ಸಮಾಜದ ಅಭಿವೃದ್ಧಿಗೆ ಶ್ರಮಿಸುವೆ: ಶಿವಾನಂದ ಹುನ್ನೂರ
I will work for the development of society: Shivananda Hunnur
ಸಮಾಜದ ಅಭಿವೃದ್ಧಿಗೆ ಶ್ರಮಿಸುವೆ: ಶಿವಾನಂದ ಹುನ್ನೂರ
ಮಹಾಲಿಂಗಪುರ 25: ಹಡಪದ ಅಪ್ಪಣ್ಣ ಸಮಾಜದ ಏಳಿಗೆ ಮತ್ತು ಸಂಘಟನೆ ಗಟ್ಟಿಗೊಳಿಸುವುದು ಅಷ್ಟೇ ಅಲ್ಲದೆ ಬೆಳಗಾವಿ ಜಿಲ್ಲೆಯ ಜೊತೆಗೆ ರಾಜ್ಯದ ತುಂಬಾ ಪ್ರವಾಸ ಮಾಡಿ ಸಮಾಜದ ಕುಂದು-ಕೊರತೆ ಕಂಡು ಹಿಡಿದು ಸಮಾಜದ ಸಲುವಾಗಿ ಹಗಲಿರುಳು ದುಡಿಯುವೆ ಎಂದು ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾಧ್ಯಕ್ಷ ಶಿವಾನಂದ ಹುನ್ನೂರ ಹೇಳಿದರು.
ರಬಕವಿ ನಗರದ ಪ್ರವಾಸಿ ರಂಗಮಂದಿರದಲ್ಲಿ ನೂತನ ಬೆಳಗಾವಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಂತರ ಭಾರತೀಯ ಏರ್ ಫೋರ್ಸ್ ಗ್ರೇಡ್-1 ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸುರೇಶ ನಾವಿ ಅವರನ್ನು ಸನ್ಮಾನಿಸಲಾಯಿತು.
ಹಡಪದ ಅಪ್ಪಣ್ಣ ಸಮಾಜ ಮುಖಂಡರಾದ ಬುದ್ಧಪ್ಪ ಕುಂದಗೋಳ, ಚಂದ್ರಶೇಖರ ಮಾಚಕನೂರ, ವಿನೋದ ಜಾಧವ, ಮಲ್ಲಪ್ಪ ನಾವಿ, ಅಶೋಕ ಹುನ್ನೂರು, ಶಂಕರ ಹಿಪ್ಪರಗಿ, ಶಿವಾನಂದ ನಾವಿ, ಮಹಾಂತೇಶ ಹಡಪದ, ಲಕ್ಕಪ್ಪ ನಾವಿ, ವಿಠ್ಠಲ ನಾವಿ, ಹಣಮಂತ ಉಮರಾಣಿ, ಮುತ್ತಪ್ಪ ಹಿಪ್ಪರಗಿ, ಬಸವರಾಜ ಹಾಲಹಳ್ಳಿ, ಜ್ಯೋತಿಬಾ ಜಾಧವ ಸೇರಿದಂತೆ ಅನೇಕರಿದ್ದರು. ಪತ್ರಕರ್ತ ಹಣಮಂತ ನಾವಿ ನಿರೂಪಿಸಿ, ವಂದಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 