ಕ್ಷೇತ್ರ ಅಭಿವೃದ್ಧಿ ಮೂಲಕ ಋಣ ತೀರಿಸುತ್ತೇನೆ : ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್

 ಕ್ಷೇತ್ರ ಅಭಿವೃದ್ಧಿ ಮೂಲಕ ಋಣ ತೀರಿಸುತ್ತೇನೆ : ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ I will pay the debt through field development: MLA Yasir Ahmed Khan Pathan

ಲೋಕದರ್ಶನ ವರದಿ 


ಕ್ಷೇತ್ರ ಅಭಿವೃದ್ಧಿ ಮೂಲಕ ಋಣ ತೀರಿಸುತ್ತೇನೆ : ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ 


ಶಿಗ್ಗಾಂವಿ 20: ಜನಸೇವೆ ಮಾಡಲು ನನ್ನನ್ನು ಶಾಸಕನಾಗಿ ನನ್ನನ್ನು ಆಯ್ಕೆ ಮಾಡಿದ ನಿಮ್ಮೆಲ್ಲರ ಋಣವನ್ನು ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಮೂಲಕ ತೀರಿಸುತ್ತೇನೆ ಎಂದು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಹೇಳಿದರು. 

ತಾಲೂಕಿನ ಕುನ್ನೂರು ಗ್ರಾಮ ಪಂಚಾಯಿತಿ ವಿವಿಧ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ, ಗ್ರಾಮ ಪಂಚಾಯತ ಆವರಣದಲ್ಲಿ ಆಯೋಜಿಸಲಾದ   ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಮಾತನಾಡಿದರು. 

ಕ್ಷೇತ್ರದಲ್ಲಿ ಇನ್ನೂ ಸಾಕಷ್ಟು  ಅಭಿವೃದ್ಧಿ ಕೆಲಸ ಕಾರ್ಯಗಳು ಆಗಬೇಕಿದೆ, ಗ್ರಾಮಗಳಲ್ಲಿ ಸಂಚರಿಸುವಾಗ ಹಲವಾರು ಸಮಸ್ಯೆಗಳನ್ನಿಟ್ಟುಕೊಂಡು ಜನರು ಬೇಡಿಕೆ ಅರ್ಜಿ ಸಲ್ಲಿಸುತ್ತಿದ್ದಾರೆ ಇದನ್ನೆಲ್ಲಾ ನೋಡಿದಾಗ ಜನರ ಸಮಸ್ಯೆಗಳು ಸ್ಪಷ್ಟವಾಗಿ ಗೊತ್ತಾಗುತ್ತವೆ. ಸಕಾರದಿಂದ ಹೆಚ್ಚಿನ ಅನುದಾನ ತರುವ ಮೂಲಕ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತೇನೆ ಎಂದರು. 

ಸಾಮಾನ್ಯ ರೈತರ ಮಕ್ಕಳು, ಕಾರ್ಮಿಕರ ಮಕ್ಕಳು, ಬಡವರ ಮಕ್ಕಳಿಗೆ ಕನ್ನಡದೊಂದಿಗೆ ಇಂಗ್ಲಿಷ ಮಾಧ್ಯಮ ಶಿಕ್ಷಣವೂ ಸಿಗಬೇಕು ಎನ್ನುವ ದೃಷ್ಟಿಯಿಂದ ಶಿಕ್ಷಣದ ಮೇಲಿರುವ ಕಾಳಜಿಯಿಂದ ಇದೀಗ  3 ಕೆಪಿಎಸ್‌ಸಿ ಶಾಲೆಯನ್ನು ಮಂಜೂರಮಾಡಲಾಗಿದ್ದು ಇದರಲ್ಲಿ ಎಲ್‌ಕೆಜಿ ಯಂದ ಪಿಯುಸಿ ವರಗೂ ಇಂಗ್ಲಿಸ್ ಮಾದ್ಯಮದ ಶಾಲೆಯನ್ನು ಇಲ್ಲಿಯೇ ಕಲಿತು ಹೊರಗೆ ಬರುವಂತಹ ಶಾಲೆಯು ಇದಾಗಿದೆ ಕೋಣನಕೇರಿ, ಹಿರೇಬೆಂಡಿಗೇರಿ, ಮಾವೂರ ಮಂಜೂರಾಗಿದ್ದು ಸರ್ಕಾರಿ ಇಂಗ್ಲಿಷ ಮಾಧ್ಯಮ ಶಾಲೆಗಳನ್ನು ಮಂಜೂರಿಸಲಾಗಿದೆ. ಮುಂದಿನ ದಿನಮಾನಗಳಲ್ಲಿ ಗ್ರಾಮ ಪಂಚಾಯತಿಗೊಂದರಂತೆ ಸರ್ಕಾರಿ ಇಂಗ್ಲಿಷ ಮಾಧ್ಯಮ ಶಾಲೆ ತರುವ ಉದ್ದೇಶವಿದೆ ಎಂದರು. 

