ಉದ್ಯೋಗ ಸೃಷ್ಟಿಯಲ್ಲಿ ಐಟಿ ಸಂಸ್ಥೆ ಮಹತ್ತರ ಸಾಧನೆ

ಉದ್ಯೋಗ ಸೃಷ್ಟಿಯಲ್ಲಿ ಐಟಿ ಸಂಸ್ಥೆ ಮಹತ್ತರ ಸಾಧನೆ IT company achieves great success in job creation

ಉದ್ಯೋಗ ಸೃಷ್ಟಿಯಲ್ಲಿ ಐಟಿ ಸಂಸ್ಥೆ ಮಹತ್ತರ ಸಾಧನೆ 

ಹುಬ್ಬಳ್ಳಿ ಆ.06: ಉದ್ಯೋಗ ಸೃಷ್ಟಿಯಲ್ಲಿ ಮಹತ್ತರ ಸಾಧನೆಯನ್ನು ಐಟಿ ಕ್ಷೇತ್ರದಲ್ಲಿ ಆಗುತ್ತಿದೆ. ಇಂದು ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಐಟಿ ಕ್ಷೇತ್ರಕ್ಕೆ ಬಹಳಷ್ಟು ಬೇಡಿಕೆಯಿದೆ. ಹುಬ್ಬಳ್ಳಿ ಕ್ಲಸ್ಟರ್ ಸಹ ಅಭಿವೃದ್ಧಿ ಹೊಂದುತ್ತಿದೆ. ರಾಜ್ಯ ಸರ್ಕಾರವು ಸಹ ಹೊಸ ಆವಿಷ್ಕಾರಗಳಿಗೆ ಹೆಚ್ವಿನ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.  ಇಂದು ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ನಡೆಯುವ ಕರ್ನಾಟಕ ಐಟಿ ಕ್ಷೇತ್ರದ ಬೆಳವಣಿಗೆಯ ಮೈಲುಗಲ್ಲು ಕುರಿತು ಅವರು ಮಾತನಾಡಿದರು. ಹುಬ್ಬಳ್ಳಿ, ಬೆಳಗಾವಿ, ಧಾರವಾಡ ನಗರಗಳಲ್ಲಿ ಹೊಸ ಹೊಸ ಆವಿಷ್ಕಾರಗಳು ಆಗುತ್ತಿವೆ. ಕಳೆದ 12 ತಿಂಗಳಲ್ಲಿ 23 ಕಂಪನಿಗಳು ಹೊಸ ಆವಿಷ್ಕಾರಗಳಲ್ಲಿ ತೊಡಗಿಕೊಂಡಿವೆ.

7 ಕಂಪನಿಗಳು 2 ಸಾವಿರ ಉದ್ಯೋಗ ಸೃಷ್ಟಿಗೆ ಕಾರಣವಾಗಿವೆ. ಕಳೆದ 2 ವರ್ಷಗಳಲ್ಲಿ ಸುಮಾರು 40 ಕಂಪನಿಗಳು ಐಟಿ, ಬಿಪಿಒ ಕ್ಷೇತ್ರಕ್ಕೆ ಆಸಕ್ತಿ ಹೊಂದಿವೆ. ಚಿಪ್ ತಯಾರಿಕೆಗೆ ಸಹ ಹುಬ್ಬಳ್ಳಿ ಧಾರವಾಡ ಹೆಸರುವಾಸಿಯಾಗಿದೆ. ಎಐ, ಏರೋಸ್ಪೇಸ್ ನಲ್ಲಿ ಬೆಳವಣಿಗೆಗಳು ಆಗುತ್ತಿವೆ. ಸರ್ಕಾರವು ಸ್ಟಾರ್ಟ್‌ ಅಪ್ ಆರಂಭಕ್ಕೆ ರೂ.50 ಲಕ್ಷ ಸಹಾಯಧನವನ್ನು ನೀಡುತ್ತದೆ. ಕರ್ನಾಟಕ ರಾಜ್ಯವು 1000 ಸ್ಟಾರ್ಟ್‌ ಅಪ್ ಸ್ಥಾಪನೆ ಮಾಡಿದ ಹಿರಿಮೆಗೆ ಪಾತ್ರವಾಗಿದೆ. ಹುಬ್ಬಳ್ಳಿಯಲ್ಲಿ ಸುಮಾರು 125 ಸ್ಟಾರ್ಟ್‌ ಅಪ್ ಗಳಿವೆ. 4 ನೇ ಅತಿದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಆಗಿ ಗುರುತಿಸಿಕೊಂಡಿದೆ. ಎಐ ಸಿಟಿಯಲ್ಲಿ 5 ನೇ ಸ್ಥಾನವನ್ನು ಪಡೆದುಕೊಂಡಿದ್ದೇವೆ.

