ಇರಾಕ್ ನಲ್ಲಿ ಮತ್ತೆ ಅಸ್ತಿತ್ವ ರೂಪಿಸಿಕೊಳ್ಳುತ್ತಿದೆ ಐಸಿಸ್!

ಬಾಗ್ದಾದ್, ಡಿ 23,  ಇರಾಕ್ ದೇಶದಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡಿದ್ದ ಇಸ್ಲಾಮಿಕ್ ಸ್ಟೇಟ್ (ಐಎಸ್ ) ಉಗ್ರ ಸಂಘಟನೆ ಮತ್ತು ತನ್ನ ಅಸ್ತಿತ್ವ ರೂಪಿಸುತ್ತಿದೆ ಎಂದು ಕುರ್ದಿಷ್ ಮತ್ತು ಪಾಶ್ಚಾತ್ಯ ಗುಪ್ತಚರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.   ಈ ಕುರಿತು ಬಿಬಿಸಿ ವಾಹಿನಿಗೆ ಮಾಹಿತಿ ನೀಡಿರುವ ಅವರು, ಈ ಉಗ್ರರು ಅತ್ಯಂತ ಕೌಶಲ್ಯಪೂರ್ಣರಾಗಿದ್ದು, ಅಲ್ –ಖೈದಾ ಸಂಘಟನೆಗಿಂತ ಅಪಾಯಕಾರಿಯಾಗಿದ್ದಾರೆ ಎಂದಿದ್ದಾರೆ.   ಅವರ ಬಳಿ ಸುಧಾರಿತ ತಂತ್ರಗಾರಿಕೆ, ಉಪಾಯಗಳು ಹಾಗೂ ಅದರ ಜಾರಿಗೆ ಸಾಕಷ್ಟು ಹಣವಿದೆ. ಅವರು ತಮಗೆ ಬೇಕಾದ ಆಹಾರ, ಶಸ್ತ್ರಾಸ್ತ್ರ , ಆಹಾರ ಮತ್ತು ಉಪಕರಣಗಳನ್ನು ಕೊಳ್ಳಲು ಶಕ್ತರಾಗಿದ್ದಾರೆ. ಅವರೆಲ್ಲರೂ ತಂತ್ರಜ್ಞಾನದಲ್ಲಿ ಅತಿ ಹೆಚ್ಚು ಆಸಕ್ತಿ ಹೊಂದಿದ್ದು, ಅವರನ್ನು ಹೊರಹಾಕುವುದು ಕಷ್ಟವಾಗಬಹುದು. ಅವರು ಉದ್ದೀಪನಗೊಂಡ ಅಲ್-ಖೈದಾದಂತೆ ಎಂದು ಮಾಹಿತಿ ನೀಡಿದ್ದಾರೆ.   ಇರಾಕ್ –ಖುರ್ದಿಸ್ತಾನದ ಏಜೆನ್ಸಿಯ ಎರಡು ಬೇಹುಗಾರಿಕ ಸಂಸ್ಥೆಗಳಲ್ಲಿ ಒಂದಾದ ಜಾನ್ಯಾರಿಯ ಮುಖ್ಯಸ್ಥ ತಾಲಬಾನಿ ಪ್ರಕಾರ, ಐಸಿಸ್ ಸಂಘಟನೆ ಮೊದಲಿಗಿಂತ ಭಿನ್ನವಾಗಿದ್ದು, ಸದ್ಯ ಯಾವುದೇ ಪ್ರಾಂತ್ಯದ ಮೇಲೆ ನಿಯಂತ್ರಣ ಸಾಧಿಸಲು ಯೋಜನೆ ರೂಪಿಸಿಲ್ಲ. ಇದರಿಂದ ಭದ್ರತಾ ಪಡೆಗೆ ಕೆಂಗಣ್ಣಿಗೆ ಗುರಿಯಾಗಲು ಅವರು ಸಿದ್ಧರಿಲ್ಲ. ಅವರು ಕೂಡ ಅಲ್-ಖೈದಾ ಸಂಘಟನೆಯಂತೆ ತೀವ್ರಗಾಮಿಗಳೆಲ್ಲರೂ ಇರಾಕ್ ನ ಹಮ್ರಿನ್ ಬೆಟ್ಟಗುಡ್ಡಗಳನ್ನು ತಲೆಮರೆಸಿಕೊಂಡಿದ್ದಾರೆ ಎಂದಿದ್ದಾರೆ.   ಇರಾಕ್ ನಲ್ಲಿ ರಾಜಕೀಯ ಅಸ್ತಿರತೆ ಮುಂದುವರಿದಲ್ಲಿ ಐಸಿಸ್ ಗೆ ಈ ದೇಶ ಸ್ವರ್ಗವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.