ಶಿವಂ ಅಸೋಸಿಯೇಟ್‌ನ ಹಣ ವಾಪಸ್ ನೀಡಿದರೆ ಮಾಜಿ ಸೈನಿಕರಿಗೆ ಆದ್ಯತೆ ನೀಡಿ

ಶಿವಂ ಅಸೋಸಿಯೇಟ್‌ನ ಹಣ ವಾಪಸ್ ನೀಡಿದರೆ ಮಾಜಿ ಸೈನಿಕರಿಗೆ ಆದ್ಯತೆ ನೀಡಿ  If Shivam Associate's money is returned, give priority to ex-servicemen

ಲೋಕದರ್ಶನ ವರದಿ 

    ಬೆಳಗಾವಿ 26: ಶಿವಾನಂದ ನೀಲಣ್ಣವರ ಅವರ ಮಾಲೀಕತ್ವದ ಶಿವಂ ಅಸೋಸಿಯೇಟ್‌ನಲ್ಲಿ ಹಣ ಹೂಡಿಕೆ ಮಾಡಿರುವ ನಾಗರಿಕರಿಗೆ ಒಂದು ವೇಳೆ ಹಣ ವಾಪಸ್ ನೀಡುವ ಸಂದರ್ಭ ಬಂದರೆ ಸರಕಾರ ಮತ್ತು ಜಿಲ್ಲಾಡಳಿತ ಮಾಜಿ ಸೈನಿಕರಿಕರಿಗೆ ಮೊದಲ ಆದ್ಯತೆ ನೀಡುವದರೊಂದಿಗೆ ಅವರ ಹಣ ಮೊದಲು ವಾಪಸ್ ನೀಡುವದಾಗಬೇಕು ಎಂದು ಮಾಜಿ ಸೈನಿಕರ ಸಂಘಟನೆಗಳ ಮಹಾಸಂಘದ ಜಿಲ್ಲಾಧ್ಯಕ್ಷ ಜಗದೀಶ ಪೂಜಾರಿ ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.   

     ಮಂಗಳವಾರ ನಗರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಮೇ. 14ರಂದು ಬೆಳಗಾವಿಯ ಶಿವಂ ಅಸೋಸಿಯೇಟ್ ಮೇಲೆ ಪೊಲೀಸ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಶಿವಂ ಅಸೋಸಿಯೇಟ್ ಸಂಸ್ಥೆಯಲ್ಲಿ ನಮ್ಮ ಮಾಜಿ ಸೈನಿಕರು ಹಣ ಹೂಡಿಕೆ ಮಾಡಿದ್ದಾರೆ ಎನ್ನುವ ಬಗ್ಗೆ ನಮಗೆ ಮಾಧ್ಯಮಗಳ ವರದಿ ಮೂಲಕ ತಿಳಿದಿದೆ. ಈ ಪ್ರಕರಣದಲ್ಲಿ ಹಣವನ್ನು ಯಾಕೆ ಹೂಡಿಕೆ ಮಾಡಿದ್ದಾರೆ ಎನ್ನುವ ಬಗ್ಗೆ ಗಮನಿಸಿದಾಗ ಸೇವಾ ನಿವೃತಿಯಾದಾಗ ಮನೆತನ ಖರ್ಚು, ಮಕ್ಕಳ ವಿದ್ಯಾಭ್ಯಾಕ್ಕಾಗಿ ಪಿಂಚಣಿಯಿಂದ ಬಂದ ಹಣವನ್ನು ಎಲ್ಲಾದರು ಹೂಡಿಕೆ ಮಾಡಿ ಅದರಿಂದ ಬಂದ ಹಣದಿಂದ ಸುಗಮ ಜೀವನ ಸಾಗಿಸಲು ಬಳಸಿಕೊಳ್ಳುವ ನಿಟ್ಟಿನಲ್ಲಿ ಹೂಡಿರಬಹುದು ಎಂದು ಹೇಳಿದರು.  

