ಮಕ್ಕಳಿಗೆ ಉತ್ತಮವಾದ ಸಂಸ್ಕಾರ ಸಂಸ್ಕೃತಿ ಕಲಿಸುತ್ತಾರೋ ಅಂತಹ ಮಕ್ಕಳು ಸಮಾಜದಲ್ಲಿ ಆದರ್ಶರಾಗಿರಲು ಸಾಧ್ಯ
If children are taught good morals and culture, such children can become role models in society
ರಾಣೇಬೆನ್ನೂರ 18 : ಯಾರು ಮಕ್ಕಳಿಗೆ ಉತ್ತಮವಾದ ಸಂಸ್ಕಾರ ಸಂಸ್ಕೃತಿ ಕಲಿಸುತ್ತಾರೋ ಅಂತಹ ಮಕ್ಕಳು ಸಮಾಜದಲ್ಲಿ ಆದರ್ಶರಾಗಿರಲು ಸಾಧ್ಯ. ಈ ನಿಟ್ಟಿನಲ್ಲಿ ಮಕ್ಕಳ ಕೈಗೆ ಮೊಬೈಲ್ ನೀಡದೆ ಅವರುಗಳನ್ನು ಸಮಾಜದ ಒಂದು ಶಕ್ತಿಯನ್ನಾಗಿ ತಾಯಂದಿರು ರೂಪಿಸಬೇಕು ಎಂದು ಹರಪನಹಳ್ಳಿಯ ಪರ್ಲ್ಸ್ ಸ್ಕೂಲ್‌ನ ಆಡಳಿತಾಧಿಕಾರಿ ಸುಮಾ ಉಪ್ಪಿನ ಹೇಳಿದರು.
ನಗರದ ಕಾಕಿ ಜನಸೇವಾ ಸಂಸ್ಥೆಯ ಗಣೇಶ ಮಂಟಪದ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಹಾಗೂ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇಂದಿನ ಆಧುನಿಕತೆಯಲ್ಲಿ ಮೊದಲು ಮಕ್ಕಳಿಂದ ಮೊಬೈಲ್ ದೂರವಿಡಬೇಕು. ಮಕ್ಕಳು ಮೊಬೈಲ್‌ಗೆ ದಾಸರಾಗಿ ಆತ್ಮಹತ್ಯೆ ಅಥವಾ ತಂದೆ ತಾಯಿಯಗಳನ್ನೇ ಹತ್ಯೆ ಮಾಡುವಂತಹ ಹೀನಕೃತ್ಯಕ್ಕೆ ಕೈಹಾಕುತ್ತಿದ್ದಾರೆ ಇದು ನಿಜಕ್ಕೂ ವಿಷಾಧದ ಸಂಗತಿಯಾಗಿದೆ ಎಂದರು.
ಸಂಸ್ಕಾರಯುತವಾದಂತಹ ಶಿಕ್ಷಣವನ್ನು ನಾವು ಮಕ್ಕಳಿಗೆ ಕಲಿಸಬೇಕು. ಜ್ಞಾನವನ್ನು ಶಾಲೆಯಲ್ಲಿರುವ ಗುರುಗಳು ನೀಡುತ್ತಾರೆ ಆದರೆ ಸಂಸ್ಕಾರವನ್ನು ಮನೆಯಲ್ಲಿರುವ ತಂದೆ ತಾಯಿಯರು ನೀಡಬೇಕು. ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು ಎಂಬುದನ್ನರಿತು ನಮ್ಮ ಮಕ್ಕಳ ಭವಿಷ್ಯ ನಮ್ಮ ಕೈಯಲ್ಲಿದೆ ಎಂಬುದನ್ನು ಮರೆಯದೆ ಮಕ್ಕಳನ್ನು ಸಮಾಜದಲ್ಲಿ ಪ್ರಜ್ವಲಿಸುವಂತೆ ನೋಡಿಕೊಳಬೇಕು ಅಂದಾಗ ಆ ಮಗುವಿನ ಭವಿಷ್ಯ ಉತ್ತಮವಾಗಿ ಸಾಗಲು ಸಾಧ್ಯವಾಗುತ್ತದೆ ಎಂದರು.
