ನಮ್ಮ ಮಕ್ಕಳಿಗೆ ಅವಕಾಶ ಕೊಟ್ಟರೆ ಜಗತ್ತನ್ನೇ ಆಳುತ್ತಾರೆ : ಬಸವರಾಜ ಬೊಮ್ಮಾಯಿ
If given a chance, our children will rule the world: Basavaraja Bommai
ಶಿಗ್ಗಾವಿ 28: ಎಲ್ಲ ದೇಶಗಳ ಜನರಿಗಿಂತ ಭಾರತೀಯರು ಬುದ್ದಿವಂತರಿದ್ದಾರೆ. ನಮ್ಮ ಮಕ್ಕಳಿಗೆ ಅವಕಾಶ ಕೊಟ್ಟರೆ ಜಗತ್ತನ್ನು ಆಳುತ್ತಾರೆ. ಇದು ಭಾರತದ ಯುಗ, 2047 ಕ್ಕೆ ವಿಕಸಿತ ಭಾರತ ಮಾಡುವ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಬಿಸನಳ್ಳಿಯ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ, ಸಂಗೀತ, ಯೋಗ ಮತ್ತು ಜ್ಯೋತಿಷ್ಯ ಪಾಠಶಾಲೆಯ ಆವರಣದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ಏರಿ್ಡಸಿದ ಮಾನವ ಧರ್ಮ ಸಮಾವೇಶದಲ್ಲಿ ಮಾತನಾಡಿದ ಅವರು ಇದೊಂದು ಪುಣ್ಯ ಭೂಮಿ ಕಾಶಿ ಜಗದ್ಗುರುಗಳು ಪಾಠ ಶಾಲೆ ಆರಂಭ ಮಾಡಿದಾಗಲೇ ಬಿಸನಳ್ಳಿ ಪುಣ್ಯಭೂಮಿಯಾಗಿದೆ. ನೂರಾರು ಸಣ್ಣ ವಿದ್ಯಾರ್ಥಿಗಳು, ಆಗಮ, ವೇದ, ಸಂಸ್ಕೃತ, ಜ್ಯೋತಿಷ್ಯದಲ್ಲಿ ಪರಿಣಿತರಾಗುತ್ತಿದ್ದಾರೆ. ಮುಂದಿನ ಜನಾಂಗಕ್ಕೆ ಸಂಸ್ಕೃತಿ ಸಂಸ್ಕಾರ ಹೇಳಿಕೊಡುವ ವಟುಗಳನ್ನು ತಯಾರು ಮಾಡದೇ ಹೋದರೆ ನಮ್ಮ ದೇಶದ ಪರಿಸ್ಥಿತಿ ಏನಾಗುತ್ತದೆ ಯೋಚಿಸಿ. ಹಿಂದಿನವರು ಇದನ್ನು ಮಾಡಿಕೊಂಡು ಬಂದಿದ್ದಾರೆ. ಪರಮಪೂಜ್ಯರ ವಾಣಿ ಮುಖಾಂತರ ನಮ್ಮ ಬದುಕನ್ನು ಸಹಜವಾಗಿ ತಿಳಿದುಕೊಳ್ಳಲು ಸಾಧ್ಯವಾಯಿತು.
ಇದು ನಿರಂತರ ನಡೆಯುತ್ತಿರುವ ಸಂಸ್ಕೃತಿಕ ಚಳುವಳಿ, ಕಾಶಿ ಜಗದ್ಗುರುಗಳು ಮಾಡುತ್ತಿರುವುದು ಪುಣ್ಯ ಕಾರ್ಯ. ಅವರ ಪಾದಕ್ಕೆ ಕೋಟಿ ಕೋಟಿ ನಮನಗಳು ಹಾಗೂ ಸಂಸ್ಕಾರ ಆಚರಣೆ ವಿಚಾರಣೆಯಿಂದ ಬರುತ್ತದೆ, ನ್ಯಾಯ ನೀತಿ, ಸತ್ಯ ಒಳಗೊಂಡಿರುವುದೇ ಧರ್ಮ, ಇಂತಹ ವಿಚಾರ ಹಂಚಿಕೊಳ್ಳಲು ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ, ಕಾಶಿ ಜಗದ್ಗುರುಗಳ ಆಶೀರ್ವಾದ ನನ್ನ ಮೇಲೆ ಸದಾ ಇದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಷ.ಬ್ರ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಿಂದಗಿ ಮಠ ಹೋತನಹಳ್ಳಿ, ಷ.ಬ್ರ ಡಾ. ರಾಜಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಕಾಶೀ ಖಾಸಾ ಶಾಖಾಮಠ ನವನಗರ, ಹುಬ್ಬಳ್ಳಿ, ಷ.ಬ್ರ ಡಾ ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು, ಅಮರೇಶ್ವರ ಬ್ರಹನ್ಮಠ, ಗುಳೇದಗುಡ್ಡ, ಷ.ಬ್ರ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಮುರುಘೇಂದ್ರಮಠ, ಹಿರೇಮಣಕಟ್ಟಿ, ಷ.ಬ್ರ ವಿಶ್ವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇಮಠ, ಹಿರೇಬೆಂಡಿಗೇರಿ ಹಾಗೂ ಶಂಭಣ್ಣ ಮಾಮ್ಲೇಪಟ್ಟಣಶೆಟ್ಟರ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 