ಅನಿವಾರ್ಯವಾದಲ್ಲಿ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಬುದ್ಧಿ ಕಲಿಸಲಿ: ನಂಜಯ್ಯನಮಠ
If necessary, let the Indian Army teach Pakistan a lesson: Nanjayyana Math
ಅನಿವಾರ್ಯವಾದಲ್ಲಿ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಬುದ್ಧಿ ಕಲಿಸಲಿ: ನಂಜಯ್ಯನಮಠ
ಮಹಾಲಿಂಗಪುರ 18: ಯುದ್ಧ ಎಂಬ ಶಬ್ದ ಅಪಾಯಕಾರಿಯಾಗಿದ್ದು, ಎರಡೂ ದೇಶಗಳ ಅಭಿವೃದ್ಧಿ ವಿಷಯದಲ್ಲಿ ಮಾರಕ. ನೆರೆಯ ರಾಷ್ಟ್ರ ಪಾಕಿಸ್ತಾನ ಇದನ್ನು ಅರ್ಥೈಸಿ ಜನರ ಹಿತ ಬಯಸಿ ರಾಜಕಾರಣ ಮಾಡಬೇಕು ಎಂದು ಕಾಂಗ್ರೆಸ್ ಕಮಿಟಿ ಜಿಲ್ಲಾಧ್ಯಕ್ಷ ಎಸ್. ನಂಜಯ್ಯನಮಠ ನೆರೆ ರಾಷ್ಟ್ರ ಪಾಕಿಸ್ತಾನಕ್ಕೆ ಸಲಹೆ ನೀಡಿ ದೇಶದ ಅಭಿಮಾನ ಮೆರೆದರು.
ಭಾನುವಾರ ಸಂಜೆ ಜಿಎಲ್ಬಿಸಿ ಅತಿಥಿ ಗೃಹದಲ್ಲಿ ನಡೆದ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡಿ ಮಾತನಾಡಿದ ಅವರು, ಎಂದೆಂದಿಗೂ ಶಾಂತಿ ಬಯಸಿ ಬದುಕು ಸಾಗಿಸುವ ದೇಶ ನಮ್ಮದು. ಎಲ್ಲದಕ್ಕೂ ಯುಧ್ಧವೇ ಪರಿಹಾರವಲ್ಲ, ಏನೇ ಇದ್ದರೂ ಮಾತುಕತೆಗಳ ಮೂಲಕ ತಾರ್ಕಿಕ ಅಂತ್ಯ ಕಾಣಬೇಕು. ಇದಕ್ಕೆ ನಮ್ಮ ದೇಶದ ಪ್ರಧಾನಿಗಳು ಮಾನವೀಯ ನೆಲೆಯಲ್ಲಿ ಸಮ್ಮತಿಸಿದ್ದಾರೆ.ಇಷ್ಟಾಗಿಯೂ ಪಾಕಿಸ್ತಾನ ಕದನ ವಿರಾಮ ದಿಕ್ಕರಿಸಿ ಮತ್ತೆ ಮತ್ತೆ ಸೆಲ್ ದಾಳಿಗಳನ್ನು ಮಾಡುವ ಮೂಲಕ ದೇಶದ ಭದ್ರತೆಗೆಗೆ ಸವಾಲು ಹಾಕುತ್ತಿದೆ.
ಇಷ್ಟಕ್ಕೆ ಇದು ಸೀಮಿತಗೊಳ್ಳದೆ ಹೋದರೆ ನಮ್ಮ ದೇಶವೂ ಕೂಡ 1971 ರಲ್ಲಿ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರ ಆದೇಶದಂತೆ ಲಾಹೋರ್ ಹೊಕ್ಕು ಹೇಗೆ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿತೋ, ಹಾಗೆ ಮತ್ತೊಮ್ಮೆ ಅವರಿಗೆ ಕೇಂದ್ರ ಪಾಠ ಕಲಿಸಬೇಕು. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹವಾಗಿದೆ.
ಈ ವಿಷಯಕ್ಕೆ ನಮ್ಮ ಕೇಂದ್ರಿಯ ಎ.ಆಯ್. ಸಿ. ಸಿ ಮತ್ತು ಪಕ್ಷದ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಲ್ಲದೆ, ಇದಕ್ಕೆ ರಾಜ್ಯ ಸಂಪುಟವೂ ಸಮ್ಮತಿ ಸೂಚಿಸಿದೆ. ಕೇಂದ್ರ ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ಮತ್ತು ಆಮದು, ರು್ತ ಸ್ತಗಿತದ ನಿರ್ಧಾರ ಕಾರಣದಿಂದ ಮಾತುಕತೆ ಮೂಲಕ ಸಮಸ್ಯೆ ಬಗೆ ಹರಿಸಿಕ್ಕೊಳ್ಳನವೆಂಬ ವಾದಕ್ಕೆ ಪಾಕಿಸ್ತಾನ ಬಂದಿದೆ.ಇದು ಸಹ ನಮ್ಮ ದೇಶದ ಜಯ.
ಉಭಯ ದೇಶಗಳ ಮಾತುಕತೆ ಸಂದರ್ಭದಲ್ಲಿ ನಮ್ಮ ದೇಶದ ಷರತ್ತುಗಳಿಗೆ ಮನ್ನಣೆ ಸಿಕ್ಕರೆ ಮಾತ್ರ ಯುಧ್ಧಕ್ಕೆ ತಿಲಾಂಜಲಿ.ಇಲ್ಲವಾದರೆ ಅವರಿಗೆ ತಕ್ಕ ಪಾಠ ಕಲಿಸಲು ದೇಶ ಸನ್ನದ್ಧವಾಗಬೇಕು. ಈ ಸಮಯ ನಾವು ರಾಜಕಾರಣ ಮಾಡದೆ ಸೇನೆಗೆ ಬಲ ನೀಡಬೇಕು ಎಂದರು.
ಕಾಂಗ್ರೆಸ್ ಸೇವಾದಳ ಜಿಲ್ಲಾಅಧ್ಯಕ್ಷ ಪ್ರಕಾಶ್ ಉತ್ತೂರು, ತೇರದಾಳ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಶ್ರೀಪಾದ ಗುಂಡಾ ಮುಖಂಡರಾದ ಪ್ರಕಾಶ ಮಮದಾಪೂರ, ಆನಂದ ಹಟ್ಟಿ ಮತ್ತು ವಿಠ್ಠಲ ಹೊಸಮನಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 