ನಮ್ಮದೇಶದ ಸಂಸ್ಕೃತಿ ಸಂಸ್ಕಾರ ಹಾಗೂ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ಮಹಿಳೆಯರ ಮೇಲಿದೆ. ಮೊದಲು ನಾವು ಬದಲಾಗಬೇಕು ನಾವು ಬದಲಾದರೆ ಮನೆಯಲ್ಲಿರುವ ಮಕ್ಕಳು ಬದಲಾಗುತ್ತಾರೆ. ನಮ್ಮ ಪೂರ್ವಜರು ಹಾಕಿಕೊಟ್ಟಿರುವ ಸಂಸ್ಕಾರ ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಅರಿತುಕೊಂಡು ಆರೋಗ್ಯಕರವಾದ ಜೀವನ ಸಾಗಿಸಬೇಕು ಅಂದಾಗ ನಾವು ನೆಮ್ಮದಿಯ ಬದುಕು ಕಾಣಲು ಸಾಧ್ಯ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರು ದೂರದೃಷ್ಟಿಯಿಂದ ಸಮಾಜಮುಖಿ ಸೇವೆ ಹಾಗೂ ಯೋಜನೆಗಳನ್ನು ರೂಪಿಸಿ ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ಪ್ರಮುಖರಾಗಿದ್ದಾರೆ. ಅವರ ಯಾವುದೇ ಕಾರ್ಯಕ್ರಮಗಳು ಇದ್ದರೆ ಮಹಿಯರು ತಪ್ಪದೆ ಭಾಗವಹಿಸಿ ಒಳ್ಳೆಯ ವಿಚಾರಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿ ಉತ್ತಮವಾದ ಜೀವನ ರೂಪಿಸಿಕೊಳ್ಳಬೇಕು. ಇಂತಹ ಸಂಸ್ಥೆ ಇರುವುದು ನಮಗೆಲ್ಲ ಹೆಮ್ಮಯ ಸಂಗತಿ ಎಂದು ಯೋಜನೆಯ ಕಾರ್ಯವೈಖರಿಗಳನ್ನು ಶ್ಲ್ಯಾಘಿಸಿದರು.
ಶಹರ ಠಾಣೆಯ ಆರಕ್ಷಕ ವೃತ್ತ ನೀರೀಕ್ಷಕ ವೆಂಕಟೇಶ ಎನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತಿತ್ತಲಾಗಿ ಮೊಬೈಲ್‌ಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಮಹಿಳೆಯರ ಅಶ್ಲೀಲ್ ಚಿತ್ರಗಳು ಹಾಗೂ ವಿಡಿಯೋಗಳು ಹರಿದಾಡುತ್ತಿರುವ ಬಗ್ಗೆ ಹೆಚ್ಚಾಗಿ ಮಹಿಳೆಯರು ಪ್ರಕರಣಗಳನ್ನು ದಾಖಲಿಸಿ ನ್ಯಾಯ ಕೊಡಿ ಎಂದು ಕಣ್ಣೀರಿಡುತ್ತಾರೆ. ಆದ್ದರಿಂದ ಮೊದಲು ಮಹಿಳೆಯರು ಜಾಗೃತರಾಗಿ ಪರಿಚಯ ಇರುವವರು ಅಥವಾ ಅಪರಿಚಿತರೆ ಆಗಲಿ ಯಾವುದೇ ಕಾರಣಕ್ಕೂ ನಿಮ್ಮ ವೈಯಕ್ತಿ ಅಶ್ಲೀಲ ಪೋಟೋ ಹಾಗೂ ವಿಡಿಯೋ ಕಳಿಸಬೇಡಿ, ಮತ್ತು ಯಾವುದೇ ಕಾರಣಕ್ಕೂ ಅಶ್ಲೀಲತೆಯಿಂದ ವಿಡಿಯೋ ಕಾಲ್‌ಗಳನ್ನು ಮಾಡಬೇಡಿ, ನಿಮ್ಮ ಪ್ರೀತಿ ವಿಶ್ವಾಸ ಇರೋವರೆಗೂ ನೀವು ಚೆನ್ನಾಗಿ ಇರುತ್ತೀರಿ ಯಾವುದೋ ಸಂದರ್ಭ ನಿಮ್ಮಲ್ಲಿ ವೈಮನಸ್ಸು, ಮನಸ್ಥಾಪ ಬಂದು ಪರಸ್ಥಿತಿ ವಿಕೋಪಕ್ಕೆ ತೆರಳಿದಾಗ ನೀವು ಕಳಿಸಿರುವ ಪೋಟೋ ವಿಡಿಯೋಗಳಿಂದ ಬ್ಲಾಕ್ ಮೇಲ್ ಮಾಡಲು ಶುರು ಮಾಡುತ್ತಾರೆ ಇದರಿಂದ ಎಷ್ಟೋ ಜೀವನಗಳು ಸಂಸಾರಗಳು ಹಾಳಾಗಿವೆ ಆದ್ದರಿಂದ ಮೊಬೈಲ್ ಬಳಕೆಯಲ್ಲಿ ಹಾಗೂ ಸೋಶಿಯಲ್ ಮಿಡಿಯಾಗಳಲ್ಲಿ ಮತ್ತು ಇನ್ನಿತರ ಹಣದಾಸೆಯ ಆ್ಯಪ್‌ಗಳಿಂದ ದೂರವಿದ್ದು ಸುರಕ್ಷಿತರಾಗಿರುವಂತೆ ಮನವಿ ಮಾಡಿದರು.
ಖ್ಯಾತ ವೈದ್ಯೆ ರತ್ನಪ್ರಭಾ ಕೆಂಚಪ್ಪನವರ ಅಧ್ಯಕ್ಷತೆವಹಿಸಿದ್ದರು. ಯೋಜನೆಯ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು, ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಬಸವರಾಜ ಹುಲ್ಲತ್ತಿ, ಉದ್ಯಮಿ ಅಜಯ್ ಜಂಬಗಿ, ಧಾರವಾಡ ಪ್ರಾದೇಶಿಕ ಕಛೇರಿಯ ಜ್ಞಾನವಿಕಾಸ ಯೋಜನಾಧಿಕಾರಿ ಸುಧಾ, ತಾಲೂಕು ಯೋಜನಾಧಿಕಾರಿ ಮಂಜುನಾಥ ಎಂ ಪಿ, ಹಾಗೂ ಜ್ಞಾನವಿಕಾಸ ಸಮನ್ವಯಾಧಿಕಾರಿ ವೆಂಕಟಮಾಲಾ, ಮೇಲ್ವಿಚಾರಕರು ಸತೀಶ, ರಮೇಶ, ನೋಡಲ್ ಅಧಿಕಾರಿ ಮಂಜುನಾಥ, ಚಂದ್ರು, ಶೋಭಾ, ವಸಂತ, ಪ್ರಶಾಂತ ನವೀನ್. ಬಸವರಾಜ ಪೂಜಾರ, ನವೀನ್, ರೇಣುಕಾ, ಭೀಮಾಕ್ಷಿ, ದೇವರಾಜ, ಮಂಜುನಾಥ ಮತ್ತು ಸೇವಾ ಪ್ರತಿನಿಧಿಗಳು ಹಾಗೂ ತಾಲೂಕಿನ ಸಂಘದ ಸದಸ್ಯರುಗಳು ಇದ್ದರು. ನಂತರ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದವು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 