ಎಂಎಸ್‌ಪಿಎಲ್ ಕಾರ್ಖಾನೆ ವಿಸ್ತರಣೆಯಾದರೆ ಮಾರನಾಂತಿಕ ರೋಗಕ್ಕೆ ಒಳಗಾಗುತ್ತೇವೆ ಎಚ್ಚರ - ಬೆಟ್ಟದೂರು
If MSPL factory expands, we will be exposed to deadly disease: Bettadooru
ಕೊಪ್ಪಳ 21: ಎಂ.ಎಸ್. ಪಿ.ಎಲ್.ಬಲ್ದೋಟ ಕಾರ್ಖಾನೆ ವಿಸ್ತರಣೆಯಾದರೆ ಇಪ್ಪತ್ತೇಳು ಹೊಗೆ ಕೊಳವೆಗಳು ಬರುತ್ತವೆ ಎಚ್ಚರ ಎಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯ ಪ್ರಧಾನ ಸಂಚಾಲಕ ಅಲ್ಲಮ ಪ್ರಭು ಬೆಟ್ಟದೂರು ಆಕ್ರೋಶದಿಂದ ನುಡಿದರು. ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆಯಿಂದ ಸೆಪ್ಟೆಂಬರ್ 18 ರಿಂದ 24 ರವರಿಗೆ ಕಾರ್ಖಾನೆಗಳ ವಿಸ್ತರಣೆ ಹಾಗೂ ಹೊಸ ಕಾರ್ಖಾನೆಗಳ ಸ್ಥಾಪನೆ ವಿರೋಧಿಸಿ ಹಮ್ಮಿಕೊಂಡ ಪರಿಸರಜಾಗೃತಿ ಸಪ್ತಾಹ ಕಾರ್ಯಕ್ರಮಕ್ಕೆಗುರುವಾರ ಸಂಜೆ ಮಳೆಯಲ್ಲೇ ಚಾಲನೆ ನೀಡಿ ಮಾತನಾಡಿದ ಅಲ್ಲಮ ಪ್ರಭು ಬೆಟ್ಟದೂರು ಮುಂದುವರೆದು ಮಾತನಾಡಿ ನಾವು ಯಾರು ಉಸಿರಾಳುತ್ತೇವೆ ಅವರೆಲ್ಲ ಎಚ್ಚರಗೊಳ್ಳಬೇಕಾದ ಕಾಲ ಬಂದಿದೆ.
ಎಂ ಎಸ್ ಪಿ ಎಲ್ ವಿಸ್ತರಣೆಜೊತೆಗೆ ಸುಮಿ ಎನ್ನುವಂತಹಜಪಾನಿನ ಇನ್ನೊಂದು ಕಂಪನಿಯೂ ಕೂಡ ಬರಲಿದೆ.ಇದರ ಹೊಗೆ ಬೂದಿಯಿಂದ ಇನ್ನಷ್ಟು ಪರಿಸರ ಹಾಳಾಗಲಿದೆ.ಗಿಣಿಗೇರಾ ಅಲ್ಲ ನಗರ ಬಗನಾಳ ಕಾಸನಕಂಡಿ ಈಗಾಗಲೇ ಹೊಗೆ ಬೂದಿಯಿಂದ ಹಾಳಾಗಿವೆ. ಅಲ್ಲಿಯ ಜನರಿಗೆ ಟಿ.ಬಿ. ಕ್ಯಾನ್ಸರ್ ಬಂದಿದೆ.ಗವಿ ಶ್ರೀ ನಗರ. ಕಾಳಿದಾಸ ನಗರ.ಜಿಲ್ಲಾ ಕಚೇರಿಗೂ ಹೊಗೆ ಬರುತ್ತಿದೆ. ಈಗಾಗಲೇ 20ಕ್ಕೂ ಹೆಚ್ಚು ಹಳ್ಳಿಗಳು ಬಾಧಿತ ವಾಗಿವೆ. ಉದ್ಯಮ ಮಂತ್ರಿ ಎಂ.ಬಿ.ಪಾಟೀಲ್ ಜಪಾನಿನ ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದಾರೆ.