ಒಳ್ಳೆಯ ಸದುದ್ದೋಶದಿಂದ ಹಣ ಹೂಡಿಕೆ ಮಾಡಿರಬಹುದು. ಸೈನಿಕರ ಉದ್ದೇಶ ಸರಿಯಾಗಿದೆ. ಎಲ್ಲಿ ಹೂಡಿಕೆ ಮಾಡಿದ್ದಾರೆ. ಯಾಕೆ ಮಾಡಿದ್ದಾರೆ ಎನ್ನುವದು ತನಿಖೆಯಲ್ಲಿ ಗೊತ್ತಾಗಬೇಕಿದೆ. ಈಗಾಗಲೇ ಈ ಪ್ರಕರಣ ಸಿಐಡಿ ತನಿಖೆಯಲ್ಲಿದ್ದು, ತನಿಖೆ ಮುಗಿದ ಮೇಲೆ ಜಿಲ್ಲಾಡಳಿತ ಸರಕಾರ ಹಣ ಹೂಡಿಕೆ ಮಾಡಿರುವ ಸೈನಿಕರನ್ನು ಮೊದಲು ಪರಿಗಣಿಸಿ ಮೊದಲ ಅವರ ಹಣ ಮರುಳಿಸಬೇಕು. ಯಾಕೇಂದರೆ ಸೈನಿಕ 17ರಿಂದ 20 ವರ್ಷ ದೇಶ ಸೇವೆ ಮಾಡುತ್ತಾನೆ. ದೇಶದ ವಿವಿಧ ಭಾಗದಲ್ಲಿ ವಿಭಿನ್ನ ರೀತಿಯನ್ನು ಸೇವೆ ಮಾಡಿ ಬೆವರಿನ ಜೊತೆಗೆ ರಕ್ತವನ್ನು ಸುರಿಸಿರುತ್ತಾನೆ. ಒಂದು ವೇಳೆ ಹೂಡಿಕೆದಾರರಿಗೆ ಹಣ ನೀಡುವ ಸಂದರ್ಭ ಬಂದರೆ ಮೊದಲು ಮಾಜಿ ಸೈನಿಕರಿಗೆ ಅನ್ಯಾಯವಾಗದಂತೆ ಕ್ರಮಕೈಕೊಳ್ಳಬೇಕು ಎಂದು ನುಡಿದರು.  

ಮಾಜಿ ಸೈನಿಕರು ಪಿಂಚಣಿಯಿಂದ ಬಂದ ಹಣವನ್ನು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅಥವಾ ಸಾಕಷ್ಟು ವೇದಿಕೆ ಇವೆ ಅಲ್ಲಿ ಹಣವನ್ನು ಹೂಡೆಕೆ ಮಾಡಿ, ಆ ಹಣವನ್ನು ತಮ್ಮ ಜೀವನ ಸುಗಮಕ್ಕಾಗಿ ಇಡುವಂತೆ ಮನವಿ ಮಾಡಿಕೊಂಡರು. ಸಿಕ್ಕ ಸಿಕ್ಕ ಸ್ಥಳದಲ್ಲಿ ಹಣ ಹೂಡಿಕೆ ಮಾಡದಂತೆ ಹೇಳಿದರು. ಶಿವಂ ಅಸೋಸಿಯೇಟ್‌ನಲ್ಲಿ ಇಲ್ಲಿಯ ವರೆಗೆ ಎಷ್ಟು ಜನಾ ಸೈನಿಕರು ಹೂಡಿಕೆ ಮಾಡಿದ್ದಾರೆ ಎನ್ನುವ ಬಗ್ಗೆ ಇನ್ನು ಮಾಹಿತಿ ಇಲ್ಲ. ಸಾವಿರಾರು ಜನ ಹೂಡಿಕೆ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ ಎಂದರು. ದೂರು ಯಾಕೆ ನೀಡತಾ ಇಲ್ಲ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಮಗೆ ಯಾರು ಇನ್ನುವರೆಗೆ ದುಡ್ಡು ಹೂಡಿಕೆ ಬಗ್ಗೆ ವಿಷಯ ನಿಖರವಾಗಿ ತಿಳಿಸಿಲ್ಲ ಎಂದು ನುಡಿದರು. ಪತ್ರಿಕಾಗೋಷ್ಠಿಯಲ್ಲಿ ಹಲವಾರು ಮಾಜಿ ಸೈನಿಕರು ಉಪಸ್ಥಿತರಿದ್ದರು.