  ಬಸ್ ನಿಲ್ದಾಣ ಹಾಳಾಗಿದ್ದು ನೂತನ ಬಸ್ ನಿಲ್ದಾಣ, ಸ್ಥಳಿಯವಾಗಿ ಬ್ಯಾಂಕ್ ವ್ಯವಸ್ಥೆಯನ್ನು ಕಲ್ಪಿಸುವ ಹಾಗೂ ಹಾನಗಲ್ ಹುಬ್ಬಳ್ಳಿ ರಸ್ತೆಯ ಸ್ಮಶಾನದಿಂದ ಕಲಸಾರದವರೆಗೆ ಸಿಸಿ ಚರಂಡಿಯನ್ನು ನಿರ್ಮಿಸುವದು, ವಸತಿ ನಿಲಯವನ್ನು ಸೇರಿದಂತೆ ಇನ್ನೂ ಹಲವಾರು ಬೆಡಿಗಳಿಗೆ ತಾವು ಕೊಟ್ಟ ಮನವಿಗೆ ಹಂತ ಹಂತವಾಗಿ ಅಭಿವೃದ್ದಿಯನ್ನು ಪಡಿಸುವದಾಗಿ ಹೇಳಿದರು.   

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಗ್ರಾಮ ಪಂಚಾಯತಿ  ಅಧ್ಯಕ್ಷೆ ಮಂಜುಳಾ ಉಪ್ಪಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. 

ಇದೆ ಸಂದರ್ಭದಲ್ಲಿ  ಗ್ರಾಮದ ಚನ್ನವೀರಸ್ವಾಮಿ (ಚಿಮ್ಮೂ) ಹಿರೇಮಠ ಯುವ ಬಳಗದಿಂದ ಹಾಗೂ ಗ್ರಾಮ ಪಂಚಾಯತಿ ಪರವಾಗಿ  ಶಾಸಕರನ್ನು ಸನ್ಮಾನಿಸಿ ಗೌರವಿಸಿದರು. 

ತಾಲೂಕಾ ಗ್ಯಾರಂಟಿ ಯೋಜನೆಯ ತಾಲೂಕಾ ಅಧ್ಯಕ್ಷ ಎಸ್‌ಎಪ್‌.ಮಣಕಟ್ಟಿ, ಜಿಲ್ಲಾ ಉಪಾಧ್ಯಕ್ಷ ಗುಡ್ಡಪ್ಪ ಜಲದಿ, ಬಾಬರ ಬುವಾಜಿ, ಯುವ ಮುಖಂಡ ಆನಂದ ಲಮಾಣಿ, ಗ್ರಾ,ಪಂ ಸದಸ್ಯ ಡಿ.ಆರ್‌.ಬೊಮ್ಮನಳ್ಳಿ , ಮೈಲಾರೆಪ್ಪ ಇಂದೂರ, ಚಂದ್ರಣ್ಣಾ , ಜಿ.ಪಂ.ಮಾಜಿ ಸದಸ್ಯ ರಮೇಶ ದುಗ್ಗತ್ತಿ, ಅಣ್ಣಪ್ಪ ಲಮಾಣಿ, ಮಾಬೂಸಾಬ ಜೀಗಳೂರ, ನಾಷೀರಾಬಾನು ಬಂಕಾಪೂರ, ನಿಂಗಪ್ಪ ಮಾದರ, ಶಂಕರಗೌಡ (ಮುತ್ತು) ಬಿ.ಪಾಟೀಲ, ಸುಮಂತಗೌಡ ಪಾಟೀಲ, ಜೈಲಾನಿ ಮತ್ತೇಖಾನ, ಈರ​‍್ಪ ಗೋಣಿ, ಸುಬಾಸ ಮರಿಸಿದ್ದಣ್ಣವರ, ಅಬ್ಬಾಸಲಿ ಮತ್ತೇಖಾನ, ಅಸ್ಲಾಂ ತಡಸ, ಅನೀಸ್ ಬೊಮ್ಮನಲ್ಲಿ, ಅಬ್ದುಲ್ ಮತ್ತೇಖಾನ್, ಬಾಬೂಲಾಲ ತಡಸ, ಇಮಾಮಸಾಬ ಕುರಟ್ಟಿ, ರಾಯಪ್ಪ ಸಾವಂತಣ್ಣವರ, ಗ್ರಾ.ಪಂ.ಸಿಬ್ಬಂದಿ ವರ್ಗ ಸೇರಿದಂತೆ ಹಲವಾರು ಮುಖಂಡರು ಗ್ರಾಮಸ್ಥರು ಇದ್ದರು. 

ಗ್ರಾ.ಪಂ ಸದಸ್ಯ ಲಕ್ಮಣ್ಣಾ ಬೇಂಡಲಗಟ್ಟಿ ಪ್ರಾಸ್ಥಾವಿಕವಾಗಿ ಮಾತನಾಡಿದರೆ, ಮಲ್ಲಿಕಾರ್ಜುನ ಮಾಳೋಜನವರ ಕಾರ್ಯಕ್ರಮ ನಿರುಪಿಸಿದರು. 

ಕೋಟ್‌: ಶಿಗ್ಗಾಂವಿ- ಸವಣೂರ ಸಾಕಷ್ಟು ಅಭಿವೃದ್ದಿ ಹೊಂದಿದೆ ಎಂದು ಹೇಳುತ್ತಾರೆ ಪ್ರತಿಯೋಂದು ಕಾರ್ಯಕ್ರಮದಲ್ಲಿಯೂ ನೂರಾರು ಮನವಿಗಳು ಅಭಿವೃದ್ದಿಗಾಗಿ ಬರುತ್ತಿವೆ ಆದರೆ ಅಭಿವೃದ್ದಿ ಆಗಿದ್ದು ಎಲ್ಲಿ ಆಗಿದೆ, ಇನ್ನೂ  ಅಭಿವೃದ್ದಿಯನ್ನು ಮಾಡವರಿದ್ದು ಕೇಳಿದ್ದ ಕೆಲಸ ತಕ್ಷಣವಾಗಿ ಸ್ಪಂದಿಸುತ್ತೇನೆ.