ಹಾವೇರಿ21: ಮಾಹಿತಿ ಹಕ್ಕು ಕಾಯ್ದೆ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತಕ್ಕೆ ಸಹಕಾರಿಯಾಗಿದೆ. ಸಾರ್ವಜನಿಕ ಆಡಳಿತದ ಮಾಹಿತಿ ತಿಳಿದುಕೊಳ್ಳುವ ಹಕ್ಕು ಸಾರ್ವಜನಿಕರಿಗೆ ಈ ಕಾಯ್ದೆ ಒದಗಿಸಿಕೊಟ್ಟಿದೆ. ಸಕರ್ಾರಿ ಕಚೇರಿಗಳಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೊಳಿಸದಿದ್ದರೆ ಅಪರಾಧವಾಗುತ್ತದೆ ಎಂದು ಕನರ್ಾಟಕ ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ಕೆ.ಎಂ.ಚಂದ್ರೇಗೌಡ ಅವರು ಹೇಳಿದರು.
ಕನರ್ಾಟಕ ಮಾಹಿತಿ ಹಕ್ಕು ಆಯೋಗದಿಂದ ಹಾವೇರಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಮಾಹಿತಿ ಹಕ್ಕು ಕಾಯ್ದೆ ಕುರಿತ ಜಾಗೃತಿ ಕಾಯರ್ಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಕರ್ಾರದ ವಿವಿಧ ಇಲಾಖೆಗಳಲ್ಲಿ ತಮಗೆ ಬೇಕಾದ ಮಾಹಿತಿಯ ದಾಖಲೆಗಳನ್ನು ಪಡೆದುಕೊಳ್ಳುವುದು ಪ್ರತಿಯೊಬ್ಬ ಜನಸಾಮಾನ್ಯನ ಹಕ್ಕಾಗಿದೆ. ಈ ಹಕ್ಕನ್ನು ಯಾವ ಅಧಿಕಾರಿಗಳು ನಿರಾಕರಿಸುವಂತಿಲ್ಲ. ಒಂದೊಮ್ಮೆ ಮಾಹಿತಿ ನೀಡಲು ನಿರಾಕರಿಸಿದರೆ ವಿಳಂಬಮಾಡಿದರೆ ಆಯೋಗ ಜನಸಾಮಾನ್ಯರಿಗೆ ಮಾಹಿತಿಯನ್ನು ಕೊಡಿಸುವ ಜವಾಬ್ದಾರಿಯನ್ನು ಹೊಂದಿದೆ. ಆದರೆ ತಪ್ಪು ಮಾಹಿತಿ ನೀಡಿದರೆ ನೀಡಿದ ಮಾಹಿತಿಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಅಜರ್ಿದಾರರಿಗೆ ಅನುಮಾನಗಳಿದ್ದರೆ ಇಂತಹ ಪ್ರಕರಣಗಳ ತನಿಖೆಯನ್ನು ಮಾಹಿತಿಹಕ್ಕು ಆಯೋಗ ಮಾಡುವುದಿಲ್ಲ. ಇಂತಹ ಪ್ರಕರಣಗಳನ್ನು ಅಜರ್ಿದಾರರು ಆಯಾ ಇಲಾಖೆಯ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿ ತನಿಖೆಗೆ ಮನವಿಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಮಾಹಿತಿ ಹಕ್ಕಿನಡಿ ಅಜರ್ಿ ಸಲ್ಲಿಸಿದರೆ ಇಲಾಖಾ ಅಧಿಕಾರಿಗಳಿಗೆ 30 ದಿನಗಳ ಕಾಲಾವಕಾಶವಿದೆ. ಆದರೆ ಈ ಅವಧಿಯ ಪೂರ್ವದಲ್ಲೇ ಅಜರ್ಿದಾರರಿಗೆ ಅಧಿಕಾರಿಗಳು ಮಾಹಿತಿ ಒದಗಿಸಬೇಕು. ನಿಮ್ಮ ಇಲಾಖೆಗೆ ಸಂಬಂಧವಿಲ್ಲದ ವಿಷಯವಿದ್ದರೆ ಅಜರ್ಿದಾರರಿಗೆ ಐದು ದಿನಗಳೊಳಗಾಗಿ ಹಿಂಬರಹ ನೀಡಬೇಕು ಅಥವಾ ಸಂಬಂಧಿಸಿದ ಇಲಾಖೆಗೆ ಅಜರ್ಿ ವಗರ್ಾಯಿಸಬೇಕು ಎಂದು ತಿಳಿಸಿದರು.