ಎಐ ಮೇಲೆ ಇಂದು ಹೆಚ್ಚಿನ ಕೇಂದ್ರೀಕರಣವನ್ನು ಹೊಂದಲಾಗಿದೆ. ಸೋಲಾರ್ ಶಕ್ತಿಯನ್ನು ಸಮರ​‍್ಕವಾಗಿ ಬಳಸಿಕೊಳ್ಳಲಾಗುತ್ತಿದೆ. ಮಂಡ್ಯ, ಮೈಸೂರು, ರಾಮನಗರ, ದಾವಣಗೆರೆ ಜಿಲ್ಲೆಗಳಲ್ಲಿ ಸಹ ಐಟಿ ಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಗಿದೆ. ಸುಮಾರು 4.5 ಲಕ್ಷ ಕೋಟಿ ವೆಚ್ಚದ ಐಟಿ ವಸ್ತುಗಳನ್ನು ರಫ್ತು ಮಾಡಲಾಗಿದೆ. ಹುಬ್ಬಳ್ಳಿ 3500 ಕೋಟಿ, ಬೆಳಗಾವಿ 3000 ಕೋಟಿ, ಮೈಸೂರು 5000 ಕೋಟಿ, ತುಮಕೂರು1500 ಕೋಟಿ ವೆಚ್ಚದ ರಫ್ತು ಮಾಡಿವೆ ಎಂದು ಹೇಳಿದರು.  ಮುಂದಿನ ಪೀಳಿಗೆಯ ಡಿಜಿಟಲ್ ಸೇವೆಗಳು ಮತ್ತು ಸಲಹಾ (ನೆಕ್ಸ್‌- ಜನರೇಶನ್ ಡಿಜಿಟಲ್ ಸರ್ವೀಸಸ್ ಮತ್ತು ಕನ್ಸಲಿಂಗ್ ಕ್ಷೇತ್ರದಲ್ಲಿ ಜಾಗತಿಕ ನಾಯಕನ ಸ್ಥಾನದಲ್ಲಿರುವ ಇನ್ಫೋಸಿಸ್ (ಓಖಇ, ಃಖಇ, ಓಙಖಇ ಋಈಙ) ಇಂದು ತನ್ನ ಹುಬ್ಬಳ್ಳಿಯಲ್ಲಿರುವ ಅಭಿವೃದ್ಧಿ ಕೇಂದ್ರ (ಡಿಸಿ)ದಲ್ಲಿ ಇದೇ ಮೊದಲ ಬಾರಿಗೆ ಇನ್ಫೋಸಿಸ್ ಸೆಂಟರ್ ಫಾರ್ ಅಡ್ವಾನ್ಸ್‌ ಎಐ, ಸೈಬರ್ ಸೆಕ್ಯುರಿಟಿ ಅಂಡ್ ಸ್ಪೇಸ್ ಟೆಕ್ನಾಲಾಜಿಯನ್ನು ಆರಂಭಿಸಿದೆ ಎಂದು ತಿಳಿಸಿದರು.  

