ಎಚ್‌. ಕೆ. ಪಾಟೀಲರನ್ನು ಕಡೆಗಣಿಸಿದರೆ ಮಂತ್ರಿಗಳಿಗೆ ಕ್ಷೌರಸೇವೆ ಬಹಿಷ್ಕಾರ: ಸರ್ಕಾರಕ್ಕೆ ಸವಿತಾ ಸಮಾಜ ಮಹಾ ಎಚ್ಚರಿಕೆ

ಎಚ್‌. ಕೆ. ಪಾಟೀಲರನ್ನು ಕಡೆಗಣಿಸಿದರೆ ಮಂತ್ರಿಗಳಿಗೆ ಕ್ಷೌರಸೇವೆ ಬಹಿಷ್ಕಾರ: ಸರ್ಕಾರಕ್ಕೆ ಸವಿತಾ ಸಮಾಜ ಮಹಾ ಎಚ್ಚರಿಕೆ If H. K. Patil is ignored, ministers will boycott hairdressing services: Savita Samaj Maha warns the

ಗದಗ 14: "ರಾಜ್ಯ ರಾಜಕಾರಣದ ಧೀಮಂತ ಮುತ್ಸದ್ದಿ, ಗದಗ ಜಿಲ್ಲೆಯ ಜನಪ್ರಿಯ ನಾಯಕ ಹಾಗೂ ಜನಪರ ಕಾಳಜಿಯ ಸಾಕಾರ ಮೂರ್ತಿ ಸನ್ಮಾನ್ಯ ಶ್ರೀ ಎಚ್‌. ಕೆ. ಪಾಟೀಲ್ ಸಾಹೇಬರನ್ನು ಸಚಿವ ಸಂಪುಟದ ಎರಡನೇ ಪಟ್ಟಿಯಲ್ಲಿ ಸೇರಿಸಿ ತಕ್ಷಣ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ರಾಜ್ಯದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಮಾದರಿಯಲ್ಲಿ, ಎಲ್ಲಾ ನೂತನ ಮಂತ್ರಿಗಳಿಗೆ ಕ್ಷೌರಸೇವೆ ನಿಷೇಧಿಸುವ ಮೂಲಕ ಉಗ್ರ ಹೋರಾಟ ಮಾಡಲಾಗುವುದು" ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರು ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಹೈಕಮಾಂಡ್ಗೆ ನೇರ ಎಚ್ಚರಿಕೆ ನೀಡಿದ್ದಾರೆ.     

ಈ ಕುರಿತು ಗದಗ ಜಿಲ್ಲಾ ಸವಿತಾ ಸಮಾಜದಿಂದ ಹಮ್ಮಿಕೊಂಡ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಎಚ್‌. ಕೆ. ಪಾಟೀಲ್ ಅವರು ದಶಕಗಳಿಂದ ಪ್ರಾಮಾಣಿಕತೆ, ನೈತಿಕತೆ ಮತ್ತು ಸ್ವಚ್ಛ ಆಡಳಿತಕ್ಕೆ ಹೆಸರಾದವರು. ಇಂತಹ ಹಿರಿಯ ನಾಯಕರ ಉಪಸ್ಥಿತಿ ನೂತನ ಸರ್ಕಾರಕ್ಕೆ ಆನೆಬಲ ತರಲಿದೆ. ಗ್ರಾಮೀಣಾಭಿವೃದ್ಧಿ ಸಚಿವರಾಗಿ ಇಡೀ ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ಅವರು ಸ್ಥಾಪಿಸಿದ ’ಶುದ್ಧ ಕುಡಿಯುವ ನೀರಿನ ಘಟಕಗಳು’ ಇಂದಿಗೂ ಕೋಟ್ಯಂತರ ಬಡವರ ದಾಹ ನೀಗಿಸುತ್ತಿವೆ.

ಇಂತಹ ದೂರದೃಷ್ಟಿಯ ನಾಯಕನನ್ನು ಕಡೆಗಣಿಸುವುದು ಜನತೆಗೆ ಮಾಡುವ ದ್ರೋಹ ಎಂದು ಕಿಡಿ ಕಾರಿದರು. ಸಮಾಜದ ಹಿರಿಯರಾದ ಹನುಮಂತಪ್ಪ ರಾಂಪೂರ ಅವರು ಮಾತನಾಡಿ ಕಾನೂನು ಸರ್ಕಾರಕ್ಕೆ ಯಾವುದೇ ಆಡಳಿತಾತ್ಮಕ ಅಥವಾ ಕಾನೂನು ಚೌಕಟ್ಟಿನ ತೊಡಕುಗಳು ಎದುರಾದಾಗ ಹಳಿ ತಪ್ಪದಂತೆ ಮುನ್ನಡೆಸಲು ಇವರ ಸಂಸದೀಯ ಅನುಭವ ತೀರಾ ಅಗತ್ಯವಾಗಿದೆ. ಮತ್ತು ಸಮಗ್ರ ಉತ್ತರ ಕರ್ನಾಟಕ ಹಾಗೂ ಗದಗ ಜಿಲ್ಲೆಯ ಅಭಿವೃದ್ಧಿಯ ಧ್ವನಿಯಾಗಿರುವ ಇವರನ್ನು ಕೈಬಿಟ್ಟರೆ, ಈ ಭಾಗದ ಜನರಲ್ಲಿ ಪ್ರಾದೇಶಿಕ ಅಸಮತೋಲನದ ತೀವ್ರ ಅಸಮಾಧಾನ ಭುಗಿಲೇಳಲಿದೆ ಎಂದರು