ರೈತರು ಬೆಳೆದರೆ ಆಹಾರ, ರೈತರಿಗೆ ಇಲ್ಲ ಪರಿಹಾರ: ಮ್ಯಾಗೇರಿ
If farmers grow food, there is no solution for farmers: Mageri
ರೈತರು ಬೆಳೆದರೆ ಆಹಾರ, ರೈತರಿಗೆ ಇಲ್ಲ ಪರಿಹಾರ: ಮ್ಯಾಗೇರಿ
ಶಿಗ್ಗಾವಿ 10: ಬಾಯಿಲ್ಲಿ ಅನ್ನದಾತ ನೇಗಿಲ ಯೋಗಿ ಕೃಷಿ ತಪಸ್ವಿ ಎಂದು ಮಾತನಾಡಿ ರೈತನೇ ಸಂಕಷ್ಟದಲ್ಲಿ ಸಿಕ್ಕಾಗ ರೈತನ ನೆರವಿಗೆ ಬಾರದ ಸರಕಾರ ಇದ್ದರೆಷ್ಟು ಬಿದ್ದರೆಷ್ಟು ಅನ್ನುವಂತಾಗಿದೆ.ರೈತ ಬೆಳೆದರೆ ಮಾತ್ರ ನಮಗೆ ಉಣ್ಣಲು ಆಹಾರ ಆತನೇ ಸಂಕಷ್ಟದಲ್ಲಿ ಸಿಲುಕಿದಾಗ ಪರಿಹಾರ ಕೊಡುವ ಸರಕಾರ ಕಣ್ಣು ಮುಚ್ಚಿ ಕುಳಿತಂತಾಗಿದೆ ಎಂದು ನಿಕಟ ಪೂರ್ವ ಬಿಜೆಪಿ ತಾಲೂಕಾಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರೈತನೇ ಸಾಲ ಶೂಲ ಮಾಡಿ ಬಿತ್ತಿದ ಬೆಳೆ ಬೆಳೆದು ಕಣ್ಣೆದುರೆ ನೀರಿಗೆ ನಿಂತು ಬತ್ತಿ ಹೋಗಿದ್ದನ್ನು ಕಂಡು ರೈತನಿಗೆ ಮುಂದೆ ಏನು ಮಾಡಬೇಕು ಹೊಟ್ಟೆಗೆ ಏನು ತಿನ್ನಬೇಕು ಮಾಡಿದ ಸಾಲ ಹೇಗೆ ತೀರಿಸಬೇಕು ಹಬ್ಬ ಹರಿದಿನಗಳನ್ನು ಮಾಡಲು ಮಕ್ಕಳಿಗೆ ಹೊಸ ಬಟ್ಟೆ ತರಲು ಹಣಕಾಸಿನ ತೊಂದರೆ ಯಾರ ಮುಂದೆ ಹೇಳತೀರದಾಗಿದೆ ಮಕ್ಕಳ ವಿದ್ಯಾಭ್ಯಾಸ ಆರೋಗ್ಯ ಕುಟುಂಬ ನಿರ್ವಹಣೆ ಚಿಂತೆಯಲ್ಲಿ ಸಿಲುಕಿದ ರೈತನ ಗೋಳು ಸರ್ಕಾರಕ್ಕೆ ಕಾಣುತ್ತಿಲ್ಲವೇ. ಸರಕಾರ ರೈತರ ಸಂಕಷ್ಟಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರೋತ್ಸಾಹ ನೀಡದಿದ್ದರೆ ಕೃಷಿಯನ್ನು ನಂಬಿ ಬದುಕುತ್ತಿರುವ ಕುಟುಂಬಗಳು ಮತ್ತು ಕೃಷಿ ನಾಶದಂಚಿಗೆ ತಲುಪುವಲ್ಲಿ ಯಾವ ಸಂದೇಹವು ಇಲ್ಲ ಇದನ್ನು ಅರಿತ ಸರ್ಕಾರ ಕೂಡಲೇ ಅತಿಯಾದ ಮಳೆಯಿಂದ ರಾಜ್ಯದಂತ ಬೆಳೆ ನಾಶವಾದರೂ ಮಧ್ಯಂತರ ಪರಿಹಾರ ನೀಡಿಲ್ಲ ತಕ್ಷಣ ಮಧ್ಯಂತರ ಪರಿಹಾರ ರೈತರಿಗೆ ನೀಡಬೇಕು. ಇಗಿರುವ ಬೆಳೆ ನಷ್ಟ ಪರಿಹಾರ ಮೊತ್ತ ರೈತರ ಮೂಗಿಗೆ ತುಪ್ಪ ವರಿಸುವಂತಾಗಿದೆ ಅದನ್ನು ಈಗಿರುವ ಮೊತ್ತಕ್ಕೆ 10 ಪಟ್ಟು ಹೆಚ್ಚಿಸಬೇಕು. ಜಿಲ್ಲಾಡಳಿತ ಮತ್ತು ತಾಲೂಕ ಆಡಳಿತ ನೇತೃತ್ವದಲ್ಲಿ ನಡೆದ ಬೆಳೆ ಸಮೀಕ್ಷೆ ತಾರತಮ್ಯ ಯಾಗದೆ ಪಾರದರ್ಶಕವಾಗಿ ನಡೆಯಬೇಕು ಎಂದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 