಡಿದ್ದೇನೆ ಜನರ ಅಪೇಕ್ಷೆಯ ಮೇರೆಗೆ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧನಾಗಿದ್ದೇನೆ ನನಗೆ ಟಿಕೆಟ್ ಕೊಟ್ಟರೆ ಮತ್ತೊಮ್ಮೆ ನಾನು ಕ್ಷೇತ್ರದಲ್ಲಿ ಆರಿಸಿ ಬಂದು ನಿಮ್ಮ ಸೇವೆ ಮಾಡಲು ಸಿದ್ಧನಿದ್ದೇನೆ. ನಮ್ಮ ಕಾಂಗ್ರೆಸ್ ಸರ್ಕಾರದ ಮಹಿಳೆಯರ ಗ್ಯಾರಂಟಿ ಯೋಜನೆಗಳು ಕಳೆದ ಮೂರು ವರ್ಷದಿಂದ ನೂರಾರು ಕೋಟಿಯಷ್ಟು ನನ್ನ ಕ್ಷೇತ್ರಕ್ಕೆ ಗ್ಯಾರೆಂಟಿ ಯೋಜನೆಗಳ ಅನುದಾನ ಬಂದಿರುತ್ತದೆ ಹಾಗಾಗಿ ಸರ್ಕಾರದ ಈ ಕಾರ್ಯಕ್ರಮ ಮಹತ್ವಕಾಂಕ್ಷಿಯ ಕಾರ್ಯಕ್ರಮವಾಗಿದೆ ಇದರಿಂದ ಮಹಿಳೆಯರ ಸಬಲೀಕರಣವಾಗಿದೆ ಮತ್ತು ಬಡವರ್ಗದವರಿಗೆ ಆರ್ಥಿಕವಾಗಿ ಸಬಲೀಕರಣವಾಗಿದ್ದಾರೆ ಎಂದು ಹೇಳಿದರು.  

ಇದೇ ವೇಳೆ ಮುಖ್ಯರಸ್ತೆ ಬಗ್ಗೆ ಮಾತನಾಡಿ ಮುಖ್ಯರಸ್ತೆ ಅಗಲೀಕರಣಕ್ಕೆ ನಾನು ಸಂಕಲ್ಪ ತೊಟ್ಟಿದ್ದು ನನ್ನ ಅವಧಿಯಲ್ಲಿಯೇ ಮುಖ್ಯರಸ್ತೆ  ಅಗಲೀಕರಣ ಮಾಡುತ್ತೇನೆ ಮುಖ್ಯ ರಸ್ತೆಯಲ್ಲಿರುವ ನಿವಾಸಿಗಳ ವಿಶ್ವಾಸ ಪಡೆದು ಮತ್ತು ಮುಖ್ಯ ರಸ್ತೆಯ ಹೋರಾಟ ಸಮಿತಿ ಅವರು ಮತ್ತು ಮಾಜಿ ಶಾಸಕರು ಗಳ ವಿಶ್ವಾಸ ಪಡೆದು ಕೇವಲ ಒಂದು ತಿಂಗಳಲ್ಲಿ ಮುಖ್ಯ ರಸ್ತೆ ಅಗಲೀಕರಣವಾಗುತ್ತದೆ ಇದಕ್ಕಾಗಿ 13.5 ಕೋಟಿ ಅನುದಾನವನ್ನು ಇಡಲಾಗಿದೆ.ಇನ್ನೂ ಮನೆ ಮಾಲೀಕರ ಬಾಕಿ 16 ಕೋಟಿ ಮೊತ್ತವನ್ನು ನೀಡಿ ಈಗಾಗಲೇ 11 ಕೋಟಿ ಎಷ್ಟು ಪರಿಹಾರವನ್ನು ಮನೆ ಮಾಲೀಕರಿಗೆ ನೀಡಿದ್ದೇವೆ ಇನ್ನುಳಿದ ಬಾಕಿ 16 ಕೋಟಿಯನ್ನು ಕೂಡಲೇ ಬಿಡುಗಡೆ ಮಾಡಲಾಗುವುದು .ಮತ್ತು ಈಗಾಗಲೇ ಕ್ಷೇತ್ರಕ್ಕೆ 50 ಕೋಟಿ ಮುಖ್ಯಮಂತ್ರಿಗಳ ನಿಧಿಯಲ್ಲಿ 12 ಕೋಟಿ ಎಷ್ಟು ಟಿ ಆರ್ ಡಿ ಗೆ ಮತ್ತು 25 ಕೋಟಿಯಷ್ಟು ಝೆಡ್ ಪಿ ಇಲಾಖೆಗೆ ಮತ್ತು ಸುಮಾರು 13 ಕೋಟಿಯಷ್ಟು ಕ್ಷೇತ್ರದ ದೇವಸ್ಥಾನಗಳ ಅಭಿವೃದ್ಧಿಗೆ ನೀಡಿದ್ದೇನೆ.

