ಸಮಸ್ಯೆ ಪರಿಹಾರಕ್ಕೆ ವೇಗವರ್ಧಕವಾಗಿ ಐಡಿಯಾಥಾನ್ ಕಾರ್ಯನಿರ್ವಹಿಸುತ್ತದೆ: ಡಾ. ಅರುಣ್ ಎಸ್. ತಿಗಡಿ
Ideathon acts as a catalyst for problem solving: Dr. Arun S. Thigadi
ಬೆಳಗಾವಿ 19 : ಹೊಸ ಆಲೋಚನೆಗಳು ಮತ್ತು ಪರಿಹಾರಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಮೂಲ ಚಿಂತನೆ, ನಾವಿನ್ಯತೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಲು ಐಡಿಯಾಥಾನ್ ಒಂದು ವೇದಿಕೆಯನ್ನು ಒದಗಿಸುತ್ತದೆ. ವಿದ್ಯಾರ್ಥಿಗಳು ನಾವಿನ್ಯತೆಯ ಸಮುದಾಯದ ಭಾಗವಾಗಿರುತ್ತಾರೆ ಮತ್ತು ಸಾಂಪ್ರದಾಯಿಕ ಕಲಿಕೆಯಿಂದ ಪ್ರಾಯೋಗಿಕ ಅನ್ವಯಕ್ಕೆ ಚಲಿಸುವ ಮೂಲಕ ವಿಶಿಷ್ಟ ಶೈಕ್ಷಣಿಕ ಅನುಭವಗಳನ್ನು ಪಡೆಯುತ್ತಾರೆ ಇದು ನಾವಿನ್ಯತೆ ಬೆಳೆಸುವುದರ ಜೊತೆಗೆ ಸಮಸ್ಯೆ ಪರಿಹರಿಸುವ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ ಹಾಗೂ ನಾವಿನ್ಯತೆ ಮತ್ತು ತಂತ್ರಜ್ಞಾನದ ವೇಗದ ಜಗತ್ತಿನಲ್ಲಿ ಸೃಜನಶೀಲತೆ ಮತ್ತು ಸಮಸ್ಯೆ ಪರಿಹಾರಕ್ಕೆ ವೇಗವರ್ಧಕವಾಗಿ ಐಡಿಯಾಥಾನ್ ಕೆಲಸ ಮಾಡುತ್ತದೆ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಕೆ. ಎಲ್. ಇ. ತಾಂತ್ರಿಕ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಡಾ. ಅರುಣ್ ಎಸ್. ತಿಗಡಿ ಅವರು ಎಸ್.ಜಿ.ಬಿ.ಐ.ಟಿ ಯಲ್ಲಿ ಇಂದು ನಡೆದ ಐಡಿಯಾಥಾನ್-2025 ಉದ್ಘಾಟಣಾ ಸಮಾರಂಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರಾದ ಡಾ. ಎಫ್.ವ್ಹಿ.ಮಾನ್ವಿ ಕಾರ್ಯಕ್ರಮವನ್ನುದ್ದೇಶಿಸಿ ಈ ದಿನದ ಕುರಿತು ವಿದ್ಯಾರ್ಥಿಗಳಿಗೆ ನೀವು ವೃತ್ತಿ ಹುಡುಕುವವರಾಗದೆ ವೃತ್ತಿ ಸೃಷ್ಟಿಸುವವರಾಗಬೇಕೆಂದು ಪ್ರೋತ್ಸಾಹಿಸಿದರು. ಪ್ರಾಚಾರ್ಯರಾದ ಡಾ. ಬಿ.ಆರ್.ಪಟಗುಂದಿ ಅವರು ಸ್ವಾಗತ ನುಡಿಗಳನ್ನಾಡುತ್ತ ನವೋದಯ ಕಲ್ಪನೆಗಳನ್ನು ಮಂಡಿಸುವ ಮತ್ತು ಸಮರ್ಥಿಸಿಕೊಳ್ಳುವಲ್ಲಿ ಪ್ರಾಯೋಗಿಕ ಕೌಶಲ್ಯಗಳನ್ನು ರೂಪಿಸಿಕೊಳ್ಳಬೇಕೆಂದು ಎಂದು ಹೇಳಿದರು
ಕಾರ್ಯಕ್ರಮದ ಸಂಯೋಜಕರಾದ ಡಾ. ಯಾಸ್ಮೀನ್ ಶೇಖ್ ಅವರು ಕಾಲೇಜಿನ ವಿದ್ಯಾರ್ಥಿಗಳಿಗೆ ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಗೆ ಐಡಿಯಾಥಾನ್ ಒಂದು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು. ನೈನ್ 2.0 ದ ಸಂಯೋಜಕರಾದ ಡಾ. ಸುರೇಶ್ ಅಕ್ಕೋಳೆ ಅವರು ನಾವಿನ್ಯತೆ ತಂತ್ರಜ್ಞಾನ ಆಧಾರಿತ ಮೂಲ ಮಾದರಿಗಳನ್ನು ಅಭಿವೃದ್ಧಿ ಪಡಿಸಲು ಬೆಂಬಲ ಮತ್ತು ಸರ್ಕಾರದಿಂದ ಹಣಕಾಸಿನ ನೆರವು ನೀಡುಲಾಗುವುದೆಂದು ವಿದ್ಯಾರ್ಥಿಗಳನ್ನು ಪ್ರೇರೆಪಿಸಿದರು. ಕಾರ್ಯಕ್ರಮಕ್ಕೆ ಎಲ್ಲಾ ವಿಭಾಗದ ಮುಖ್ಯಸ್ಥರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿಗಳಾದ ಶ್ರೇಯಸ್ ಮತ್ತು ಸಮರ್ಥ ನಿರೂಪಿಸಿದರು.ವಿದ್ಯಾರ್ಥಿನಿ ವಂದನಾ ವಂದಿಸಿದಳು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 