ಕೊಪ್ಪಳದಲ್ಲಿ ಅಶೋಕನ ಎರಡು ಶಾಸನ ಇರುವುದು ನಿಮಗೆಲ್ಲ ಗೊತ್ತಿದೆ.ಪ್ರಾಚೀನವಾದ ಐತಿಹಾಸಿಕ ಕೊಪ್ಪಳ ಇದು ಇಪ್ಪತ್ತೇಳು ಹೊಗೆ ಕೊಳವೆಗಳು ಬಂದರೆ ತೋರಣಗಲ್ಲ ಹರಿಹರ ದಂತಾಗುತ್ತದೆ.ಉಸಿರಾಡತಕ್ಕಂತಹ ಜನರೇ ನಿಮಗೆ ಒಳ್ಳೆಯ ಗಾಳಿ ಸಿಗುವುದಿಲ್ಲ. ಕೊಪ್ಪಳಕ್ಕೆ ಇಂಥ ಸ್ಥಿತಿ ಬರಬಾರದೆಂದರೆ ಯಾರೆಲ್ಲಾ ಉಸಿರಾಡುತ್ತಿದ್ದರು ನಾವೆಲ್ಲರೂ ಈ ಹೋರಾಟದಲ್ಲಿ ತೊಳಗಬೇಕು ಎಂದುಕರೆ ನೀಡಿದರು. ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡ ಬಸವರಾಜ್ ಶೀಲವಂತರ್ ಮಾತನಾಡಿ ಯಾವುದೇ ಕಾರಣಕ್ಕೂ ಎಮ್.ಎಸ್.ಪಿ.ಎಲ್. ವಿಸ್ತರಣೆ ಹಾಗೂ ಹೊಸ ಕಾರ್ಖಾನೆಗಳ ಬರಬಾರದು ಎಂದು ನಿರಂತರ ಹೋರಾಟ ಮಾಡುತ್ತಿದ್ದೇವೆಂದರು.
ಗವಿಶ್ರೀ ನಗರದಲ್ಲಿ ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ ಮಾತನಾಡಿ ಬೆಳಿಗ್ಗೆ ನೋಡಿದರೆಈಗಿರುವ ಬೃಹತ್ ಕಾರ್ಖಾನೆಗಳಿಂದ ನಮ್ಮ ಗವಿ ಶ್ರೀ ನಗರದ ಮನೆಗಳೆಲ್ಲ ಹೊಗೆ ಧೂಳು ಆಕ್ರಮಿಸಿಕೊಂಡಿರುತ್ತದೆ.ಮತ್ತೆ ಬೃಹತ್‌ಕಾರ್ಖಾನೆ ಬರುತ್ತಿದೆ.ಆವಾಗ ನಮ್ಮ ಸ್ಥಿತಿಯನ್ನು ಊಹಿಸಿಕೊಳ್ಳುವುದು ಕಷ್ಟ.ಕೊಪ್ಪಳ ತಿರುಳುಗನ್ನಡ ನಾಡು ಹೋಗಿ ಹೊಗೆ ಉಗುಳುವ ನಗರವಾಗಲಿದೆ.ನಾವೆಲ್ಲರೂ ಹೋರಾಟಕ್ಕೆ ಮುಂದಾಗಬೇಕುಎಂದು ಸಲಹೆ ನೀಡಿದರು. ಅಹಿಂದ ಮುಖಂಡಕರೀಮ್ ಪಾಷಾ ಎಂ.ಗಚ್ಚಿನ ಮನಿ ಮಾತನಾಡಿ ಎಮ್.ಎಸ್.ಪಿ.ಎಲ್. ಬಲ್ಡೋಟಕಾರ್ಖಾನೆ ವಿಸ್ತರಣೆ ವಿರುದ್ದ ಕೆಲವಷ್ಟೇ ಜನರಿದ್ದಾರೆಎಂದು ತಿಳಿದಿರಬಹುದು, ಹೋರಾಟಕ್ಕೆಇನ್ನೂ ನೂರಾರು,ಸಾವಿರಾರು,ಲಕ್ಷಾಂತರ ಸಂಖ್ಯೆಯಲ್ಲಿ ಬರುತ್ತಾರೆ ಎಂದು ಹೇಳಿದರು.
ಮುಖಂಡ ಎಸ್.ಎ.ಗಫಾರ್ ಮಾತನಾಡಿ ಭಾಗ್ಯನಗರ ಅವಳಿ ನಗರದ ಜನರು ಜಾಗೃತರಾಗಿರಬೇಕು. ನಾವೆಲ್ಲರೂ ಒಂದಾಗಿ ಕಾರ್ಖಾನೆಗಳ ವಿಸ್ತರಣೆ ವಿರುದ್ಧ ನಡೆಯುವ ಆಂದೋಲನಕ್ಕೆ ಎಲ್ಲರೂಬೆಂಬಲ ಕೊಟ್ಟು. ಮುಂದೆ ಬರುವ ಪೀಳಿಗೆಯ ಭವಿಷ್ಯಕ್ಕಾಗಿ ಹೋರಾಟಕ್ಕೆ ಮುನ್ನುಗೋಣ ಎಂದು ಹೇಳಿದರು. ಗವಿಶ್ರೀ ನಗರ.ಬಸವೇಶ್ವರ ವೃತ್ತ. ಅಶೋಕ ವೃತ್ತದಲ್ಲಿ ಹಿರಿಯ ಮುಖಂಡ ಡಿ.ಹೆಚ್. ಪೂಜಾರ. ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್.ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮುದುಕಪ್ಪ ಹೊಸಮನಿ ಮುಂತಾದವರು ಮಾತನಾಡಿದರು. ಗುಡದಪ್ಪ ಭಂಗಿ.ಯಮನೂರ್ಪ ಹಾಲಳ್ಳಿ ಬಸಾಪುರ.ಹಂಚಳಪ್ಪ ಇಟಗಿ ಮುಂತಾದವರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 