ನನ್ನ ಅವಧಿಯ ಮೂರು ವರ್ಷದಲ್ಲಿ ಏಳರಿಂದ ಎಂಟು ನೂರು ಕೋಟಿಗಳಷ್ಟು ಅನುದಾನವನ್ನು ಕ್ಷೇತ್ರಕ್ಕೆ ತರಲಾಗಿದೆ ಎಂದು ಹೇಳಿದರು ಶೀಘ್ರದಲ್ಲಿಯೇ ಕಾಕೋಳ ರಸ್ತೆಯಲ್ಲಿ ನೂತನ ಬಸ್ ನಿಲ್ದಾಣಕ್ಕೆ ಈಗಾಗಲೇ ಜಾಗವನ್ನು ವಾಯುವ್ಯ ಸಾರಿಗೆ ಸಂಸ್ಥೆಗೆ ನೀಡಲಾಗಿದ್ದು ಎರಡು ಕೋಟಿ ಹಣವನ್ನು ನೀಡಲಾಗುತ್ತದೆ ಎಂದರು.ಗುಡ್ಡದ ಮಲ್ಲಾಪುರ ಏತ ನೀರಾವರಿ ಕೆರೆಗಳ ಜೋಡಣೆಗೆ ಶೀಘ್ರದಲ್ಲಿಯೇ 115 ಕೋಟಿ ಅನುದಾನ ಬಿಡುಗಡೆಯಾಗಲಿದ್ದು ಕೆಲವೇ ದಿನಗಳಲ್ಲಿ ಕಾಮಗಾರಿ ಉದ್ಘಾಟನೆ ಆಗಲಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ತಾಲೂಕು ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ. ಕಾಗಿನೆಲೆ ಬ್ಲಾಕ್ ಅಧ್ಯಕ್ಷ ಶಿವನಗೌಡ ಪಾಟೀಲ್ ಕಾರ್ಯದರ್ಶಿ ರಮೇಶ್ ಸುತ್ತುಕೋಟಿ. ಬೀರ​‍್ಪ ಬಣಕಾರಿ​‍್ಡ ಎಚ್ ಬುಡ್ಡನಗೌಡ.  ಡಾ. ಎ ಎಂ ಸೌಧಾಗರ್‌. ಶಂಬನಗೌಡ ಪಾಟೀಲ. ದುರ್ಗೇಶ್ ಗೋಣೆಮ್ಮನವರ್‌. ಚನ್ನಬಸಪ್ಪ ಹುಲ್ಲತ್ತಿ. ಅಬ್ದುಲ್ ಮುನಾಫ್ ಏರೀಸೀಮೆ. ಖಾದರ್ ಸಾಬ್ ದೊಡ್ಮನಿ. ಮಜಿದ್ ಮುಲ್ಲಾ. ಜೈ ಭೀಮ್ ರಾರಾವಿ. ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.