ಇಸ್ರೋ: 3 ಹೊಸ ಗ್ಯಾಲೆಕ್ಸಿಗಳು ಪತ್ತೆ
ಚೆನ್ನೈ 03: ಆಸ್ಟ್ರೋಸ್ಯಾಟ್ - ಇಸ್ರೋ ನಿಮರ್ಿತ ಬಾಹ್ಯಾಕಾಶ ವಿಕ್ಷಣಾ ಉಪಗ್ರಹವು ಭೂಮಿಯಿಂದ 800 ದಶಲಕ್ಷ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ನಕ್ಷತ್ರ ಪುಜಗಳ (ಗ್ಯಾಲೆಕ್ಸಿ) ಪತ್ತೆ ಮಾಡಿದೆ.
ಈ ನೂತನ ನಕ್ಷತ್ರ ಪುಂಜಗಳಿಗೆ ಅಬೆಲ್ 2256 ಎಂದು ನಾಮಕರಣ ಮಾಡಲಾಗಿದ್ದು ಮೂರೂ ಗ್ಯಾಲೆಕ್ಸಿಗಳು ಸಮೀಪದಲ್ಲಿ ಒಂದಕ್ಕೊಂದು ಹೊಂದಿಕೊಳ್ಳುವಂತೆ ಕಂಡುಬಂದಿದೆ. ಹೀಗೆ ಇರುವ ಮೂರೂ ಗ್ಯಾಲೆಕ್ಸಿಗಳು ಭವಿಷ್ಯದಲ್ಲಿ ಒಂದಾಗಿ ಬೃಹತ್ ಗಾತ್ರದ ಒಂದೇ ನಕ್ಷತ್ರ ಪುಂಜವಾಗುವ ಸಾಧ್ಯತೆ ಇದೆ ಎಂದು ಇಸ್ರೋ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಗ್ಯಾಲೆಕ್ಸಿಗಳ ನೇರಳಾತೀತ ಚಿತ್ರಗಳನ್ನು ಬಿಡುಗಡೆಗೊಳಿಸಿರುವ ಇಸ್ರೋ ಸಧ್ಯ ಈ ನೂತನ ಗ್ಯಾಲೆಕ್ಸಿಗಳ ವಿಶೇಷ ಅಧ್ಯಯನದಲ್ಲಿ ತೊಡಗಿದೆ. ಇಸ್ರೋ ವಿಜ್ಞಾನಿಗಳು ಅಲ್ಟ್ರ ವೈಲೆಟ್ ಇಮೇಜಿಂಗ್ ಟೆಲಿಸ್ಕೋಪ್ ಮುಖೇನ ನಕ್ಷತ್ರ ಪುಂಜದ ಕುರಿತು ಅದ್ಯಯನ ನಡೆಸುತ್ತಿದ್ದಾರೆ.
ಈ ಮೂರೂ ನಕ್ಷತ್ರಪುಂಜಗಳು ಒಂದು ಭಾಗ ಮಾತ್ರವೇ ಕೂಡಿಕೊಂಡಿರುವಂತೆ ಕಂಡು ಬಂದಿದೆ. ಅಲ್ಲದೆ ಈ ಮೂರು ನಕ್ಷತ್ರ ಪುಂಜಗಳು ತಮ್ಮಲ್ಲಿ ಅನೇಕ ಚಿಕ್ಕ ಚಿಕ್ಕ ನಕ್ಷತ್ರ ಪುಂಜಗಳನ್ನು ಹೊಂದಿದೆ ಎನ್ನುವುದು ಸಹ ತಿಳಿದು ಬಂದಿದ್ದು ಈ ಕುರಿತಂತೆ ವಿಜ್ಞಾನಿಗಳು ಇನ್ನೂ ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 