ಛಾಯಾಚಿತ್ರ ಭವನ ನಿರ್ಮಾಣಕ್ಕೆ ಪ್ರಯತ್ನ ಮಾಡುತ್ತೇನೆ: ಗಣೇಶ ಹುಕ್ಕೇರಿ

ಛಾಯಾಚಿತ್ರ ಭವನ ನಿರ್ಮಾಣಕ್ಕೆ ಪ್ರಯತ್ನ ಮಾಡುತ್ತೇನೆ: ಗಣೇಶ ಹುಕ್ಕೇರಿ I will try to build a photography hall: Ganesh Hukkeri

ಛಾಯಾಚಿತ್ರ ಭವನ ನಿರ್ಮಾಣಕ್ಕೆ ಪ್ರಯತ್ನ ಮಾಡುತ್ತೇನೆ: ಗಣೇಶ ಹುಕ್ಕೇರಿ 

ಚಿಕ್ಕೋಡಿ 13: ಛಾಯಾಗ್ರಾಹಕರಿಗೆ ಎದುರಾಗಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಕಾರ್ಮಿಕ ಸಚಿವ ಸಂತೋಷ ಲಾಡ ಅವರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಾಗುತ್ತದೆ. ಚಿಕ್ಕೋಡಿ ನಗರದಲ್ಲಿ ಛಾಯಾಚಿತ್ರ ಭವನ ನಿರ್ಮಾಣಕ್ಕೆ ಪ್ರಯತ್ನ ಮಾಡುತ್ತೇನೆ ಎಂದು  ಶಾಸಕ ಗಣೇಶ ಹುಕ್ಕೇರಿ ಭರವಸೆ ನೀಡಿದರು. 

ತಾಲೂಕಾ ಛಾಯಾಗ್ರಾಹಕರ ಸಂಘ ಚಿಕ್ಕೋಡಿ ವತಿಯಿಂದ ಆಯೋಜಿಸಲಾದ 186ನೇ ಛಾಯಾಗ್ರಹಣ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.  

ಕರ್ನಾಟಕ ಛಾಯಾಗ್ರಾಹಕರ ಸಂಘದ ರಾಜ್ಯ ನಿರ್ದೇಶಕ ಮಲ್ಲಿಕಾರ್ಜುನ ಕೆ.ಆರ್‌. ಮಾತನಾಡಿ ಛಾಯಾಗ್ರಾಹಕರು ಅಸಂಘಟಿತ ಕಾರ್ಮಿಕರೆಂದು ಸರ್ಕಾರ ಗುರುತಿಸಿರುವುದು ಮಹತ್ವದ ಹೆಜ್ಜೆ. ಆದರೆ ವೃತ್ತಿ ಉಳಿವಿಗೆ ಅಕಾಡೆಮಿ ಅಗತ್ಯ. ತಂತ್ರಜ್ಞಾನ ಬೆಳೆದಂತೆ ಛಾಯಾಗ್ರಾಹಕರು ನವೀಕರಿಸಿಕೊಳ್ಳುವುದು ಕಾಲದ ಅವಶ್ಯಕತೆ ಎಂದು ಒತ್ತಿ ಹೇಳಿದರು. 

ಪುರಸಭೆ ಅಧ್ಯಕ್ಷೆ ಶ್ರೀಮತಿ ವೀಣಾ ಕವಟಗಿಮಠ ಮಾತನಾಡಿ ಛಾಯಾಗ್ರಾಹಕರು ತಮ್ಮ ಮಕ್ಕಳನ್ನು ಬೇರೆ ಬೇರೆ ಕಡೆ ತರಬೇತಿ ಕೊಡಿಸಿ ನುರಿತ ಪೋಟೋಗ್ರಾಪರ ಆಗಬೇಕು ಎಂದರು. 

ದಿವ್ಯ ಸಾನಿಧ್ಯವನ್ನು ಚರಮೂರ್ತಿಮಠದ ಸಂಪಾದನ ಸ್ವಾಮೀಜಿ, ಚಿಂಚಣಿ ಶಿವಪ್ರಸಾದ ದೇವರು ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಹಿರಿಯ ಛಾಯಾಗ್ರಾಹಕರಾದ ರಾಜು ಸಂಕೇಶ್ವರಿ ದಂಪತಿ ಮತ್ತು ವಿನೋದ ಪೋತದಾರ ದಂಪತಿಗಳನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.  

ವೇದಿಕೆ ಮೇಲೆ ಪುರಸಭೆ ಸದಸ್ಯ ಅನಿಲ ಮಾನೆ,  ಚಿಕ್ಕೋಡಿ ತಾಲೂಕಾ ಛಾಯಾಗ್ರಾಹಕರ ಅಧ್ಯಕ್ಷ ಶಂಕರ ಮಾನಗಾಂವಿ, ರಾಜ್ಯ ಸಂಘದ ನಿರ್ದೇಶಕರಾದ ಬಸವರಾಜ ರಾಮನ್ನವರ, ಸುರೇಶ ಬಾಳೋಜಿ, ಬೆಳಗಾವಿ ಅಧ್ಯಕ್ಷ ಲಕ್ಷ್ಮಣ ಯಮಕನಮರಡಿ, ಜಿಲ್ಲಾ ಕಾರ್ಯದರ್ಶಿ ರಾಜು ಸಂಕೇಶ್ವರಿ, ಸುರೇಶ ರಜಪೂತ, ಮಾರುತಿ ಫರಾಳೆ, ದಿಗಂಬರ ಕೋಳೆಕರ, ರಾಮಪ್ಪ ಹಾಲಟ್ಟಿ, ಮಾಚಿದೇವ ಬೋಸಲೆ, ಕಲ್ಲಪ್ಪ ಬಡಿಗೇರ, ಸುರೇಶ ಕೆಂಚಗೌಡ, ಸುನೀಲ ಪಾಟೀಲ, ರಾಜು ದೊಂಗಡಿ, ರಾಜು ಸಂಕಪಾಳ, ಪರುಶುರಾಮ ಕಮತೆ, ಮಹಾದೇವ ಪಾಟೀಲ, ಗಣಪತಿ ಹಿರೇಮಠ, ವಿಠ್ಠಲ ಜನವಾಡೆ, ಪ್ರಕಾಶ ಘೋರಪಡೆ ಮುಂತಾದವರು ಇದ್ದರು.