ಧ್ಯಾನ ಮಾಡಿದರೆ ಮನುಷ್ಯ ಮಾನವನಿಂದ ಮಾಧವನಾಗುತ್ತಾನೆ
If one meditates, one becomes a Madhava from a human being
ಹನಮಸಾಗರ 28: ನಿಯಮಿತ ಅನಾಪಾನಸತಿ ಧ್ಯಾನವೇ ಮನುಷ್ಯನಿಗೆ ದೊಡ್ಡ ಓಷಧ. ಧ್ಯಾನ ಮಾಡಿದರೆ ಮನುಷ್ಯ ಮಾನವನಿಂದ ಮಾಧವನಾಗುವ ಪರಿವರ್ತನೆ ಹೊಂದುತ್ತಾನೆ” ಎಂದು ಪಿರಮಿಡ್ ಮಾಸ್ಟರ್ ಹಾಗೂ ಧ್ಯಾನ ಪ್ರಚಾರಕರಾದ ಬ್ರಹ್ಮಋಷಿ ಪ್ರೇಮನಾಥ ಅವರು ಹೇಳಿದರು.ಗ್ರಾಮದ ಜಗದಂಬ ಮಂಗಲ ಭವನದಲ್ಲಿ ಶುಕ್ರವಾರ ಒಂದು ದಿನದ ಧ್ಯಾನ ಕಾರ್ಯಗಾರ ಪಿರಮಿಡ್ ಸ್ಪಿರಿಚುವಲ್ ಸೊಸೈಟಿ ಮೂವ್‌ಮೆಂಟ್ (ಪಿಎಸ್‌ಎಸ್‌ಎಂ) ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.“ಇಂದಿನ ಒತ್ತಡದ ಯುಗದಲ್ಲಿ ಮನುಷ್ಯನಿಗೆ ಧ್ಯಾನವೇ ದೊಡ್ಡ ಶರಣಾಗತಿ. ಧ್ಯಾನ ಮಾಡಿದರೆ ಎಲ್ಲವೂ ಶಾಂತಗೊಳ್ಳುತ್ತವೆ.
ಆ ಕ್ಷಣದಲ್ಲಿ ಮನುಷ್ಯ ನಿಜವಾದ ವಿಚಾರಸ್ಥಿತಿಗೆ, ಅಂದರೆ ಧ್ಯಾನದ ಮೂಲ ಸ್ವರೂಪಕ್ಕೆ ಪ್ರವೇಶಿಸುತ್ತಾನೆ. ಅನಾಪಾನಸತಿ ಧ್ಯಾನವು ಸುಲಿದ ಬಾಳೆಹಣ್ಣಿನಂತಿದೆ ಸರಳ, ಸುಲಲಿತ ಮತ್ತು ಎಲ್ಲರಿಗೂ ಸೂಕ್ತ ಸ್ವಾಸವನ್ನು ಮಾತ್ರ ಗಮನಿಸಿದರೆ ಸಾಕು. ಹೀಗೆ ಮಾಡಿದರೆ ಎಲ್ಲಾ ಆಲೋಚನೆಗಳು ನಿಧಾನವಾಗಿ ಶೂನ್ಯಗೊಳ್ಳುತ್ತವೆ.“ಸ್ವಾಸ ಕೇವಲ ಗಾಳಿ ಅಲ್ಲ ಅದು ವಿಶ್ವಶಕ್ತಿಯ ಪ್ರವೇಶದ್ವಾರ. ನಾವು ಸ್ವಾಸವನ್ನು ಗಮನಿಸಿದಾಗ ಈ ವಿಶ್ವಶಕ್ತಿ ದೇಹದೊಳಗೆ ಹರಡುತ್ತದೆ. ಆ ಶಕ್ತಿ ದೇಹದಲ್ಲಿರುವ ಅನೇಕ ರೋಗಗಳನ್ನು ನಿವಾರಿಸುತ್ತದೆ. ಮನಸ್ಸು ಕಟ್ಟಿಕೊಳ್ಳುತ್ತದೆ. ಮನುಷ್ಯ ಸಂಪೂರ್ಣವಾಗಿ ಪರಿವರ್ತಿತನಾಗುತ್ತಾನೆ, ದೇವರನ್ನು ಹೊರಗೆ ಹುಡುಕಬೇಡಿ; ನಿಮ್ಮೊಳಗೆ ಅನುಸಂಧಾನ ಮಾಡಿ. ನಿಮ್ಮೊಳಗೆ ಉದಯಿಸುತ್ತದೆ ಎಂದರು.ಪ್ರಮುಖರಾದ ಶಿವಶಂಕರ ಮದಿಕೇರಿ, ಶಿವಕುಮಾರ ಹಿರೇಮಠ, ಏಕನಾಥ ಮದಿಕೇರಿ, ತುಳಜನಸಾ ಕಾಟವಾ, ಗ್ಯಾನನಗೌಡ ಮಾಲಿ ಪಾಟೀಲ, ಧ್ಯಾನಿಗಳು, ವಿವಿಧ ಗ್ರಾಮದ ಮಹಿಳೆಯರು ಇತರರು ಇದ್ದರು.ಹನುಮಸಾಗರದ ಜಗದಂಬಾ ಮಂಗಲ ಭವನದಲ್ಲಿ ಶುಕ್ರವಾರ ಒಂದು ದಿನದ ಧ್ಯಾನ ಕಾರ್ಯಗಾರ ನಡೇಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 