ವರಮಹಾಲಕ್ಷ್ಮೀ ವ್ರತ ಭಕ್ತಿಯಿಂದ ಆಚರಿಸಿದರೆ ತಾಯಿ ಲಕ್ಷ್ಮೀ ಮನೆಗೆ ಬರುತ್ತಾಳೆ: ಬಿ.ಎಸ್. ಹಡಪದ
If the Varamahalakshmi Vrata is observed with devotion, Mother Lakshmi will come to the home: B.S. H
ಲಕ್ಷ್ಮೇಶ್ವರ, ಆಗಸ್ಟ್ 22: ಶ್ರಾವಣ ಮಾಸದ ಹುಣ್ಣಿಮೆಗೆ ಮುನ್ನ ಬರುವ ಶುಕ್ರವಾರದಂದು ವರಮಹಾಲಕ್ಷ್ಮೀ ವ್ರತವನ್ನು ಭಕ್ತಿಯಿಂದ ಆಚರಿಸಲಾಗುತ್ತದೆ. ಪಟ್ಟಣದ ಶಿಕ್ಷಕ ಬಿ.ಎಸ್. ಹಡಪದ ಅವರ ನಿವಾಸದಲ್ಲಿಯೂ ವರಮಹಾಲಕ್ಷ್ಮೀ ವ್ರತವನ್ನು ಶ್ರದ್ಧಾ-ಭಕ್ತಿಯಿಂದ ಹಾಗೂ ಸಂಭ್ರಮದಿಂದ ಕುಟುಂಬಸ್ಥರೆಲ್ಲರೂ ಸೇರಿ ಆಚರಿಸಿದರು.
ಈ ಸಂದರ್ಭದಲ್ಲಿ ವರಮಹಾಲಕ್ಷ್ಮೀ ವ್ರತದ ಆಚರಣೆಯ ಮಹತ್ವ ಕುರಿತು ಮಾತನಾಡಿದ ಶಿಕ್ಷಕ ಬಿ.ಎಸ್. ಹಡಪದ ಅವರು, “ವರಮಹಾಲಕ್ಷ್ಮೀ ವ್ರತವನ್ನು ಭಕ್ತಿಯಿಂದ ಆಚರಿಸುವುದರಿಂದ ತಾಯಿ ಲಕ್ಷ್ಮೀ ಮನೆಯಲ್ಲಿ ನೆಲೆಸುತ್ತಾಳೆ. ಅಷ್ಟಲಕ್ಷ್ಮೀಯರ ಪೂಜೆಯ ಫಲ ದೊರೆಯುವುದರೊಂದಿಗೆ ಕುಟುಂಬದಲ್ಲಿ ಸಂಪತ್ತು, ಧಾನ್ಯ, ಸುಖ, ಶಾಂತಿ ಹಾಗೂ ಆಯುರಾರೋಗ್ಯ ವೃದ್ಧಿಯಾಗುತ್ತದೆ” ಎಂದರು.
ವರಮಹಾಲಕ್ಷ್ಮೀ ವ್ರತವು ಧನ-ಧಾನ್ಯ ಸಮೃದ್ಧಿ ಹಾಗೂ ಕುಟುಂಬದ ನೆಮ್ಮದಿಗಾಗಿ ಆಚರಿಸುವ ಪ್ರಮುಖ ವ್ರತವಾಗಿದೆ. ಈ ವ್ರತದ ಆಚರಣೆಯಿಂದ ಮನೆಯಲ್ಲಿ ಹಣದ ಕೊರತೆ ನಿವಾರಣೆಯಾಗಿ, ಧಾನ್ಯ ಸಮೃದ್ಧಿ ಉಂಟಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ಅಷ್ಟಲಕ್ಷ್ಮೀಯರಾದ ಆದಿ ಲಕ್ಷ್ಮೀ, ಧನ ಲಕ್ಷ್ಮೀ, ಧಾನ್ಯ ಲಕ್ಷ್ಮೀ, ಗಜ ಲಕ್ಷ್ಮೀ, ಸಂತಾನ ಲಕ್ಷ್ಮೀ, ಧೈರ್ಯ ಲಕ್ಷ್ಮೀ, ವಿಜಯ ಲಕ್ಷ್ಮೀ ಹಾಗೂ ವಿದ್ಯಾ ಲಕ್ಷ್ಮೀ ಅವರ ಅನುಗ್ರಹವನ್ನು ಪಡೆಯಲು ಈ ವ್ರತವನ್ನು ಶ್ರದ್ಧೆಯಿಂದ ಆಚರಿಸಲಾಗುತ್ತದೆ.
ವಿವಾಹಿತ ಮಹಿಳೆಯರು ವರಮಹಾಲಕ್ಷ್ಮೀ ವ್ರತ ಆಚರಿಸುವುದರಿಂದ ಪತಿಯ ಆಯುಷ್ಯ ವೃದ್ಧಿಯಾಗುತ್ತದೆ ಹಾಗೂ ಕುಟುಂಬದಲ್ಲಿ ನೆಮ್ಮದಿ ನೆಲೆಸುತ್ತದೆ ಎಂಬ ನಂಬಿಕೆಯಿದೆ. ಭಕ್ತರು ಬೇಡಿಕೊಳ್ಳುವ ಇಷ್ಟಾರ್ಥಗಳು ಹಾಗೂ ವರಗಳನ್ನು ತಾಯಿ ಲಕ್ಷ್ಮೀ ಕರುಣಿಸುತ್ತಾಳೆ ಎಂಬ ನಂಬಿಕೆಯೇ ವರಮಹಾಲಕ್ಷ್ಮೀ ಹಬ್ಬಕ್ಕೆ ವಿಶೇಷ ಮಹತ್ವ ನೀಡಿದೆ.
ಈ ಹಿನ್ನೆಲೆಯಲ್ಲಿ ಬಿ.ಎಸ್. ಹಡಪದ ಅವರ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಬಂಧುಗಳು ಭಕ್ತಿಭಾವದಿಂದ ಪೂಜೆ ನೆರವೇರಿಸಿ ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 