ಅಂಕಲಿ ಪೊಲೀಸ್ ಠಾಣೆಗೆ ಐಜಿಪಿ ಚೇತನಸಿಂಗ್ ಠಾಕೂರ ಅನೀರೀಕ್ಷಿತ ಭೇಟಿ
IGP Chetan Singh Thakur makes visit to Ankali Police Station
ಮಾಂಜರಿ 28: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಪೊಲೀಸ್ ಠಾಣೆಗೆ ಉತ್ತರ ವಲಯ ಐಜಿಪಿ ಚೇತನಸಿಂಗ್ ಠಾಕೂರರುವರು ಅಚ್ಚರಿ ಪರೀಶೀಲನಾ ಭೇಟಿ ನೀಡಿದರು.
ಸುಮಾರು 3 ಗಂಟೆಗಳ ಕಾಲ ಪೊಲೀಸ್ ಠಾಣೆಯ ವಿವಿಧ ವಿಭಾಗಗಳನ್ನು ಪರೀಶೀಲಿಸಿದ ಐಜಿಪಿ, ದಾಖಲೆಗಳು, ಪ್ರಕರಣಗಳ ಪ್ರಗತಿ, ಸಿಬ್ಬಂದಿಗಳ ಕಾರ್ಯಪದ್ಧತಿ ಸೇರಿದಂತೆ ಹಲವು ವಿಚಾರಗಳನ್ನು ವಿಮರ್ಶಿಸಿದರು. ಭೇಟಿಯ ಸಂದರ್ಭದಲ್ಲಿ ಠಾಣೆಯ ಕಾರ್ಯವೈಖರಿ, ಕಾನೂನು ಸುವ್ಯವಸ್ಥೆಯ ಪರಿಸ್ಥಿತಿ ಹಾಗೂ ಸಾರ್ವಜನಿಕ ಸೇವೆಯ ಗುಣಮಟ್ಟ ಕುರಿತು ಅಧಿಕಾರಿಗಳೊಂದಿಗೆ ಐಜಿಪಿ ಚರ್ಚೆ ನಡೆಸಿದರು. ಠಾಣೆಯ ಶಿಷ್ಟಾಚಾರ, ಶಿಸ್ತು ಮತ್ತು ಸೌಕರ್ಯಗಳ ಕುರಿತು ಮಾರ್ಗದರ್ಶನ ನೀಡಿದ ಅವರು, ಉತ್ತಮ ಪೊಲೀಸ್ ಸೇವೆ ನೀಡುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು. ಹಲವು ಕಡತಗಳನ್ನ ಪರೀಶೀಲನೆ ಮಾಡಿರುವ ಅವರು ಹಳೆಯ ವಾಹನ, ಗಡಿಯಲ್ಲಿ ಕಳವು, ಕ್ರೈಮ್ ವಿಚಾರ ಹಾಗೂ ಅಕ್ರಮ ವಹಿವಾಟುಗಳ ಮೇಲೆ ಹದ್ದಿನ ಕಣ್ಣು ಇಡಲು ಸೂಚನೆ ನೀಡಿದರು.
ಈ ವೇಳೆ ಚಿಕ್ಕೋಡಿಯ ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ್ ಚಿಕ್ಕೋಡಿಯ ಸಿಪಿಐ ವಿಶ್ವನಾಥ್ ಚೌಗುಲೆ ಚಿಕ್ಕೋಡಿಯ ಪೊಲೀಸ್ ಠಾಣೆಯ ಪಿಎಸ್‌ಐ ಬಸಗೌಡ ನಿರ್ಲಿ ಅಂಕಲಿ ಪೊಲೀಸ್ ಠಾಣೆಯ ಪಿಎಸ್‌ಐ ನಂದೀಶ್ ಹಾಗೂ ಇನ್ನುಳಿದ ಅಧಿಕಾರಿಗಳು ಹಾಜರಿದ್ದರು.
ಈ ವೇಳೆ ಉತ್ತರ ವಲಯ ಐಜಿಪಿ ಚೇತನಸಿಂಗ್ ಠಾಕುರರವರಿಂದ ಅಂಕಲಿ ಪೊಲೀಸ್ ಠಾಣೆಯ ಆವರಣದಲ್ಲಿ ಸಸಿ ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 