ವೈದ್ಯರ ಸೇವೆ ಗುರುತಿಸಿ ಗೌರವಿಸುವುದು ಮಹತ್ವದ ಕಾರ್ಯ: ಡಾ.ಭಟ್

ಡಾ. ಬಿ.ಸಿ.ರಾಯ್ರವರ ಜನ್ಮ ದಿನಾಚರಣೆ

ಲೋಕದರ್ಶನ ಸುದ್ದಿ

             ಕಾರವಾರ: ವೈದ್ಯರು ಹಗಲು ರಾತ್ರಿ ಎನ್ನದೆ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿಕೊಳ್ಳುತ್ತಾರೆ.  ತಮ್ಮ ಸಂಪೂರ್ಣ ಸಮಯವನ್ನು ರೋಗಿಗಳ ಸೇವೆಗಾಗಿ ಮೀಸಲಿಟ್ಟು ಅವರನ್ನು ಗುಣಪಡಿಸುವಲ್ಲಿ ತೊಡಗಿಸಿಕೊಂಡಿರುತ್ತಾರೆ. ಅದು ತಮ್ಮ ಕರ್ತವ್ಯವೆಂದು ಅವರು ಚಿಕಿತ್ಸೆಯನ್ನು  ವ್ಯವಸ್ಥಿತವಾಗಿ ನಿಭಾಯಿಸುತ್ತಾರೆ. ಅಂತಹ ವೈದ್ಯರ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಅವರನ್ನು ಗೌರವಿಸುವುದು ಮಹತ್ವದ ಕಾರ್ಯ. ಇಂತಹ ಕಾರ್ಯವನ್ನು ಕಾರವಾರದ ನಜೀರ್ ಶೇಖ್ರವರು ತಪ್ಪದೇ ಪ್ರತಿವರ್ಷ ನಿಭಾಯಿಸುತ್ತಾ ಬಂದಿರುವುದು ಶ್ಲಾಘನೀಯ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ನ ಕಾರವಾರದ ಅಧ್ಯಕ್ಷರಾಗಿರುವ ಡಾ. ಸುರೇಶ ಭಟ್ರವರು ಅಭಿಪ್ರಾಯ ಪಟ್ಟರು. ಅವರು ಕಾರವಾರದ ಆಝಾದ್ ಯುಥ್ ಕ್ಲಬ್  ಹಾಗೂ ಕಾರವಾರದ  ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್  ಸಂಯುಕ್ತವಾಗಿ ಡಾ. ಬಿ.ಸಿ.ರಾಯ್ ಅವರ ಜನ್ಮ ದಿನಾಚರಣೆಯ ನಿಮಿತ್ತ ಆಚರಿಸಲಾಗುವ ರಾಷ್ಟ್ರೀಯ ವೈದ್ಯರ ದಿನಾಚರಣೆಯ ನಿಮಿತ್ತ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.    ಇನ್ನೋರ್ವ ಮುಖ್ಯ ಅತಿಥಿ ಉಪಸ್ಥಿತರಿದ್ದ  ರಾಜ್ಯೋತ್ಸವ ಪ್ರಶಸ್ತಿ ವಿಜೇತ  ನಜೀರ್ ಅಹಮದ್ ಯು.ಶೇಖ್ ವೈದ್ಯರು ದೇವರಿಗೆ ಸಮಾನರಾದವರು. ಇವರ ಪರಿಶ್ರಮದಿಂದ ಅನೇಕ ಜೀವಗಳು ಮರುಜೀವವನ್ನು ಪಡೆಯುತ್ತಾರೆ. ಅಂತಹ ವೈದ್ಯರನ್ನು ಸನ್ಮಾನಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಆಝಾದ್ ಯುಥ್ ಕ್ಲಬ್ನ ಚೀಫ್ಪ್ಯಾಟ್ರನ್ ಹಾಗೂ ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರೂ ಆಗಿರುವ ಇಬ್ರಾಹಿಮ್ ಕಲ್ಲೂರ್  ಮಾತನಾಡಿ ವೈದ್ಯರು ಎಂತಹ ರೋಗವನ್ನಾದರೂ ಗುಣಪಡಿಸುವಂತಹ ಕೌಶಲ್ಯವನ್ನು ಹೊಂದಿರುತ್ತಾರೆ. ಯಮನನ್ನು ಹೆದರಿಸಿ ಓಡಿಸುವಂತಹ ಕಾರ್ಯವನ್ನು ವೈದ್ಯರು ಮಾಡಬಲ್ಲರು ಎಂದ ಅವರು ವೈದ್ಯರ ಸೇವೆಯನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಕಾರವಾರದ ಸುಪ್ರಸಿದ್ದ ವೈದ್ಯರಾದ ಡಾ. ಅನಿಲ್ ಅನಂತ ಕೊಳ್ವೇಕರ್ ಅವರ ಸೇವೆಯನ್ನು ಗುರುತಿಸಿ ಶಾಲು ಹೊದಿಸಿ ಫಲಪುಷ್ಪ ಹಾಗೂ ಪ್ರಮಾಣ ಪತ್ರವನ್ನು ನೀಡಿ ಸನ್ಮಾನಿಸಲಾಯಿತು. ಡಾ. ಕೊಳ್ವೇಕರ್ರವರು 1971ರಿಂದ 1976ರವರೆಗೆ ಮುಂಬೈದಲ್ಲಿ ಖಾಸಗಿಯಾಗಿ ಸೇವೆಯನ್ನು ಸಲ್ಲಿಸಿ,  1976 ರಿಂದ 1982 ರವರೆಗೆ ಮಹಾರಾಷ್ಟ್ರದ ಸರಕಾರಿ ಆಸ್ಪತ್ರೆಗಳಲ್ಲಿ ಸೇವೆಯನ್ನು ಸಲ್ಲಿಸಿದ್ದು,  ನಂತರ 1984ರಿಂದ ಕಾರವಾರದಲ್ಲಿ ಖಾಸಗಿಯಾಗಿ ಸೇವೆಯನ್ನು ಸಲ್ಲಿಸುತ್ತಾ ಬಂದಿರುತ್ತಾರೆ. ಇವರ ಅಪ್ರತಿಮ ಸೇವೆಗಾಗಿ ಸನ್ಮಾನಿಸಲಾಯಿತು. 

  ಪ್ರಾರಂಭದಲ್ಲಿ ಭಾರತೀಯ ರೆಡ್ಕ್ರಾಸ್ನ ಅಜೀವ ಸದಸ್ಯೆಯಾಗಿರುವ ಫೈರೋಜಾ ಬೇಗಂ ಶೇಖ್ ಸ್ವಾಗತಿಸಿದರು. ಕೊನೆಯಲ್ಲಿ ಲ. ಮಂಜುನಾಥ ಪವಾರ್ ವಂದಿಸಿದರು. ಈ ಸಂದರ್ಭದಲ್ಲಿ ಸಮಾಜಸೇವಕ ಗಫೂರ್ ಮಾಂಡಲಿಕ್, ಸುರೇಖಾ ಕೊಳ್ವೇಕರ್, ಡಾ. ಶರದ್ ಕೊಳ್ವೇಕರ್, ಶೃದ್ಧಾ ಕೊಳ್ವೇಕರ್,ಮೊಹಮ್ಮದ್ ಫೌಜಿ ಮಿಜರ್ಾನ್ಕರ್ ಮತ್ತಿತರರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಕ್ಲಬ್ನ ಕಾರ್ಯದಶರ್ಿ ಮೊಹಮ್ಮದ್ ಉಸ್ಮಾನ್ ಶೇಖ್ ಸಂಘಟಿಸಿದ್ದರು.