ಮಾಹಿತಿ ಹಕ್ಕಿನಡಿ ಅಜರ್ಿ ಸ್ವೀಕರಿಸಿದ ತಕ್ಷಣವೇ ಯಾವುದೇ ಅಂಜಿಕೆ ಇಲ್ಲದೆ ಮೊದಲು ಅಜರ್ಿಯನ್ನು ಪೂರ್ಣವಾಗಿ ಅಧಿಕಾರಿಗಳೇ ಓದಬೇಕು. ತಕ್ಷಣವೇ ವಿಲೇವಾರಿಗೆ ಕ್ರಮವಹಿಸಬೇಕು. ನಿಗಧಿತ ಅವಧಿಯಲ್ಲಿ ಮಾಹಿತಿ ಒದಗಿಸದಿದ್ದರೆ ಸಂಬಂಧಿಸಿದ ಅಧಿಕಾರಿಗಳಿಗೆ ದಿನವೊಂದಕ್ಕೆ 250ರೂ. ದಂಡ ಹಾಕಲು ಮಾಹಿತಿ ಹಕ್ಕು ಕಾಯ್ದೆಯಡಿ ಅವಕಾಶವಿದೆ ಎಂದು ಎಚ್ಚರಿಸಿದರು.
ಮಾಹಿತಿ ಹಕ್ಕು ಕಾಯ್ದೆಯಡಿ ಅಜರ್ಿ ಸಲ್ಲಿಸಿದ ಅಜರ್ಿದಾರರ ಮೇಲೆ ದ್ವೇಷಸಾಧಿಸಬೇಡಿ. ಅವರೊಂದಿಗೆ ಸೌಹಾರ್ದತೆಯನ್ನು ಕಾಪಾಡಿಕೊಳ್ಳಿ, ಸಂಬಂಧಗಳನ್ನು ಹಾಳುಮಾಡಿಕೊಳ್ಳಬೇಡಿ. ಸಂವಿಧಾನದತ್ತ ಹಕ್ಕಾಗಿರುವ ಮಾಹಿತಿಯನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಮಾಹಿತಿ ಹಕ್ಕು ಕಾಯ್ದೆಯಡಿ ಬರುವ ಅಜರ್ಿಗಳ ತ್ವರಿತ ವಿಲೇವಾರಿಗೆ ಪ್ರತಿಯೊಂದು ಕಚೇರಿಯಲ್ಲೂ ಕಡಿತಗಳ ವಗರ್ೀಕಣ ಹಾಗೂ ಕಚೇರಿ ಕೈಪಿಡಿ ಅನುಸಾರ ಕಾರ್ಯನಿರ್ವಹಿಸಬೇಕು. ಇದರಿಂದ ಸರಳ ಹಾಗೂ ವೇಗವಾಗಿ ಮಾಹಿತಿ ಕೊಡಲು ಸಾಧ್ಯವಾಗುತ್ತದೆ. ಪ್ರತಿ ಕಚೇರಿಯಲ್ಲೂ ತಮ್ಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಸಿಬ್ಬಂದಿಗಳ ಮಾಹಿತಿ, ಕಚೇರಿಯ ಕಾರ್ಯಗಳು, ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಮೇಲ್ಮನವಿ ಪ್ರಾಧಿಕಾರದ ಹೆಸರು, ಹುದ್ದೆ, ಸಂಪರ್ಕ ವಿಳಾಸ ಒಳಗೊಂಡ ಫಲಕಗಳನ್ನು ಹಾಕಬೇಕು. ಈ ಎಲ್ಲ ಮಾಹಿತಿಯನ್ನು ತಮ್ಮ ಇಲಾಖೆಯ ವೆಬ್ಸೈಟ್ಗಳಲ್ಲಿ ಅಪ್ಲೋಡ್ ಮಾಡಬೇಕು ಎಂದು ಸೂಚಿಸಿದರು. ಅಜರ್ಿದಾರರು ಅಜರ್ಿಯೊಂದಿಗೆ ಕಡ್ಡಾಯವಾಗಿ ರೂ.10 ಮೌಲ್ಯದ ಐ.ಪಿ.ಓ. ಸಲ್ಲಿಸಬೇಕು. ಪ್ರತಿ ಪುಟದ ಮಾಹಿತಿಗೆ ನಿಗಧಿಪಡಿಸಿದ ಶುಲ್ಕ ಪಾವತಿಸಬೇಕು. ಆದಾಯ ಪ್ರಮಾಣಪತ್ರ ಒದಗಿಸದೆ ಕೇವಲ ರೇಷನ್ ಕಾಡರ್್ ಸಲ್ಲಿಸಿದರೆ ಉಚಿತವಾಗಿ ಮಾಹಿತಿ ನೀಡಲು ಬರುವುದಿಲ್ಲ. ನೌಕರರ ವಯಕ್ತಿಕ ವಿವರ, ಆಸ್ತಿ ವಿವರ, ಸೇವಾ ವಿವರ, ಮನೆ ವಿಳಾಸ, ದೇಶದ ಭದ್ರತೆಗೆ ಸಂಬಂಧಪಟ್ಟ ವಿಚಾರಗಳು, ಸಚಿವ ಸಂಪುಟದ ನಡಾವಳಿಗಳು ಮಾಹಿತಿ ಹಕ್ಕಿನಡಿ ನೀಡಲು ಬರುವುದಿಲ್ಲ. ಸಂಘ ಸಂಸ್ಥೆಗಳ ಹೆಸರಿನಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಬರುವ ಅಜರ್ಿಗಳನ್ನು ಮಾನ್ಯ ಮಾಡುವಂತಿಲ್ಲ. ಈ ಕಾಯ್ದೆಯಡಿ ಮಾಹಿತಿ ಸಂಗ್ರಹಣೆ ಮಾಡಿ ಒದಗಿಸಲು ಅವಕಾಶವಿಲ್ಲ. ಒಂದು ಅಜರ್ಿ ಸಲ್ಲಿಸಿ ಹಲವು ಮಾಹಿತಿ ಕೇಳಿದರೆ ಒಂದೇ ಮಾಹಿತಿಗೆ ಉತ್ತರ ನೀಡುವುದು. ಉಳಿದಂತೆ ಪ್ರತ್ಯೇಕ ಅಜರ್ಿಗಳನ್ನು ಅಜರ್ಿದಾರರು ಸಲ್ಲಿಸಬೇಕಾಗುತ್ತದೆ ಎಂದು ವಿವರಿಸಿದ ಅವರು ಮಾಹಿತಿ ಹಕ್ಕು ಅಧಿನಿಯಮದಡಿ ವಿವಿಧ ಸೆಕ್ಸನ್ಗಳಡಿ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬ ಮಾಹಿತಿಯನ್ನು ವಿವರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು 2005 ರಿಂದ ಜಾರಿಗೆ ಬಂದಿರುವ ಮಾಹಿತಿ ಹಕ್ಕು ಕಾಯ್ದೆ ಪಾರದರ್ಶಕ ಆಡಳಿತ, ಭ್ರಷ್ಟಾಚಾರ ರಹಿತ ಆಡಳಿತ ವ್ಯವಸ್ಥೆಯ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಈ ಕಾಯ್ದೆ ಸಹಕಾರಿ. ಈ ಕಾಯ್ದೆಯಿಂದ ಸಾಮಾನ್ಯರಿಗೆ ಮುಖ್ಯವಾಹಿನಿಯಿಂದ ದೂರ ಹೋಗುವವರಿಗೆ ಅನುಕೂಲಕರವಾಗಿದೆ. ಆಡಳಿತದ ಆಗುಹೋಗುಗಳನ್ನು ತಿಳಿಯಲು ಹಾಗೂ ತಮಗೆ ಬೇಕಾದ ಅಗತ್ಯ ಮಾಹಿತಿಯನ್ನು ಪಡೆಯಲು ಈ ಕಾಯ್ದೆ ಸಹಾಯಕವಾಗಿದೆ. ಈ ಕಾಯ್ದೆಯಡಿ ಮಾಹಿತಿ ನೀಡಲು 30 ದಿನಗಳ ಕಾಲಾವಕಾಶವಿದ್ದರೂ ಅಜರ್ಿ ಸಲ್ಲಿಸಿದ 24 ತಾಸಿನೊಳಗಾಗಿ ತ್ವರಿತವಾಗಿ ಮಾಹಿತಿ ನೀಡುವ ವ್ಯವಸ್ಥೆಯನ್ನು ಅಧಿಕಾರಿಗಳು ಮುಂದಿನ ದಿನಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಕರೆ ನೀಡಿದರು.
ಸಂವಾದ: ಸಭೆಯ ಕೊನೆಯಲ್ಲಿ ಅಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗೆ ಮಾಹಿತಿ ಹಕ್ಕು ಕಾಯ್ದೆಯ ಕುರಿತಂತೆ ಆಯುಕ್ತರು ಸಂವಾದ ನಡೆಸಿದರು.
ವಿಚಾರಣೆ: ಇಂದು ಬೆಳಿಗ್ಗೆ 11 ಗಂಟೆಯಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಸ್ವೀಕೃತವಾದ ಅಜರ್ಿಗಳ ಕುರಿತಂತೆ ವಿಚಾರಣೆ ನಡೆಸಿದರು. 22 ಅಜರ್ಿಗಳು ಆಯೋಗದಿಂದ ಸ್ವೀಕೃತವಾಗಿದ್ದವು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಶಿಲ್ಪಾ ನಾಗ್, ಅಪರ ಜಿಲ್ಲಾಧಿಕಾರಿ ಶಾಂತಾ ಹುಲ್ಮನಿ, ಜಿ.ಪಂ.ಉಪಕಾರ್ಯದಶರ್ಿ ಜಿ.ಗೋವಿಂದಸ್ವಾಮಿ ಉಪಸ್ಥಿತರಿದ್ದರು.