ಇನ್ಫೋಸಿಸ್ ಲಿವಿಂಗ್ ಲ್ಯಾಬ್‌ನ ಭಾಗವಾಗಿರುವ ಈ ಹೊಸ ಕೇಂದ್ರವು ಜಾಗತಿಕವಾಗಿ 12 ಕ್ಕೂ ಹೆಚ್ಚು ಸ್ಥಾಪಿತ ಕೇಂದ್ರಗಳ ಜಾಲವನ್ನು ಹೊಂದಿದೆ. ಮತ್ತು ಈ ಜಾಲದಲ್ಲಿರುವ ಗ್ರಾಹಕರು ನಾವೀನ್ಯತೆಯನ್ನು ವೇಗಗೊಳಿಸಲು ಮತ್ತು ತಮ್ಮ ವ್ಯವಹಾರಗಳ ಭವಿಷ್ಯಕ್ಕೆ ಪೂರಕವಾಗಿ ಉದಯೋನ್ಮುಖ ಅಂದರೆ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಪೂರಕವಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು. 

ಈ ಕೇಂದ್ರವು ಹುಬ್ಬಳ್ಳಿಯನ್ನು ಇನ್ಫೋಸಿಸ್‌ನ ಪ್ರಮುಖ ತಂತ್ರಜ್ಞಾನವನ್ನಾಗಿ ರೂಪಿಸುತ್ತದೆ. ಎಐ, ಕೌಡ್ ಕಂಪ್ಯೂಟಿಂಗ್, ಸೈಬರ್ ಭದ್ರತೆ. ಎಂಜಿನಿಯರಿಂಗ್ ಸೇವೆಗಳು ಮತ್ತು ಎಸ್‌ಎಪಿ ಹಾಗೂ ಬಾಹ್ಯಾಕಾಶ ತಂತ್ರಜ್ಞಾನದಂತಹ ಸುಧಾರಿತ ಡಿಜಿಟಲ್ ಪರಿಹಾರಗಳ ಕ್ಷೇತ್ರದಲ್ಲಿ ತನ್ನದೇ ಆದ ಪರಿಣತಿಯನ್ನು ಹೊಂದಿದೆ ಎಂದು ತಿಳಿಸಿದರು. 

ಈ ಕೇಂದ್ರವು ಉತ್ಪಾದನೆ, ಹಣಕಾಸು ಸೇವೆಗಳು. ರೀಟೇಲ್ ಬ್ಯುಸಿನೆಸ್ ಮತ್ತು ಆರೋಗ್ಯ ರಕ್ಷಣೆ ಸೇರಿದಂತೆ ಕೈಗಾರಿಕೆಗಳಾದ್ಯಂತ ಜಾಗತಿಕವಾಗಿ ಗ್ರಾಹಕರಿಗೆ ತನ್ನ ಸೇವೆಯನ್ನು ಸಲ್ಲಿಸಲಿದೆ ಎಂದು ಹೇಳಿದರು. 

ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು, ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಎಂ.ಬಿ.ಪಾಟೀಲ್ ರವರು ಮಾತನಾಡಿ ಬಿಯಾಂಡ್ ಬೆಂಗಳೂರು ಕಲ್ಪನೆಯಲ್ಲಿ ಹುಬ್ಬಳ್ಳಿ ನಗರ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ. ಇನ್ಫೋಸಿಸ್ ಸಂಸ್ಥೆಯು ಹೊಸ ಉದ್ಯೋಗಗಳ ಸೃಷ್ಟಿಗೆ ಮುಂದಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳು ತುಂಬಾ ಪ್ರತಿಭಾನ್ವಿತರಾಗಿರುತ್ತಾರೆ. ಅವರಿಗೆ ಭಾಷಾ ಕೌಶಲ್ಯದ ಕೊರತೆ ಕಾಡುತ್ತಿರುತ್ತದೆ. ಆದರೆ ಯಾವುದೇ ವಿಷಯದಲ್ಲಿ ಸಹ ಪರಿಣಿತಿಯನ್ನು ಗಳಿಸುತ್ತಾರೆ. ಹುಬ್ಬಳ್ಳಿಯ ಇನ್ಫೋಸಿಸ್ ಕ್ಯಾಂಪಸ್ ಬೆಂಗಳೂರು ಕ್ಯಾಂಪಸ್ ನ್ನು ಮೀರಿಸುವ ನಿಟ್ಟಿನಲ್ಲಿ ಬೆಳವಣಿಗೆಯಾಗಬೇಕು. ಹೊಸ ಆವಿಷ್ಕಾರಗಳಿಗೂ ಸಹ ಇನ್ಫೋಸಿಸ್ ಮುಂದಾಗುತ್ತಿದೆ. ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚೆಚ್ಚು ಅವಕಾಶ ನೀಡುತ್ತಿದೆ. ಐಟಿ ಬಿಟಿ, ಎಂಜಿನಿಯರಿಂಗ್, ಡಿಪ್ಲೊಮಾ ಕೋರ್ಸ್‌ ಗಳನ್ನು ಹೆಚ್ಚಿನ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಸರ್ಕಾರ ಯಾವಾಗಲೂ ಐಟಿ ಕ್ಷೇತ್ರಕ್ಕೆ ಹೆಚ್ಚಿನ ಪ್ರಾತಿನಿಧ್ಯ ಕೊಡುತ್ತದೆ. ಕೌಶಲ್ಯ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಹೇಳಿದರು. 

ಇನ್ಫೋಸಿಸ್ ಕಾರ್ಯಕಾರಿ ಉಪಾಧ್ಯಕ್ಷ ಸುನೀಲ್ ಕುಮಾರ್ ಧಾರೇಶ್ವರ್ ಅವರು ಮಾತನಾಡಿ, "ಕೈಗಾರಿಕೆಗಳ ಕ್ಷೇತ್ರದಲ್ಲಿ ಪರಿವರ್ತನೆ ತರುವ ಎಐ-ಚಾಲಿತ ಡಿಜಿಟಲ್ ಪರಿಹಾರಗಳನ್ನು ತಲುಪಿಸುವ ನಮ್ಮ ಧೈಯೋದ್ದೇಶದಲ್ಲಿ ಈ ಹೊಸ ಲಿವಿಂಗ್ ಲ್ಯಾಬ್ ಒಂದು ಮಹತ್ವದ ಹೆಜ್ಜೆಯಾಗಿದೆ. ಅತ್ಯಾಧುನಿಕ ಮೂಲಸೌಕರ್ಯ ಮತ್ತು ಎಐ- ಫಸ್ಟ್‌ ವಿಧಾನದೊಂದಿಗೆ ಈ ಕೇಂದ್ರವು ನಾವೀನ್ಯತೆಯನ್ನು ರೂಪಿಸುವುದರ ಜೊತೆಗೆ ಗ್ರಾಹಕರ ಪ್ರಮುಖ ಆದ್ಯತೆಗಳು ಮತ್ತು ಅಗತ್ಯತೆಗಳನ್ನು ಪೂರೈಸಲು ನಮಗೆ ಸಹಾಯ ಮಾಡುತ್ತದೆ. ಪ್ರಾದೇಶಿಕ ಬೆಳವಣಿಗೆಗಳನ್ನು ಬೆಂಬಲಿಸುವ ಮತ್ತು ವೈವಿಧ್ಯಮಯ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಮ್ಮ ಬದ್ಧತೆಯ ಪ್ರತೀಕ ಇದಾಗಿದೆ" ಎಂದರು ಹೇಳಿದರು.  

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭುನೇಶ್ವರ ಪಾಟೀಲ ,ಕಾರ್ಯಕಾರಿ ಉಪಾಧ್ಯಕ್ಷ ರಜನೀಶ್ ಮಾಳವೀಯ ಸೇರಿದಂತೆ ಇನ್ಫೋಸಿಸ್ ನ ಹಿರಿಯ ನಾಯಕರು, ಹಿರಿಯ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.